ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಪರಿಸರ ಕಾರ್ಯಪಡೆ ಹಾಗೂ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಸಂಪರ್ಕ ಪಡೆಯ ಪ್ರಮುಖ ಆದ್ಯತೆಗಳ ಬಗ್ಗೆ ನವದೆಹಲಿಯಲ್ಲಿ 'ಬ್ರಿಕ್ಸ್' ಸದಸ್ಯ ದೇಶಗಳ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದರು

प्रविष्टि तिथि: 17 AUG 2026 11:40AM by PIB Bengaluru

ಭಾರತದ ಬ್ರಿಕ್ಸ್ ಅಧ್ಯಕ್ಷತೆ-2026ರ ಅಡಿಯಲ್ಲಿ, ಪರಿಸರ ಕಾರ್ಪಯಡೆ ಹಾಗೂ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಸಂಪರ್ಕ ಪಡೆಯ ಹಿರಿಯ ಅಧಿಕಾರಿಗಳ ಸಭೆಯು 2026ರ ಆಗಸ್ಟ್ 17ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ  ಕಾರ್ಯದರ್ಶಿ ಶ್ರೀ ತನ್ಮಯ್ ಕುಮಾರ್ ವಹಿಸಿದ್ದರು. ಫೆಡರೇಟಿವ್ ರಿಪಬ್ಲಿಕ್ ಆಫ್ ಬ್ರೆಜಿಲ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್, ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾ, ರಿಪಬ್ಲಿಕ್ ಆಫ್ ಇಂಡೋನೇಷ್ಯಾ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ರಷ್ಯಾ ಒಕ್ಕೂಟ, ದಕ್ಷಿಣ ಆಫ್ರಿಕಾ ಗಣರಾಜ್ಯ ಮತ್ತು ಸಂಯುಕ್ತ ಅರಬ್‌ ಸಂಸ್ಥಾನ ಸೇರಿದಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಕಲಾಪಗಳಲ್ಲಿ ಭಾಗವಹಿಸಿದ್ದವು.

ಕಳೆದ ಎರಡು ದಶಕಗಳಲ್ಲಿ, ಹೆಚ್ಚುತ್ತಿರುವ ಮಾಲಿನ್ಯ, ಜೀವವೈವಿಧ್ಯ ನಷ್ಟ ಮತ್ತು ಜಾಗತಿಕ ತಾಪಮಾನ ಏರಿಕೆಯ ಜಾಗತಿಕ ಸಮಸ್ಯೆಗಳು ಸೇರಿದಂತೆ ಪರಿಸರ ಎದುರಿಸುತ್ತಿರುವ ನಿರ್ಣಾಯಕ ಸವಾಲುಗಳಿಗೆ ತನ್ನ ಕಾರ್ಯವಿಧಾನವನ್ನು ವ್ಯಾಖ್ಯಾನಿಸಲು 'ಬ್ರಿಕ್ಸ್' ಒಕ್ಕೂಟವು ಆರ್ಥಿಕ ಸಂವಾದ ಮಟ್ಟದಿಂದ ಮತ್ತಷ್ಟು ಪ್ರಭಾವಶಾಲಿ ವೇದಿಕೆಯಾಗಿ ವಿಸ್ತರಿಸಿದೆ ಎಂದು ಅಧ್ಯಕ್ಷರು ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದರು. "ಸುಸ್ಥಿರ ಅಭಿವೃದ್ಧಿ, ಹವಾಮಾನ ಸದೃಢತೆ ಮತ್ತು ಹೊಂದಾಣಿಕೆ, ಸಂಪನ್ಮೂಲ ದಕ್ಷತೆ ಮತ್ತು ಆವರ್ತನ ಆರ್ಥಿಕತೆ ಹಾಗೂ ಪರಿಸರ ಆಡಳಿತಕ್ಕೆ ಪ್ರಸ್ತುತತೆಯ ದೃಷ್ಟಿಯಿಂದ ನಮ್ಮ ಪಾಲುದಾರಿಕೆ ವಿಸ್ತರಿಸಿದೆ," ಎಂದು ಅವರು ಹೇಳಿದರು.

