ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

2026ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣೆ ಹಾಗೂ ಕಾರಾಗೃಹ ಸೇವೆಗಳ ಒಟ್ಟು 1057 ಸಿಬ್ಬಂದಿಗೆ ಶೌರ್ಯ / ಸೇವಾ ಪದಕಗಳ ಪ್ರದಾನ

प्रविष्टि तिथि: 14 AUG 2026 8:59AM by PIB Bengaluru

2026ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ (ಹೆಚ್‌ಜಿ ಮತ್ತು ಸಿಡಿ) ಹಾಗೂ ಕಾರಾಗೃಹ /ಸುಧಾರಣಾ ಸೇವೆಗಳ ಒಟ್ಟು 1057 ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳನ್ನು ಪ್ರದಾನ ಮಾಡಲಾಗಿದೆ. ಅದರ ವಿವರ ಈ ಕೆಳಗಿನಂತಿದೆ:-

ಶೌರ್ಯ ಪದಕಗಳು

ಜೀವ ಮತ್ತು ಆಸ್ತಿಯನ್ನು ಉಳಿಸುವಲ್ಲಿ, ಅಥವಾ ಅಪರಾಧವನ್ನು ತಡೆಗಟ್ಟುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ ತೋರಿದ ವಿಶಿಷ್ಟ ಶೌರ್ಯದ ಕಾರ್ಯಕ್ಕಾಗಿ 'ಶೌರ್ಯ ಪದಕ' (ಜಿಎಂ) ನೀಡಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಯ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರು ಎದುರಿಸಿದ ಅಪಾಯವನ್ನು ಅಂದಾಜಿಸಿ ಈ ಪದಕ ನೀಡಲಾಗುತ್ತದೆ.

ಒಟ್ಟು 301 ಶೌರ್ಯ ಪದಕಗಳನ್ನು (ಜಿಎಂ) ಪ್ರದಾನ ಮಾಡಲಾಗಿದೆ. 301 ಶೌರ್ಯ ಪದಕಗಳ ಪೈಕಿ 272 ಪದಕಗಳನ್ನು ಪೊಲೀಸ್ ಸಿಬ್ಬಂದಿಗೆ ಮತ್ತು 29 ಪದಕಗಳನ್ನು ಅಗ್ನಿಶಾಮಕ ಸೇವಾ ಸಿಬ್ಬಂದಿಗೆ ನೀಡಲಾಗಿದೆ.

301 ಶೌರ್ಯ ಪ್ರಶಸ್ತಿಗಳ ಪೈಕಿ, ಬಹುಪಾಲನ್ನು ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳ 197 ಸಿಬ್ಬಂದಿಗೆ, ಜಮ್ಮು ಮತ್ತು ಕಾಶ್ಮೀರ ಪ್ರದೇಶದ 51 ಸಿಬ್ಬಂದಿಗೆ, ಈಶಾನ್ಯ ಭಾಗದ 12 ಸಿಬ್ಬಂದಿಗೆ ಮತ್ತು ಇತರ ಪ್ರದೇಶಗಳ 41 ಸಿಬ್ಬಂದಿಗೆ ಅವರ ಶೌರ್ಯದ ಕಾರ್ಯಗಳಿಗಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಸೇವಾ ಪದಕಗಳು

ಸೇವೆಯಲ್ಲಿನ ವಿಶೇಷವಾದ ಅಥವಾ ವಿಶಿಷ್ಟ ದಾಖಲೆಗಾಗಿ 'ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ' (ಪಿಎಸ್‌ಎಂ) ನೀಡಲಾಗುತ್ತದೆ. ಸಂಪನ್ಮೂಲ ಹಾಗೂ ಕರ್ತವ್ಯ ನಿಷ್ಠೆಯಿಂದ ಕೂಡಿದ ಮೌಲ್ಯಯುತ ಸೇವೆಗಾಗಿ 'ಶ್ಲಾಘನೀಯ ಸೇವಾ ಪದಕ'ವನ್ನು ಪ್ರದಾನ ಮಾಡಲಾಗುತ್ತದೆ.

