ರೈಲ್ವೇ ಸಚಿವಾಲಯ
ಭಾರತದ ಮೊದಲ ಹೈಡ್ರೋಜನ್ ಇಂಧನ ಕೋಶ ಚಾಲಿತ ರೈಲು ಸುಮಾರು 2,600 ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಸುಸ್ಥಿರ ರೈಲು ಚಲನಶೀಲತೆಯನ್ನು ಮರು ವ್ಯಾಖ್ಯಾನಿಸಲು ಸಿದ್ಧವಾಗಿದೆ
ಹೊಗೆರಹಿತ ಹೈಡ್ರೋಜನ್ ಮ್ಯಾಜಿಕ್ ಹೊಸ ಯುಗದ ರೈಲಿಗೆ ಶಕ್ತಿ ತುಂಬಿ ಹಸಿರು ಭಾರತೀಯ ರೈಲ್ವೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ
ಹೈಡ್ರೋಜನ್ ಸೋರಿಕೆ, ಶಾಖ, ಜ್ವಾಲೆ ಮತ್ತು ಹೊಗೆಯನ್ನು ಪತ್ತೆ ಮಾಡುವ ಬಹು-ಹಂತದ ಸುರಕ್ಷತಾ ವ್ಯವಸ್ಥೆಗಳೊಂದಿಗೆ, ರೈಲು ಸುರಕ್ಷಿತವೆಂದು ಪ್ರಮಾಣೀಕರಿಸಲ್ಪಟ್ಟಿದೆ
प्रविष्टि तिथि:
16 JUL 2026 11:14AM by PIB Bengaluru
ಭಾರತೀಯ ರೈಲ್ವೆ ಭಾರತದ ಮೊದಲ ಹೈಡ್ರೋಜನ್ ಇಂಧನ ಕೋಶ ರೈಲಿಗೆ ಹಸಿರು ನಿಶಾನೆ ತೋರಲು ಸಜ್ಜಾಗಿದೆ, ಇದು ಸದ್ಯ ಗೊತ್ತಿರುವ ಅತ್ಯಂತ ಶುದ್ಧ ಇಂಧನವಾದ ಹೈಡ್ರೋಜನ್ ಬಳಸಿಕೊಂಡು ತನ್ನದೇ ಆದ ವಿದ್ಯುತ್ ತನ್ನಲ್ಲಿ ಉತ್ಪಾದಿಸುವ ರೈಲು. ಬಳಕೆಯ ಹಂತದಲ್ಲಿ ಇದರ ಹೊರಸೂಸುವಿಕೆಯು ಶೂನ್ಯಮಟ್ಟದಲ್ಲಿರುತ್ತದೆ. ಭಾರತೀಯ ರೈಲ್ವೆ ತನ್ನ ರೈಲುಗಳಿಗೆ ಹೇಗೆ ಶಕ್ತಿ ತುಂಬಿದೆ ಎಂಬುದರ ವಿಕಾಸದ ಇತ್ತೀಚಿನ ಅಧ್ಯಾಯವನ್ನು ಈ ಮೈಲಿಗಲ್ಲು ಗುರುತಿಸುತ್ತದೆ, ಇದು ಕಲ್ಲಿದ್ದಲು ಮತ್ತು ಉಗಿಯಿಂದ ಸ್ವಚ್ಛ, ಹೆಚ್ಚು ಸುಸ್ಥಿರ ಇಂಧನ ಮೂಲಗಳತ್ತ ಭಾರತದ ವಿಶಾಲ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ.
ಕಳೆದ 12 ವರ್ಷಗಳಲ್ಲಿ, ತ್ವರಿತ ವಿದ್ಯುದ್ದೀಕರಣವು ಆಮದು ಮಾಡಿಕೊಂಡ ಡೀಸೆಲ್ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ, ಇದು ಸ್ವಚ್ಚ ರೈಲು ಚಲನಶೀಲತೆಯಲ್ಲಿ ಮುಂದಿನ ನೆಗೆತಕ್ಕೆ ದಾರಿ ಮಾಡಿಕೊಟ್ಟಿದೆ. ಇಂದು, 99% ಕ್ಕಿಂತ ಹೆಚ್ಚು ಬ್ರಾಡ್ ಗೇಜ್ ಮಾರ್ಗಗಳನ್ನು ವಿದ್ಯುದ್ದೀಕರಿಸಿದ ನಂತರ, ಭಾರತೀಯ ರೈಲ್ವೆ ಆ ಪ್ರಯಾಣದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಡುತ್ತಿದೆ. ಓವರ್‌ಹೆಡ್ ಲೈನ್‌ಗಳಿಂದ ವಿದ್ಯುತ್ ಪಡೆಯುವ ಸಾಂಪ್ರದಾಯಿಕ ವಿದ್ಯುತ್ ರೈಲುಗಳಿಗಿಂತ ಭಿನ್ನವಾಗಿ, ಹೈಡ್ರೋಜನ್ ಇಂಧನ ಕೋಶ ರೈಲು ಹೈಡ್ರೋಜನ್ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆಯ ಮೂಲಕ ರೈಲಿನಲ್ಲಿಯೇ (ಆನ್‌ಬೋರ್ಡ್) ವಿದ್ಯುತ್ ಉತ್ಪಾದಿಸುತ್ತದೆ, ನೀರಿನ ಆವಿ ಅದರ ಏಕೈಕ ಉಪ-ಉತ್ಪನ್ನವಾಗಿದೆ.