'ಮಾನವೀಯತೆ ಮೊದಲು' ಕಾರ್ಯವಿಧಾನವನ್ನು ಮುಂಚೂಣಿಯಾಗಿ ಇರಿಸುವ ಮೂಲಕ ಜಾಗತಿಕ ಸಹಕಾರವು ಜನ ಕೇಂದ್ರಿತವಾಗಿರಬೇಕು ಎಂಬ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವು 'ಬ್ರಿಕ್ಸ್-2026’ಗೆ ಮಾರ್ಗದರ್ಶನ ನೀಡುತ್ತದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಈ ದೃಷ್ಟಿಕೋನವು ಅಧ್ಯಕ್ಷತೆಯ ಧ್ಯೇಯವಾಕ್ಯವಾದ 'ಸದೃಢತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ'ದಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಅಭಿವೃದ್ಧಿ ಉದ್ದೇಶಗಳೊಂದಿಗೆ ಪರಿಸರ ಸುಸ್ಥಿರತೆಯನ್ನು ಸಂಯೋಜಿಸುವ ವಿಧಾನಗಳ ಮೂಲಕ ಪರಿಸರ ಉಕ್ರಮವನ್ನು ಮುನ್ನಡೆಸಲು ಭಾರತ ಪ್ರಯತ್ನಿಸಿದೆ ಎಂದು ಹೇಳಲಾಗಿದೆ.

ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ, ಪರಿಸರ ಕಾರ್ಯಪಡೆ ಮತ್ತು ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂಪರ್ಕ ಪಡೆಯು ನಾಲ್ಕು ಪರಸ್ಪರ ಸಂಪರ್ಕಿತ ಆದ್ಯತೆಯ ಕ್ಷೇತ್ರಗಳಲ್ಲಿ ಒಟ್ಟಾಗಿ ಸಹಕಾರವನ್ನು ಮುಂದುವರಿದಿದೆ: ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವುದು; ಅರಣ್ಯೀಕರಣ, ಕಾಡ್ಗಿಚ್ಚು ನಿರ್ವಹಣೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ; ಆವೃತ್ತ ಆರ್ಥಿಕತೆ ಮತ್ತು ಹೊಂದಾಣಿಕೆ.

ಈ ಆದ್ಯತೆಗಳು 'ಬ್ರಿಕ್ಸ್' ದೇಶಗಳು ಎದುರಿಸುತ್ತಿರುವ ಹಂಚಿಕೆಯ ಪರಿಸರ ಸವಾಲುಗಳು ಮತ್ತು ಅವುಗಳನ್ನು ಪರಿಹರಿಸುವ ಸಾಮೂಹಿಕ ಬುದ್ಧಿವಂತಿಕೆ ಮತ್ತು ಶಕ್ತಿ ಎರಡನ್ನೂ ಪ್ರತಿಬಿಂಬಿಸುತ್ತವೆ ಎಂದು ಅಧ್ಯಕ್ಷರು ಹೇಳಿದರು. ಹವಾಮಾನ ಸ್ಥಿತಿಸ್ಥಾಪಕತ್ವ, ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ, ಸಂಪನ್ಮೂಲ ದಕ್ಷತೆ ಮತ್ತು ಸುಸ್ಥಿರ ಅಭಿವೃದ್ಧಿಯು ಆಳವಾಗಿ ಪರಸ್ಪರ ಸಂಬಂಧ ಹೊಂದಿರುವ ಸವಾಲುಗಳಾಗಿದ್ದು, ಪ್ರತ್ಯೇಕ ಮಧ್ಯಸ್ಥಿಕೆಗಳಿಗಿಂತ ಸಮಗ್ರ ಪ್ರತಿಕ್ರಿಯೆಗಳ ಅಗತ್ಯವಿದೆ ಎಂಬ ಸರ್ವಾನುಮತದ ಮಾನ್ಯತೆಯನ್ನು ಅವು ಪ್ರತಿಬಿಂಬಿಸುತ್ತವೆ.

