ಗ್ರಾಮೀಣಾಭಿವೃದ್ಧಿ ಸಚಿವಾಲಯ
ಕೌಶಲ್ಯದಿಂದ ರಾಷ್ಟ್ರೀಯ ಗೌರವದೆಡೆಗೆ: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಅತಿಥಿಗಳಾಗಿ ಆರು ಡಿಡಿಯು-ಜಿಕೆವೈ ಯುವಕರಿಗೆ ಆಹ್ವಾನ
प्रविष्टि तिथि:
03 AUG 2026 11:32AM by PIB Bengaluru
ಗ್ರಾಮೀಣ ಕೌಶಲ್ಯಾಭಿವೃದ್ಧಿಯ ಪರಿವರ್ತನಾತ್ಮಕ ಪರಿಣಾಮವನ್ನು ಗುರುತಿಸುವ ನಿಟ್ಟಿನಲ್ಲಿ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಒಡಿಶಾ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಪ್ರತಿನಿಧಿಸುವ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ (ಡಿಡಿಯು-ಜಿಕೆವೈ) ಆರು ಫಲಾನುಭವಿಗಳನ್ನು 2026ರ ಆಗಸ್ಟ್ 15 ರಂದು ನವದೆಹಲಿಯಲ್ಲಿ ನಡೆಯಲಿರುವ ಭಾರತದ 80 ನೇ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ.
ಆಯ್ದ ಫಲಾನುಭವಿಗಳು ಕೆಂಪು ಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಮತ್ತು ರಾಷ್ಟ್ರಪತಿ ಭವನದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಆಯೋಜಿಸಿರುವ ಪ್ರತಿಷ್ಠಿತ 'ಆಟ್ ಹೋಮ್' ಭೋಜನಕೂಟದಲ್ಲಿ ಭಾಗವಹಿಸಲು ಇಂಡಿಯಾ ಪೋಸ್ಟ್ ಮೂಲಕ ಅಧಿಕೃತ ಆಹ್ವಾನ ಪತ್ರಗಳನ್ನು ಸ್ವೀಕರಿಸಿದ್ದಾರೆ. ಈ ಗೌರವವು ಅವರ ವೈಯಕ್ತಿಕ ಸಾಧನೆಗಳ ಗುರುತಿಸುವಿಕೆ ಮಾತ್ರವಲ್ಲ, ಕೌಶಲ್ಯ, ಸುಸ್ಥಿರ ಜೀವನೋಪಾಯ ಮತ್ತು ಗೌರವಯುತ ಉದ್ಯೋಗದ ಮೂಲಕ ಡಿಡಿವೈ-ಜಿಕೆವೈ ಆಧರಿಸಿದ ಪರಿವರ್ತನೆಯ ರಾಷ್ಟ್ರೀಯ ಮನ್ನಣೆಯಾಗಿದೆ.

ಯುವಕರು ಕೆಂಪು ಕೋಟೆಯಲ್ಲಿ ನಡೆಯುವ ರಾಷ್ಟ್ರೀಯ ಸಮಾರಂಭವನ್ನು ವೀಕ್ಷಿಸಲಿದ್ದಾರೆ ಮತ್ತು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಪ್ರತಿಷ್ಠಿತ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಅವರ ಉಪಸ್ಥಿತಿಯು ಗ್ರಾಮೀಣ ಕೌಶಲ್ಯ ಪರಿಸರ ವ್ಯವಸ್ಥೆಗೆ ಮತ್ತು ಡಿಡಿಯು-ಜಿಕೆವೈ ಮೂಲಕ ಹೊರಹೊಮ್ಮಿದ ಯುವ ಸಾಧಕರಿಗೆ ಹೆಮ್ಮೆಯ ಕ್ಷಣವಾಗಿದೆ

ಡಿಡಿಯು-ಜಿಕೆವೈ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಪ್ರಮುಖ ಉದ್ಯೋಗ-ಸಂಬಂಧಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಗ್ರಾಮೀಣ ಬಡ ಯುವಕರಿಗೆ ಉದ್ಯಮ-ಸಂಬಂಧಿತ ಕೌಶಲ್ಯಗಳು, ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಪ್ರಮಾಣೀಕರಣಗಳು ಮತ್ತು ಸುಸ್ಥಿರ ಮತ್ತು ಗೌರವಯುತ ಉದ್ಯೋಗಾವಕಾಶಗಳಿಗೆ ಅವಕಾಶವನ್ನು ಒದಗಿಸುತ್ತದೆ.

