ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಭಾರತದ ಭೌಗೋಳಿಕ ಸೂಚಕ (ಜಿಐ) ಉತ್ಪನ್ನಗಳ ವಾಣಿಜ್ಯೀಕರಣ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ವೇಗಗೊಳಿಸಲು ಒಪ್ಪಂದಕ್ಕೆ ಸಹಿ ಹಾಕಿದ ʻಎಂಎಸ್ಎಂಇʼ ಸಚಿವಾಲಯ ಮತ್ತು ʻಡಿಪಿಐಐಟಿʼ


'ಭಾರತ್ ಜಿಐ' ಬ್ಯಾನರ್ ಬಿಡುಗಡೆ: ಪ್ರಾದೇಶಿಕ ʻಜಿಐʼ ಉತ್ಪನ್ನಗಳನ್ನು ʻಒಎನ್‌ಡಿಸಿʼ ಮತ್ತು ʻಜಿಇಎಂʼ ವೇದಿಕೆಗೆ ತರಲಿರುವ ʻಎಂಎಸ್ಎಂಇʼ ಸಚಿವಾಲಯ ಮತ್ತು ʻಡಿಪಿಐಐಟಿʼ

ಪ್ರಕಟಣಾ ದಿನಾಂಕ: 11 AUG 2026 11:55AM by PIB Bengaluru

ಭೌಗೋಳಿಕ ಸೂಚಕ (ಜಿಐ) ಉತ್ಪನ್ನಗಳಿಗೆ ಸಂಬಂಧಿಸಿದಂತೆ ಭಾರತವು ಹೊಂದಿರುವ ಶ್ರೀಮಂತ ಪಾರಂಪರಿಕ ಆರ್ಥಿಕ ಸಾಮರ್ಥ್ಯವನ್ನು ಅನಾವರಣಗೊಳಿಸುವ ಮಹತ್ವದ ಹೆಜ್ಜೆಯಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಸಚಿವಾಲಯ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಆಗಸ್ಟ್ 05, 2026 ರಂದು ನವದೆಹಲಿಯ ವಾಣಿಜ್ಯ ಭವನದಲ್ಲಿ ಒಡಂಬಡಿಕೆಗೆ ಸಹಿ ಹಾಕಿದವು. ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ʻಎಂಎಸ್ಎಂಇʼ ಸಚಿವಾಲಯದ ನಿರ್ದೇಶಕ ಮೊಹಮ್ಮದ್ ಸಾಲಿಕ್ ಪರ್ವೈಜ್ ಮತ್ತು ಡಿಪಿಐಐಟಿಯ ಐಪಿಆರ್ ವಿಭಾಗದ ನಿರ್ದೇಶಕ ಶ್ರೀ ಕರಣ್ ಥಾಪರ್ ಅವರು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.

 WhatsApp Image 2026-08-05 at 17.13.57 (1).jpeg WhatsApp Image 2026-08-05 at 17.13.57.jpeg