ಭಾರತದ ಅಧ್ಯಕ್ಷತೆ ಪ್ರಾರಂಭವಾದಾಗಿನಿಂದ, ಸದಸ್ಯ ರಾಷ್ಟ್ರಗಳು 21 ವರ್ಚುವಲ್ ವಿಷಯಾಧಾರಿತ ಮತ್ತು ಸಮಾಲೋಚನಾ ಸಭೆಗಳು, 10 ದ್ವಿಪಕ್ಷೀಯ ಸಮಾಲೋಚನೆಗಳು, 2 ವಿಷಯಾಧಾರಿತ ಸಂವಾದಗಳು ಮತ್ತು 2 ತಾಂತ್ರಿಕ ವೆಬಿನಾರ್‌ಗಳ ಮೂಲಕ ತೊಡಗಿಸಿಕೊಂಡಿವೆ. ಇದು ಹಂಚಿಕೆಯ ಕಾರ್ಯಸೂಚಿಯನ್ನು ಮುಂದುವರಿಸುವ ಅಸಾಧಾರಣ ಮಟ್ಟದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಲಾಯಿತು. ಇಂದು ನಡೆಯುವ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪ್ರಮುಖ ಆದ್ಯತೆಗಳ ಬಗ್ಗೆ ಒಮ್ಮತವನ್ನು ನಿರ್ಮಿಸುವಲ್ಲಿ ಮ್ಯಾರಥಾನ್ ಚರ್ಚೆಗಳು ಕೊನೆಗೊಳ್ಳುತ್ತವೆ.

ಇಲ್ಲಿಯವರೆಗೆ ಸಾಮೂಹಿಕ ಸಂವಾದಗಳು ಮತ್ತು ಚರ್ಚೆಗಳಿಗೆ ಮಾರ್ಗದರ್ಶನ ನೀಡಿದ ಸಹಕಾರ ಮತ್ತು ಪರಸ್ಪರ ಗೌರವದ ಮನೋಭಾವವು ಇಂದಿನ ಚರ್ಚೆಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸವನ್ನು ಅಧ್ಯಕ್ಷರು ವ್ಯಕ್ತಪಡಿಸಿದರು. 12ನೇ ಬ್ರಿಕ್ಸ್ ಪರಿಸರ ಸಚಿವರ ಸಭೆ ನಾಳೆ ನವದೆಹಲಿಯಲ್ಲಿ ನಡೆಯಲಿದೆ.

ಭಾಗವಹಿಸಿದ'ಬ್ರಿಕ್ಸ್' ಸದಸ್ಯ ರಾಷ್ಟ್ರಗಳ ನಿಯೋಗಗಳು ಬ್ರಿಕ್ಸ್ ಅಧ್ಯಕ್ಷ ದೇಶವಾಗಿ ಭಾರತದ ಯಶಸ್ವಿ ನಾಯಕತ್ವಕ್ಕಾಗಿ ಕೋರಿದವು. ಜೊತೆಗೆ,  ಪರಸ್ಪರ ಗೌರವ, ನಂಬಿಕೆ ಮತ್ತು ಒಮ್ಮತ ಆಧಾರಿತ ನಿರ್ಧಾರ ತೆಗೆದುಕೊಳ್ಳುವ ವಾತಾವರಣದಲ್ಲಿ ಆದ್ಯತೆಯ ಕ್ಷೇತ್ರಗಳ ಬಗ್ಗೆ ಫಲಪ್ರದ ಚರ್ಚೆಗಳ ಮೂಲಕ ಪ್ರತಿ ಅಂಶವನ್ನು ಒಟ್ಟುಗೂಡಿಸಿದ್ದಕ್ಕಾಗಿ ಅಭಿನಂದಿಸಿದವು.

 

*****


(रिलीज़ आईडी: 2300347) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Punjabi , Gujarati , Tamil , Telugu , Malayalam