ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ನಾಳೆ ದೇಶವನ್ನುದ್ದೇಶಿಸಿ ಭಾರತದ ರಾಷ್ಟ್ರಪತಿ ಅವರ ಭಾಷಣ

ಪ್ರಕಟಣಾ ದಿನಾಂಕ: 13 AUG 2026 10:14PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ನಾಳೆ (ಆಗಸ್ಟ್ 14, 2026) ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಆಕಾಶವಾಣಿಯ ಎಲ್ಲಾ ರಾಷ್ಟ್ರೀಯ ಜಾಲಗಳಲ್ಲಿ ಮತ್ತು ದೂರದರ್ಶನದ ಎಲ್ಲಾ ವಾಹಿನಿಗಳಲ್ಲಿ ಈ ಭಾಷಣವು 19.00 ಗಂಟೆಯಿಂದ ಪ್ರಸಾರವಾಗಲಿದೆ. ಮೊದಲಿಗೆ ಹಿಂದಿ ಮತ್ತು ನಂತರ ಇಂಗ್ಲಿಷ್ ಅವತರಣಿಕೆ ಬಿತ್ತರವಾಗಲಿದೆ. ದೂರದರ್ಶನದಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಭಾಷಣದ ಪ್ರಸಾರದ ನಂತರ ದೂರದರ್ಶನ ಮತ್ತು ಆಕಾಶವಾಣಿಯ ಪ್ರಾದೇಶಿಕ ವಾಹಿನಿಗಳಲ್ಲಿ ಈ ಭಾಷಣದ ಪ್ರಾದೇಶಿಕ ಭಾಷಾ ಆವೃತ್ತಿ ಪ್ರಸಾರವಾಗಲಿದೆ. ಆಕಾಶವಾಣಿಯು ಪ್ರಾದೇಶಿಕ ಭಾಷಾ ಆವೃತ್ತಿಗಳನ್ನು 21.30 ಗಂಟೆಗೆ ತನ್ನ ಪ್ರಾದೇಶಿಕ ಜಾಲಗಳಲ್ಲಿ ಪ್ರಸಾರ ಮಾಡಲಿದೆ.

 

*****


(ಪ್ರಕಟಣೆ ಐ.ಡಿ.: 2299274) ವಿಸಿಟರ್ ಕೌಂಟರ್ : 127
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Bengali , Assamese , English , Urdu , हिन्दी , Manipuri , Punjabi , Gujarati