ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ದ್ವಿಚಕ್ರ ವಾಹನಗಳ ರಸ್ತೆ ಆಂಬ್ಯುಲೆನ್ಸ್

प्रविष्टि तिथि: 03 AUG 2026 1:19PM by PIB Bengaluru

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದ್ವಿಚಕ್ರ ವಾಹನಗಳ ರಸ್ತೆ ಆಂಬ್ಯುಲೆನ್ಸ್‌ಗಳಿಗೆ ನಿಯಂತ್ರಣ ಚೌಕಟ್ಟನ್ನು ರೂಪಿಸಲು 1989 ರ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ದ್ವಿಚಕ್ರ ರಸ್ತೆ ಆಂಬ್ಯುಲೆನ್ಸ್ ವಾಹನಗಳು ಗ್ರಾಮೀಣ ಮತ್ತು ದೂರದ ಸ್ಥಳಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ತ್ವರಿತ ತುರ್ತು ಪ್ರತಿಕ್ರಿಯೆ ಮತ್ತು ವೈದ್ಯಕೀಯ ಆರೈಕೆಗೆ ಕೊನೆಯ ಮೈಲಿ ಸಂಪರ್ಕವನ್ನು ಬೆಂಬಲಿಸುತ್ತದೆ.

ಸದ್ಯ ದ್ವಿಚಕ್ರ ರಸ್ತೆ ಆಂಬ್ಯುಲೆನ್ಸ್‌ಗಳನ್ನು ಕೇಂದ್ರ ಮೋಟಾರು ವಾಹನ ನಿಯಮಗಳ ಅಡಿಯಲ್ಲಿ ವಿಶಿಷ್ಟ ವಾಹನ ವರ್ಗವಾಗಿ ನಿಯಂತ್ರಿಸಲಾಗುತ್ತಿಲ್ಲ. ಅದರ ಪರಿಣಾಮವಾಗಿ ಅವುಗಳನ್ನು ಸಿದ್ಧಪಡಿಸುವುದು, ಅವುಗಳ ಕಾರ್ಯಾಚರಣೆ ಸುರಕ್ಷತೆ, ರೋಗಿಯನ್ನು ನಿರ್ವಹಿಸುವ ವ್ಯವಸ್ಥೆಗಳು, ಅಂತಹ ವರ್ಗಗಳಿಗೆ ಅನುಮೋದನೆ, ನೋಂದಣಿ ಮತ್ತು ಫಿಟ್‌ನೆಸ್ ತಪಾಸಣೆಯನ್ನು ನಿಯಂತ್ರಿಸುವ ಯಾವುದೇ ರಾಷ್ಟ್ರೀಯ ಅವಶ್ಯಕತೆಗಳಿಲ್ಲ. ಉದ್ದೇಶಿತ ತಿದ್ದುಪಡಿಗಳು AIS-209 (ಭಾಗ 1):2026 - ಜೀವ ಬೆಂಬಲ ದ್ವಿಚಕ್ರ ವಾಹನಗಳ ರಸ್ತೆ ಆಂಬ್ಯುಲೆನ್ಸ್‌ಗಳನ್ನು ಸಿದ್ಧಪಡಿಸುವುದು ಮತ್ತು ಕಾರ್ಯಾಚರಣೆ ಅವಶ್ಯಕತೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಆ ಕೊರತೆಯನ್ನು ನಿವಾರಿಸಲಾಗುವುದು.

  • ಅನ್ವಯ: 2027ರ ಅಕ್ಟೋಬರ್ 1 ರಂದು ಅಥವಾ ಆನಂತರ ತಯಾರಿಸಲಾದ L2 ವರ್ಗದ ದ್ವಿಚಕ್ರ ರಸ್ತೆ ಆಂಬ್ಯುಲೆನ್ಸ್‌ಗಳು AIS-209 (ಭಾಗ 1):2026 ಅನ್ನು ಅನುಸರಿಸಲು ಪ್ರಸ್ತಾಪಿಸಲಾಗಿದೆ.