ʻಸರಕುಗಳ ಭೌಗೋಳಿಕ ಸೂಚಕಗಳು (ನೋಂದಣಿ ಮತ್ತು ರಕ್ಷಣೆ) ಕಾಯ್ದೆ-1999ʼರ ಅಡಿಯಲ್ಲಿ ಭಾರತದಲ್ಲಿ ಭೌಗೋಳಿಕ ಸೂಚಕಗಳ ನೋಂದಣಿ ಮತ್ತು ಕಾನೂನು ರಕ್ಷಣೆಗಾಗಿ ʻಡಿಪಿಐಐಟಿʼ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೇವೇಳೆ, ʻಎಂಎಸ್ಎಂಇʼ ಸಚಿವಾಲಯವು ದೇಶಾದ್ಯಂತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಸಾಂಪ್ರದಾಯಿಕ ಕೈಗಾರಿಕೆಗಳು ಮತ್ತು ಕುಶಲಕರ್ಮಿಗಳ ಬೆಳವಣಿಗೆ, ಆರ್ಥಿಕ ಆರೋಗ್ಯ ಮತ್ತು ಒಟ್ಟಾರೆ ಅಭಿವೃದ್ಧಿಯನ್ನು ಮುನ್ನಡೆಸುವ ʻನೋಡಲ್ʼ ಸಚಿವಾಲಯವಾಗಿದೆ. ʻಜಿಐʼಗಳ ಕಾನೂನುಬದ್ಧ ನೋಂದಣಿಯು ಪ್ರಾದೇಶಿಕ ಗುರುತನ್ನು ರಕ್ಷಿಸುತ್ತದೆಯಾದರೂ, ಅವುಗಳ ಆರ್ಥಿಕ ಮೌಲ್ಯವನ್ನು ಹೆಚ್ಚಿಸಲು ಈ ಉತ್ಪನ್ನಗಳನ್ನು ಸ್ಥಳೀಯ ಕರಕುಶಲ ವಸ್ತುಗಳಿಂದ ದೊಡ್ಡ ಮಟ್ಟದ, ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಮತ್ತು ರಫ್ತು-ಸನ್ನದ್ಧ ಉದ್ಯಮಗಳಾಗಿ ಪರಿವರ್ತಿಸಲು ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಉಭಯ ಇಲಾಖೆಗಳು ಗುರುತಿಸಿವೆ. ಈ ತಿಳಿವಳಿಕೆ ಒಪ್ಪಂದವು ಭಾರತೀಯ ʻಜಿಐʼ ಉತ್ಪನ್ನಗಳ ವಾಣಿಜ್ಯೀಕರಣ, ಗುಣಮಟ್ಟದ ಪ್ರಮಾಣೀಕರಣ ಮತ್ತು ಮಾರುಕಟ್ಟೆ ವ್ಯಾಪ್ತಿಯನ್ನು ವೇಗಗೊಳಿಸಲು ಸಹಯೋಗದ ಚೌಕಟ್ಟನ್ನು ಸ್ಥಾಪಿಸುತ್ತದೆ. ಆ ಮೂಲಕ ಸ್ಥಳೀಯ ಕುಶಲಕರ್ಮಿಗಳು, ನೇಕಾರರು ಮತ್ತು ಉತ್ಪಾದಕರ ಜೀವನೋಪಾಯವನ್ನು ಹೆಚ್ಚಿಸುತ್ತದೆ, ಜೊತೆಗೆ ದೇಶದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಜಂಟಿ ಉಪಕ್ರಮಗಳಾಗಿ, ಎರಡೂ ಇಲಾಖೆಗಳು ತಮ್ಮ ಕಾರ್ಯಕ್ರಮ ವಿನ್ಯಾಸ ಮತ್ತು ಮಧ್ಯಸ್ಥಿಕೆಗಳಲ್ಲಿ ಒಂದು ಜಿಲ್ಲೆ-ಒಂದು ಉತ್ಪನ್ನ(ಒಡಿಒಪಿ) ಸಂಯೋಜಿಸಲಿವೆ. ಇದಕ್ಕಾಗಿ ವಿಶೇಷವಾದ "ಭಾರತ್ ಜಿಐ" ಬ್ಯಾನರ್ ಅಡಿಯಲ್ಲಿ ಡಿಜಿಟಲ್ ಕಾಮರ್ಸ್‌ಗಾಗಿ ಓಪನ್ ನೆಟ್‌ವರ್ಕ್‌(ಒಎನ್‌ಡಿಸಿ) ಮತ್ತು ಸರ್ಕಾರಿ ಇ-ಮಾರುಕಟ್ಟೆ ವೇದಿಕೆಗೆ(ಜಿಇಎಂ) ʻಜಿಐʼ ಸಮೂಹಗಳು ಮತ್ತು ಅಧಿಕೃತ ಬಳಕೆದಾರರ ಸೇರ್ಪಡೆಯನ್ನು ಸುಗಮಗೊಳಿಸುತ್ತವೆ. ಆ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನಗಳಲ್ಲಿ ವಿಶೇಷ ʻಜಿಐ ಪೆವಿಲಿಯನ್ʼಗಳ ಸಹ-ಪ್ರಾಯೋಜಕತ್ವವನ್ನು ಸುಗಮಗೊಳಿಸುತ್ತವೆ.  ʻಜಿಐʼ ಉತ್ಪನ್ನಗಳ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಾಗಿ ಖರೀದಿದಾರ-ಮಾರಾಟಗಾರರ ಸಭೆಗಳು ಮತ್ತು ಪ್ರದರ್ಶನಗಳಿಗೂ ಇದು ಅನುವು ಮಾಡಿಕೊಡಲಿದೆ.

ಈ ತಿಳಿವಳಿಕೆ ಒಪ್ಪಂದವು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಬೌದ್ಧಿಕ ಆಸ್ತಿ ರಕ್ಷಣೆಗಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯದ (ಎಂಎಸ್ಎಂಇ) ಆದೇಶದೊಂದಿಗೆ ಉದ್ಯಮ ಅಭಿವೃದ್ಧಿಗೆ ಜೋಡಿಸುವ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ. ಈ ಸಹಯೋಗವು ಕುಶಲಕರ್ಮಿಗಳು, ನೇಕಾರರು ಮತ್ತು ಉತ್ಪಾದಕರ ಸಮೂಹಗಳಿಗೆ ಸಾಮರ್ಥ್ಯ ವರ್ಧನೆ, ಡಿಜಿಟಲ್ ಸಕ್ರಿಯಗೊಳಿಸುವಿಕೆ ಮತ್ತು ವಿಸ್ತೃತ ಮಾರುಕಟ್ಟೆ ಪ್ರವೇಶವನ್ನು ಸುಗಮಗೊಳಿಸುತ್ತದೆ. ಆ ಮೂಲಕ ಭಾರತದ ಭೌಗೋಳಿಕ ಸೂಚಕಗಳ (ಜಿಐ) ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿರೀಕ್ಷೆಯಿದೆ. ಇದು ಪ್ರೀಮಿಯಂ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ʻಜಿಐʼ ಉತ್ಪನ್ನಗಳ ಏಕೀಕರಣವನ್ನು ಮತ್ತಷ್ಟು ಬೆಂಬಲಿಸುತ್ತದೆ, ʻಆತ್ಮನಿರ್ಭರ ಭಾರತʼ ಮತ್ತು ʻವೋಕಲ್ ಫಾರ್ ಲೋಕಲ್ ʼ ಆಶಯಕ್ಕೆ ಕೊಡುಗೆ ನೀಡುತ್ತದೆ.

 

*****


(ಪ್ರಕಟಣೆ ಐ.ಡಿ.: 2297492) ವಿಸಿಟರ್ ಕೌಂಟರ್ : 85
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , Marathi , हिन्दी , Bengali , Bengali-TR , Punjabi , Tamil , Telugu , Malayalam