ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್ ನಲ್ಲಿ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯ; ಶಾಲಾ-ಕಾಲೇಜುಗಳಿಗೆ ಭೇಟಿ ನೀಡುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬುವಂತೆ ಕ್ರೀಡಾಪಟುಗಳಿಗೆ ಕರೆ
प्रविष्टि तिथि:
03 AUG 2026 2:14PM by PIB Bengaluru
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯ ಸೋಮವಾರ ಗ್ಲ್ಯಾಸ್ಗೋದಲ್ಲಿನಡೆದ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟಿಂಗ್ ಪದಕ ವಿಜೇತ ಭಾರತೀಯ ಪಟುಗಳನ್ನು ಸನ್ಮಾನಿಸಿ, ಅವರ ಐತಿಹಾಸಿಕ ಪ್ರದರ್ಶನವನ್ನು ಶ್ಲಾಘಿಸಿದರು. ಭಾರತೀಯ ವೇಟ್‌ಲಿಫ್ಟರ್‌ಗಳು 11 ವಿಭಾಗಗಳಲ್ಲಿ ಸ್ಪರ್ಧಿಸಿ ಎಂಟು ಪದಕಗಳೊಂದಿಗೆ - ಒಂದು ಚಿನ್ನ, ಆರು ಬೆಳ್ಳಿ ಮತ್ತು ಒಂದು ಕಂಚಿನ ಪದಕದೊಂದಿಗೆ ದೇಶಕ್ಕೆ ವಾಪಸ್ಸಾಗಿದ್ದಾರೆ. ಭಾರತೀಯ ತಂಡವು ಹಲವು ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಕಾಮನ್‌ವೆಲ್ತ್ ದಾಖಲೆಗಳನ್ನು ಸ್ಥಾಪಿಸಿತು, ಆದರೆ ಹಲವು ಕ್ರೀಡಾಪಟುಗಳು ವೈಯಕ್ತಿಕ ಅತ್ಯುತ್ತಮ ಭಾರವನ್ನು ಎತ್ತಿ ದಾಖಲೆಗಳನ್ನು ಮಾಡಿದರು.

ಭಾರತೀಯ ವೇಟ್‌ಲಿಫ್ಟರ್‌ಗಳು ದೇಶದ ಪ್ರಬಲ ಅಭಿಯಾನಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಗೌರವಾನ್ವಿತ ಸಚಿವರು ಚಿನ್ನದ ಪದಕ ವಿಜೇತರಿಗೆ 30 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 20 ಲಕ್ಷ ರೂ. ಮತ್ತು ಕಂಚಿನ ಪದಕ ವಿಜೇತರಿಗೆ 10 ಲಕ್ಷ ರೂ.ನಗದು ಪ್ರಶಸ್ತಿಗಳನ್ನು ನೀಡಿದರು.
ಭಾರತ ಎತ್ತುವ ಸ್ಪರ್ಧಿಗಳನ್ನು ಅಭಿನಂದಿಸಿದ ಡಾ. ಮಾಂಡವಿಯ, ಇಡೀ ರಾಷ್ಟ್ರವು ಅವರ ಸಾಧನೆಗಳನ್ನು ಸಂಭ್ರಮಿಸಿದೆ ಎಂದು ಹೇಳಿದರು. “ಸಂಸತ್ತಿನಲ್ಲಿಯೂ ಸಹ, ನೀವು ಪದಕಗಳನ್ನು ಗೆದ್ದಾಗಲೆಲ್ಲಾ ಘೋಷಣೆಗಳನ್ನು ಮಾಡಲಾಯಿತು. ಆ ಕ್ಷಣಗಳು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿತು’’ ಎಂದರು.

ಸಮ್ಮಾನ ಸಮಾರಂಭದಲ್ಲಿ ಸೋಮವಾರ ಹಾಜರಿದ್ದ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ವಿಜಯ್ ಶರ್ಮಾ ಸೇರಿದಂತೆ ಎಲ್ಲಾ ತರಬೇತುದಾರರಿಗೆ ಗೌರವ ಸಲ್ಲಿಸಿದ ಸಚಿವರು, ಚಾಂಪಿಯನ್‌ಗಳನ್ನು ರೂಪಿಸುವಲ್ಲಿ ಅವರ ಅಪ್ರತಿಮ ಪಾತ್ರದ ಕುರಿತು ಹೇಳಿದರು. "ಒಬ್ಬ ಕ್ರೀಡಾಪಟುವಿನ ಪಯಣದಲ್ಲಿ ಗುರುವಿಗೆ ದೊಡ್ಡ ಪಾತ್ರವಿದೆ. ಚಾಂಪಿಯನ್‌ಗಳನ್ನು ಸೃಷ್ಟಿಸುವಲ್ಲಿ ತರಬೇತುದಾರರ ಕೊಡುಗೆಗಿಂತ ದೊಡ್ಡದು ಏನೂ ಇಲ್ಲ" ಎಂದು ಅವರು ಹೇಳಿದರು.
ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಸತತ ಮೂರು ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ವೇಟ್‌ಲಿಫ್ಟರ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದರೆ, ರಿಷಿಕಾಂತ ಸಿಂಗ್ ಮತ್ತು ವಲ್ಲೂರಿ ಅಜಯ್ ಬಾಬು ಸ್ನ್ಯಾಚ್‌ನಲ್ಲಿ ಹೊಸ ಕಾಮನ್‌ವೆಲ್ತ್ ಕ್ರೀಡಾಕೂಟದ ದಾಖಲೆಗಳನ್ನು ಸ್ಥಾಪಿಸಿದರು. ಜ್ಞಾನೇಶ್ವರಿ ಯಾದವ್ ಮತ್ತು ಹರ್ಜಿಂದರ್ ಕೌರ್ ಸೇರಿದಂತೆ ಹಲವಾರು ಲಿಫ್ಟರ್‌ಗಳು ವೈಯಕ್ತಿಕ ಅತ್ಯುತ್ತಮ ಪ್ರದರ್ಶನಗಳನ್ನು ದಾಖಲಿಸಿದ್ದಾರೆ.
ಸ್ಪರ್ಧಿಸಿದ 11 ವೇಟ್‌ಲಿಫ್ಟರ್‌ಗಳಲ್ಲಿ ಆರು ಮಂದಿ ಖೇಲೋ ಇಂಡಿಯಾ ಅಥ್ಲೀಟ್‌ಗಳು (ಕೆಐಎಗಳು) ಆಗಿದ್ದಾರೆ. ಪದಕ ವಿಜೇತರಲ್ಲಿ, ಜ್ಞಾನೇಶ್ವರಿ ಖೇಲೋ ಇಂಡಿಯಾ ಕ್ರೀಡಾಪಟುವಾಗಿದ್ದರೆ, ಬಿಂದ್ಯಾರಾಣಿ ದೇವಿ, ಹರ್ಜಿಂದರ್ ಮತ್ತು ಇತರರು ಪಟಿಯಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ (ಎನ್ ಸಿಒಇ) ತರಬೇತಿ ಪಡೆಯುತ್ತಾರೆ, ಇದು ಭಾರತದ ತಳಮಟ್ಟದ ಮತ್ತು ಗಣ್ಯ ಕ್ರೀಡಾಪಟು ಅಭಿವೃದ್ಧಿ ಪರಿಸರ ವ್ಯವಸ್ಥೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕ್ರೀಡಾಪಟುಗಳು ಕ್ರೀಡೆಯ ರಾಯಭಾರಿಗಳಾಗಬೇಕೆಂದು ಕರೆ ನೀಡಿದ ಗೌರವಾನ್ವಿತ ಸಚಿವರು, ಯುವಜನರು ಕ್ರೀಡೆಗಳನ್ನು ಸ್ವೀಕರಿಸಲು ಪ್ರೇರೇಪಿಸಲು ವೇಟ್‌ಲಿಫ್ಟರ್‌ಗಳು ಶಾಲೆಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡಬೇಕೆಂದು ಆಗ್ರಹಿಸಿದರು. "ನಿಮ್ಮ ಕಥೆಗಳು ಸಾವಿರಾರು ಮಕ್ಕಳನ್ನು ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸಬಹುದು. ಒಟ್ಟಾರೆ ನಾವು ನಿಜವಾಗಿಯೂ ಕ್ರೀಡಾ ರಾಷ್ಟ್ರವನ್ನು ನಿರ್ಮಿಸುವತ್ತ ನಿರ್ಣಾಯಕ ಹೆಜ್ಜೆಗಳನ್ನು ಇಡುತ್ತಿದ್ದೇವೆ" ಎಂದು ಹೇಳಿದರು.