  • ತುರ್ತು ಟಾಪ್ ಲೈಟ್‌ಗಳು: ದ್ವಿಚಕ್ರ ರಸ್ತೆ ಆಂಬ್ಯುಲೆನ್ಸ್‌ಗಳಲ್ಲಿ ಅಳವಡಿಸಲಾದ ಟಾಪ್ ಲೈಟ್‌ಗಳು 1 ಅಕ್ಟೋಬರ್ 2027 ರಿಂದ AIS-209 (ಭಾಗ 1):2026 ಅನ್ನು ಅನುಸರಿಸಲು ಪ್ರಸ್ತಾಪಿಸಲಾಗಿದೆ.

  • ಕಾರ್ಯಾಚರಣೆಯ ಪ್ರದೇಶ: ಅಂತಹ ಆಂಬ್ಯುಲೆನ್ಸ್‌ಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಿದ ಪ್ರದೇಶಗಳಲ್ಲಿ ಸಂಚರಿಸಲು ನೋಂದಾಯಿಸಬಹುದು.

  • ಫಿಟ್‌ನೆಸ್ ಅವಶ್ಯಕತೆ: ದ್ವಿಚಕ್ರ ರಸ್ತೆ ಆಂಬ್ಯುಲೆನ್ಸ್‌ಗಳನ್ನು ಸಾರಿಗೆ ವಾಹನಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಫಿಟ್‌ನೆಸ್ ಅವಶ್ಯಕತೆಗಳಿಗೆ ಒಳಪಟ್ಟಿರುತ್ತದೆ, ಪ್ರತಿ ಎರಡು ವರ್ಷಗಳಿಗೊಮ್ಮೆ ಫಿಟ್‌ನೆಸ್ ಪ್ರಮಾಣಪತ್ರವನ್ನು ನವೀಕರಿಸಲಾಗುತ್ತದೆ.

  • ನಿರ್ದಿಷ್ಟ ತಪಾಸಣೆ ಪರಿಶೀಲನೆಗಳು: ಫಿಟ್‌ನೆಸ್ ಪರಿಶೀಲನೆಯು ಆಂಬ್ಯುಲೆನ್ಸ್ ಸಾಧನ ಅಥವಾ ರೋಗಿಯ-ಸಾಗಣೆ ಘಟಕದ ಸುರಕ್ಷಿತ ಆರೋಹಣವನ್ನು ಒಳಗೊಂಡಿರುತ್ತದೆ; ಟೈರ್‌ಗಳು ಮತ್ತು ರಿಮ್‌ಗಳು; ತುರ್ತು ಎಚ್ಚರಿಕೆ ದೀಪಗಳು; ರೋಗಿಯ ಸ್ಟ್ರೆಚರ್ ಮತ್ತು ಅದರ ಲಾಕಿಂಗ್ ಕಾರ್ಯವಿಧಾನ; ರೋಗಿಯ-ಸಂಯಮ ವ್ಯವಸ್ಥೆಗಳು; ಲೋಡ್ ಮತ್ತು ಇಳಿಸುವ ಕಾರ್ಯವಿಧಾನಗಳು; ಮತ್ತು ಅಗ್ನಿಶಾಮಕ ಯಂತ್ರದ ಲಭ್ಯತೆ, ಪ್ರವೇಶ ಸಾಧ್ಯತೆ ಮತ್ತು ಸಿಂಧುತ್ವ ಮತ್ತಿತರ ಅಂಶಗಳು ಒಳಗೊಂಡಿವೆ.