ಡಿಡಿಯು-ಜಿಕೆವೈ ಮೂಲಕ, ದೇಶಾದ್ಯಂತ ಲಕ್ಷಾಂತರ ಗ್ರಾಮೀಣ ಯುವಕರು ದೀರ್ಘಾವಧಿಯ ಜೀವನೋಪಾಯದ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈ ಕಾರ್ಯಕ್ರಮವು ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು, ಸ್ವಾವಲಂಬಿಗಳಾಗಿ ಮತ್ತು ಭಾರತದ ಬೆಳವಣಿಗೆಯ ಕಥೆಗೆ ಸಕ್ರಿಯ ಕೊಡುಗೆ ನೀಡುವವರನ್ನಾಗಿ ಮಾಡಲು ಅನುವು ಮಾಡಿಕೊಟ್ಟಿದೆ.

ಈ ಆರು ಫಲಾನುಭವಿಗಳಿಗೆ ನೀಡಲಾದ ಆಹ್ವಾನವು ಕೌಶಲ್ಯಪೂರ್ಣ ಕಾರ್ಯಪಡೆ ಸೃಷ್ಟಿಸುವಲ್ಲಿ ಮತ್ತು ಸುಸ್ಥಿರ ಜೀವನೋಪಾಯ ಉತ್ತೇಜಿಸುವಲ್ಲಿ ಯೋಜನೆಯ ಯಶಸ್ಸಿಗೆ ದೊರೆತ ರಾಷ್ಟ್ರೀಯ ಮನ್ನಣೆಯಾಗಿದೆ. ಕೌಶಲ್ಯಾಭಿವೃದ್ಧಿಯು ಉದ್ಯೋಗವನ್ನು ಮೀರಿ ಹೋಗುತ್ತದೆ ಎಂಬುದನ್ನು ಇದು ಪ್ರದರ್ಶಿಸುತ್ತದೆ - ಇದು ಗ್ರಾಮೀಣ ಯುವಕರಿಗೆ ಗೌರವಯುತ ವೃತ್ತಿಜೀವನ, ಆರ್ಥಿಕ ಸ್ವಾತಂತ್ರ್ಯ ಮತ್ತು ಹೆಚ್ಚು ಸುರಕ್ಷಿತ ಭವಿಷ್ಯ ಒದಗಿಸುವತ್ತ ಅನುವು ಮಾಡಿಕೊಡುತ್ತದೆ.
ಈ ಸಾಧನೆಯು ಆಯ್ದ ಫಲಾನುಭವಿಗಳ ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮವನ್ನು ಹಾಗೂ ಆಯಾ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳು (ಎಸ್ ಆರ್ ಎಲ್ ಎಂಗಳು), ಯೋಜನಾ ಅನುಷ್ಠಾನ ಸಂಸ್ಥೆಗಳು (ಪಿಐಎ ಗಳು) ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಾಮೂಹಿಕ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.
ಈ ಗೌರವವು ಭಾರತದಾದ್ಯಂತ ಲಕ್ಷಾಂತರ ಗ್ರಾಮೀಣ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಕೌಶಲ್ಯಗಳು ಅವಕಾಶಗಳನ್ನು ಸೃಷ್ಟಿಸುತ್ತವೆ, ಸುಸ್ಥಿರ ಜೀವನೋಪಾಯಗಳಲ್ಲಿ ಸ್ವಾವಲಂಬನೆ ರೂಪಿಸುತ್ತದೆ ಮತ್ತು ಸಬಲೀಕೃತ ಯುವಕರು ವಿಕಸಿತ ಭಾರತದತ್ತ ಪಯಣವನ್ನು ಮತ್ತಷ್ಟು ವೇಗಗೊಳಿಸುತ್ತಾರೆಂಬ ದೂರದೃಷ್ಟಿಯನ್ನು ಬಲಪಡಿಸುತ್ತದೆ.
*****
(रिलीज़ आईडी: 2293711)
आगंतुक पटल : 8