ಒಟ್ಟು 92 ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಗಳನ್ನು (ಪಿಎಸ್‌ಎಂ) ಪ್ರದಾನ ಮಾಡಲಾಗಿದೆ. ಈ ಪೈಕಿ ಪೊಲೀಸ್ ಸೇವೆಗೆ 83, ಅಗ್ನಿಶಾಮಕ ಸೇವೆಗೆ 04, ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ದಳ ಸೇವೆಗೆ 03 ಹಾಗೂ ಕಾರಾಗೃಹ ಸೇವೆಗೆ 02 ಪದಕಗಳನ್ನು ನೀಡಲಾಗಿದೆ.

ಒಟ್ಟು 664 ʻಶ್ಲಾಘನೀಯ ಸೇವಾ ಪದಕʼಗಳನ್ನು (ಎಂಎಸ್‌ಎಂ) ಪ್ರದಾನ ಮಾಡಲಾಗಿದೆ. ಈ ಪೈಕಿ, ಪೊಲೀಸ್ ಸೇವೆಗೆ 606, ಅಗ್ನಿಶಾಮಕ ಸೇವೆಗೆ 28, ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ದಳ ಸೇವೆಗೆ 18 ಹಾಗೂ ಕಾರಾಗೃಹ ಸೇವೆಗೆ 12 ಪದಕಗಳನ್ನು ನೀಡಲಾಗಿದೆ.

ಸೇವೆವಾರು ಪ್ರದಾನ ಮಾಡಿದ ಪದಕಗಳ ವಿವರ

ಪದಕದ ಹೆಸರು

ಪೊಲೀಸ್ ಸೇವೆ

 

ಅಗ್ನಿಶಾಮಕ ಸೇವೆ

ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ಸೇವೆ

ಕಾರಾಗೃಹ ಸೇವೆ

ಒಟ್ಟು

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (ಪಿಎಸ್ಎಂ)

ಪ್ರದಾನ ಮಾಡಲಾದ ಒಟ್ಟು ಪದಕಗಳು: 92)

 

83

04

03

02

92

ಶ್ಲಾಘನೀಯ ಸೇವಾ ಪದಕ  (ಎಂಎಸ್ಎಂ)

(ಪ್ರದಾನ ಮಾಡಲಾದ ಒಟ್ಟು ಪದಕಗಳು: 664)

606

28

18

12

664

 

ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರಗಳನ್ನು ಈ ಕೆಳಗೆ ಲಗತ್ತಿಸಲಾಗಿದೆ:

ಕ್ರಮ ಸಂಖ್ಯೆ

ಪ್ರಶಸ್ತಿ

ಪ್ರಶಸ್ತಿ ಪುರಸ್ಕೃತರ ಸಂಖ್ಯೆ

ಅನುಬಂಧ

1

ಶೌರ್ಯ ಪದಕ (ಜಿಎಂ)

301

ಪಟ್ಟಿ-I

 

2

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (ಪಿಎಸ್ಎಂ)

92

ಪಟ್ಟಿ-II

3

ಶ್ಲಾಘನೀಯ ಸೇವಾ ಪದಕ (ಎಂಎಸ್ಎಂ)

664

ಪಟ್ಟಿ-III

 

4

ಪದಕ ಪುರಸ್ಕೃತರ ರಾಜ್ಯವಾರು/ಪಡೆವಾರು ಪಟ್ಟಿ

ಪಟ್ಟಿಯ ಪ್ರಕಾರ

ಪಟ್ಟಿ -IV

 

ಪಟ್ಟಿ-I ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪಟ್ಟಿ -II ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪಟ್ಟಿ -3 ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪಟ್ಟಿ-IV ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ವಿವರಗಳು www.mha.gov.in ಮತ್ತು https://awards.gov.in ನಲ್ಲಿ ಲಭ್ಯವಿದೆ.

 

*****


(रिलीज़ आईडी: 2299358) आगंतुक पटल : 8
इस विज्ञप्ति को इन भाषाओं में पढ़ें: Telugu , English , Malayalam , Urdu , हिन्दी , Marathi , Bengali , Punjabi , Gujarati