ಸುರಕ್ಷತೆ ಮತ್ತು ಕಾರ್ಯಾಚರಣೆ ಚೌಕಟ್ಟು: AIS-209 (ಭಾಗ 1): 2026 ದ್ವಿಚಕ್ರ ರಸ್ತೆ ಆಂಬ್ಯುಲೆನ್ಸ್ ಅನ್ನು ಆಂಬ್ಯುಲೆನ್ಸ್ ಪರಿಕರ ಘಟಕ ಅಥವಾ ರೋಗಿ-ಸಾಗಣೆ ವ್ಯವಸ್ಥೆಯೊಂದಿಗೆ ಅಳವಡಿಸಲಾದ ಅಥವಾ ಜೋಡಿಸಲಾದ L2-ವರ್ಗದ ವಾಹನ ಎಂದು ವ್ಯಾಖ್ಯಾನಿಸುತ್ತದೆ. ಮಾನದಂಡವು ವಾಹನದ ಸ್ಥಿರತೆ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ, ಪಾರ್ಕಿಂಗ್ ಬ್ರೇಕ್ ಮತ್ತು ಶ್ರೇಣೀಕರಣದ ಅವಶ್ಯಕತೆಗಳು, ಹಿಂಭಾಗದ ಗೋಚರತೆ, ಜೋಡಣೆಯ ಸಮಗ್ರತೆ, ತುರ್ತು ಗೋಚರತೆ ಮತ್ತು ಎಚ್ಚರಿಕೆ ಸಾಧನಗಳು ಮತ್ತು ಸುರಕ್ಷಿತ ರೋಗಿಯ ಆಂಬ್ಯುಲೆನ್ಸ್ ಒಳಗೆ ಕರೆದೊಯ್ಯುವುದು, ಸಂಯಮ ಮತ್ತು ಪರಿಸರ ಒಡ್ಡುವಿಕೆಯಿಂದ ರಕ್ಷಣೆ ಸೇರಿದಂತೆ ಪ್ರಮುಖ ಉತ್ಪಾದನೆ ಮತ್ತು ಕಾರ್ಯಾಚರಣೆ ಸುರಕ್ಷತೆಗಳನ್ನು ಒದಗಿಸುತ್ತದೆ.

ಉದ್ದೇಶಿತ ಚೌಕಟ್ಟು ದ್ವಿಚಕ್ರ ರಸ್ತೆ ಆಂಬ್ಯುಲೆನ್ಸ್‌ಗಳ ವಿನ್ಯಾಸ ಮತ್ತು ಕಾರ್ಯಾಚರಣೆಗೆ ಹೆಚ್ಚಿನ ಸುರಕ್ಷತೆ ಮತ್ತು ಹೊಣೆಗಾರಿಕೆಯನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ವೇಗವಾದ ತುರ್ತು ಪ್ರತಿಕ್ರಿಯೆಯನ್ನು ಬೆಂಬಲಿಸುತ್ತದೆ ಮತ್ತು ಸಾಂಪ್ರದಾಯಿಕ ಆಂಬ್ಯುಲೆನ್ಸ್‌ಗಳು ಚಲನಶೀಲತೆ ಅಥವಾ ಪ್ರವೇಶ ನಿರ್ಬಂಧಗಳನ್ನು ಎದುರಿಸಬಹುದಾದ ಸ್ಥಳಗಳಲ್ಲಿ ತುರ್ತು ವೈದ್ಯಕೀಯ ಆರೈಕೆ ಸೇವೆಯನ್ನು ಸುಧಾರಿಸುತ್ತದೆ.

ಕರಡು ಅಧಿಸೂಚನೆ ಇಂದು ಪ್ರಕವಾಗಿದ್ದು, ಆನಂತರ 30 ದಿನಗಳ ಅವಧಿ ಮುಗಿದ ನಂತರ ಕರಡು ನಿಯಮಗಳ ಮೇಲಿನ ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ನಂತರ ಕೇಂದ್ರ ಮೋಟಾರು ವಾಹನ ನಿಯಮಗಳು, 1989 (ಸಿವಿಎಂಆರ್ 1989) ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಲಾಗುವುದು.

 

*****


(रिलीज़ आईडी: 2293714) आगंतुक पटल : 24
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Bengali-TR , Gujarati , Tamil , Telugu