ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

37ನೇ ʻಅಂತಾರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್‌ʼಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ

प्रविष्टि तिथि: 19 JUL 2026 7:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಿಥುವೇನಿಯಾದ ವಿಲ್ನಿಯಸ್‌ನಲ್ಲಿ ನಡೆದ 37ನೇ ʻಅಂತಾರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್ʼನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತೀಯ ತಂಡವನ್ನು ಅಭಿನಂದಿಸಿದರು. ಪಂದ್ಯದಲ್ಲಿ ತಂಡದ ಎಲ್ಲಾ ನಾಲ್ವರು ಸದಸ್ಯರು ಒಂದು ಚಿನ್ನದ ಪದಕ ಸೇರಿದಂತೆ ಹಲವು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಭವ್ಯಾ ಗುನ್ವಾಲ್, ಸೌಮಿಲ್ ಮೈಟಿ, ನಿಶಿತ್ ಕಲಾನಿ ಮತ್ತು ಅನ್ಮೋಲ್ ಕುಮಾರ್ ಅವರು ಆಣ್ವಿಕ ಜೀವಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ, ಸಿಸ್ಟಮ್ಯಾಟಿಕ್ಸ್ ಮತ್ತು ಸಸ್ಯ ಕಂಪ್ಯೂಟೇಶನಲ್ ಜೀವಶಾಸ್ತ್ರದಂತಹ ವಿಷಯಗಳ ಬಗ್ಗೆ ಅಪಾರ ಜ್ಞಾನವನ್ನು ಪ್ರದರ್ಶಿಸಿದರು. ಅವರ ಯಶಸ್ಸು ಇನ್ನೂ ಹಲವಾರು ಯುವಕರನ್ನು ಪ್ರೋತ್ಸಾಹಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿಯವರು ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:

ಲಿಥುವೇನಿಯಾದ ವಿಲ್ನಿಯಸ್ನಲ್ಲಿ ನಡೆದ 37ನೇ ʻಅಂತಾರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್ʼನಲ್ಲಿ ಭಾರತದ ನಾಲ್ವರು ಸದಸ್ಯರ ತಂಡವು ಒಂದು ಚಿನ್ನ ಸೇರಿದಂತೆ ಪದಕಗಳನ್ನು ಗೆದ್ದಿರುವುದು ಬಹಳ ಸಂತೋಷದ ವಿಷಯವಾಗಿದೆ.

ಒಲಿಂಪಿಯಾಡ್‌ನಲ್ಲಿ ಯಶಸ್ಸಿಗಾಗಿ ಭವ್ಯಾ ಗುನ್ವಾಲ್, ಸೌಮಿಲ್ ಮೈಟಿ, ನಿಶಿತ್ ಕಲಾನಿ ಮತ್ತು ಅನ್ಮೋಲ್ ಕುಮಾರ್ ಅವರ ಬಗ್ಗೆ ಹೆಮ್ಮೆ ಮೂಡಿದೆ. ಅವರು ಆಣ್ವಿಕ ಜೀವಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ, ಪ್ರಾಣಿ ಶರೀರಶಾಸ್ತ್ರ, ಪ್ರಾಣಿ ರೂಪಶಾಸ್ತ್ರ ಮತ್ತು ಸಿಸ್ಟಮ್ಯಾಟಿಕ್ಸ್ ಮತ್ತು ಸಸ್ಯ ಕಂಪ್ಯೂಟೇಶನಲ್ ಜೀವಶಾಸ್ತ್ರದಂತಹ ವಿಷಯಗಳ ಬಗ್ಗೆ ಅಪಾರ ಜ್ಞಾನವನ್ನು ಪ್ರದರ್ಶಿಸಿದ್ದಾರೆ.

ಯಶಸ್ಸು ಮತ್ತಷ್ಟು ಯುವಕರನ್ನು ಪ್ರೋತ್ಸಾಹಿಸುತ್ತದೆ ಎಂಬ ಖಾತರಿ ನನಗಿದೆ.

 

*****


(रिलीज़ आईडी: 2286473) आगंतुक पटल : 18
इस विज्ञप्ति को इन भाषाओं में पढ़ें: Marathi , Telugu , Malayalam , Bengali , Assamese , Odia , English , Urdu , हिन्दी , Manipuri , Punjabi , Gujarati