P4AE.jpeg)
ಡಾ. ಮಾಂಡವಿಯ ಅವರು ವೇಟ್‌ಲಿಫ್ಟರ್‌ಗಳೊಂದಿಗೆ ಅವರ ಹೋರಾಟಗಳು, ಪೋಡಿಯಂವರೆಗೆ ಹಾದಿ ಮತ್ತು ಭವಿಷ್ಯದ ಸ್ಪರ್ಧೆಗಳಿಗೆ, ವಿಶೇಷವಾಗಿ 2026ರ ಏಷ್ಯನ್ ಕ್ರೀಡಾಕೂಟದ ಆಕಾಂಕ್ಷೆಗಳ ಬಗ್ಗೆ ಸಂಭಾಷಣೆ ನಡೆಸಿದರು. ಕ್ರೀಡಾಪಟುಗಳು ಕಷ್ಟಗಳನ್ನು ನಿವಾರಿಸುವ ಕಥೆಗಳು, ರಾಷ್ಟ್ರೀಯ ತರಬೇತಿ ಶಿಬಿರಗಳ ಮೂಲಕ ಪಡೆದ ಬೆಂಬಲ, ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ವೈಜ್ಞಾನಿಕ ತರಬೇತಿ ಮತ್ತು ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆಲ್ಲುವುದನ್ನು ಮುಂದುವರಿಸುವ ಅವರ ದೃಢಸಂಕಲ್ಪವನ್ನು ಹಂಚಿಕೊಂಡರು.
ಪೋಡಿಂಗೆ ಕೂದಲೆಳೆಯಲ್ಲಿ ಅವಕಾಶ ವಂಚಿತರನ್ನು ಉದ್ದೇಶಿಸಿದ ಮಾತನಾಡಿದ ಡಾ. ಮಾಂಡವಿಯ ಅವರು ಧೈರ್ಯ ಕಳೆದುಕೊಳ್ಳದಂತೆ ಪ್ರೋತ್ಸಾಹಿಸಿದರು. "ಒಬ್ಬ ಕ್ರೀಡಾಪಟು ಎಂದಿಗೂ ನಿಜವಾಗಿಯೂ ಸೋಲುವುದಿಲ್ಲ. ಸುಧಾರಣೆ ಮುಂದುವರಿಸುವ ಉತ್ಸಾಹ ಮುಖ್ಯ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶೀರ್ವಾದ ಮತ್ತು 140 ಕೋಟಿ ಭಾರತೀಯರ ಬೆಂಬಲ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ನಾನು ನಂಬಿದ್ದೇನೆ’’ ಎಂದರು.
1BJU.jpeg)
ಭಾರತೀಯ ಕ್ರೀಡೆಗಳಿಗೆ ಸರ್ಕಾರದ ದೀರ್ಘಕಾಲೀನ ದೂರದೃಷ್ಟಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಡಾ. ಮಾಂಡವಿಯ, ಯುವ ಕ್ರೀಡಾಪಟುಗಳಿಗೆ ವಿಶ್ವ ದರ್ಜೆಯ ತರಬೇತಿ, ವೈಜ್ಞಾನಿಕ ಬೆಂಬಲ ಮತ್ತು ಸ್ಪರ್ಧಾತ್ಮಕ ಮಾನ್ಯತೆಯನ್ನು ಒದಗಿಸುವ ಖೇಲೋ ಇಂಡಿಯಾದಂತಹ ಉಪಕ್ರಮಗಳ ಮೂಲಕ ಅನೇಕ ಪದಕ ವಿಜೇತರು ಹೊರಹೊಮ್ಮಿದ್ದಾರೆ ಎಂದು ಹೇಳಿದರು. "ನಿಮ್ಮ ಸಾಮರ್ಥ್ಯವನ್ನು ನಂಬುವ ಕಾರಣ ದೇಶವು ನಿಮ್ಮಲ್ಲಿ ಹೂಡಿಕೆ ಮಾಡಿದೆ. ಭಾರತೀಯ ಕ್ರೀಡಾಪಟುಗಳು ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ವಿರುದ್ಧ ಸ್ಪರ್ಧಿಸಲು ಸಾಧ್ಯವಿರುವ ಪ್ರತಿಯೊಂದು ಸೌಲಭ್ಯ ನಿರ್ಮಿಸಲಾಗುತ್ತಿದೆ’’ ಎಂದು ಹೇಳಿದರು.
*****
(रिलीज़ आईडी: 2293741)
आगंतुक पटल : 22