ಉಗಿ ಮತ್ತು ಡೀಸೆಲ್ ಲೋಕೋಮೋಟಿವ್‌ಗಳು ಒಮ್ಮೆ ಮಾಡಿದ್ದಂತೆ ಒಂದು ಅರ್ಥದಲ್ಲಿ, ರೈಲು ತನ್ನದೇ ಆದ ಶಕ್ತಿಯ ಮೂಲವನ್ನು ಹೊಂದಿದೆ, ಆದರೆ ಕಲ್ಲಿದ್ದಲು ಅಥವಾ ಡೀಸೆಲ್‌ನಂತಹ ಸಾಂಪ್ರದಾಯಿಕ ಇಂಧನಗಳನ್ನು ದಹಿಸುವ ಬದಲು, ಹೈಡ್ರೋಜನ್ ವಾತಾವರಣದಿಂದ ಆಮ್ಲಜನಕವನ್ನು ಬಳಸಿಕೊಂಡು ರೈಲಿನೊಳಗೆ ವಿದ್ಯುತ್ ಉತ್ಪಾದಿಸುತ್ತದೆ, ದಹನ ಮತ್ತು ಬಾಹ್ಯ ವಿದ್ಯುತ್ ಸರಬರಾಜಿನ ಮೇಲಿನ ಅವಲಂಬನೆಯನ್ನು ನಿವಾರಿಸುತ್ತದೆ. ಶುದ್ಧ ಹೈಡ್ರೋಜನ್ ತಂತ್ರಜ್ಞಾನದ ಮೂಲಕ ಆನ್‌ಬೋರ್ಡ್‌ನಲ್ಲಿ ವಿದ್ಯುತ್ ಉತ್ಪಾದಿಸುವುದರಿಂದ, ರೈಲು ಪ್ರೊಪಲ್ಷನ್‌ನ ಹಸಿರು ರೂಪವನ್ನು ಈ ರೈಲು ಪ್ರತಿನಿಧಿಸುತ್ತದೆ, ಸುಸ್ಥಿರ ಚಲನಶೀಲತೆಯ ಭವಿಷ್ಯಕ್ಕೆ ಶಕ್ತಿ ನೀಡುತ್ತದೆ. ಈ ಮುಂದುವರಿದ ಆಧುನಿಕ ಪ್ರೊಪಲ್ಷನ್ ವ್ಯವಸ್ಥೆಗೆ ಪೂರಕವಾಗಿ, ಭಾರತವು ಹೈಡ್ರೋಜನ್ ಸೋರಿಕೆ, ಶಾಖ, ಜ್ವಾಲೆ ಮತ್ತು ಹೊಗೆಯನ್ನು ಪತ್ತೆಹಚ್ಚುವ ಸಾಮರ್ಥ್ಯವಿರುವ ಬಹು-ಹಂತದ ಸುರಕ್ಷತಾ ವ್ಯವಸ್ಥೆಗಳೊಂದಿಗೆ ರೈಲನ್ನು ಸಜ್ಜುಗೊಳಿಸಿದೆ. ಜಿಂದ್-ಸೋನಿಪತ್ ವಿಭಾಗದಲ್ಲಿ ಗಂಟೆಗೆ 75 ಕಿಮೀ ಕಾರ್ಯಾಚರಣೆಯ ವೇಗ ಮತ್ತು ಗಂಟೆಗೆ 110 ಕಿಮೀ ವಿನ್ಯಾಸ ವೇಗದೊಂದಿಗೆ, ರೈಲು ಸುರಕ್ಷಿತ ಮಾತ್ರವಲ್ಲದೆ ಈ 89 ಕಿಮೀ ಮಾರ್ಗದಲ್ಲಿ ವೇಗವನ್ನು ಗಳಿಸಿಕೊಂಡಿದೆ.

ಪ್ರಸ್ತುತ ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಹೈಡ್ರೋಜನ್ ಪ್ಯಾಸೆಂಜರ್ ರೈಲುಗಳು ಕೇವಲ ಎರಡು ಅಥವಾ ಮೂರು ಬೋಗಿಗಳನ್ನು ಒಳಗೊಂಡಿರುತ್ತವೆ ಮತ್ತು ಪ್ರಾಥಮಿಕವಾಗಿ ಕಿರು ಪ್ರಾದೇಶಿಕ ಮಾರ್ಗಗಳಲ್ಲಿ ನಿಯೋಜಿಸಲ್ಪಡುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ರೈಲ್ವೆ ರೈಲುಗಳನ್ನು ಸುಮಾರು 2,600 ಪ್ರಯಾಣಿಕರ ಸಾಮರ್ಥ್ಯದ 10-ಬೋಗಿಗಳ ಪ್ಯಾಸೆಂಜರ್ ರೈಲಿನಂತೆ ರೂಪಿಸಿ ಸಾಮರ್ಥ್ಯ ವರ್ಧನೆ ಮಾಡಲಾಗಿದೆ, ಇದು ಹೆಚ್ಚಿನ ಸಾಮರ್ಥ್ಯದ ಪ್ರಯಾಣಿಕರ ಕಾರ್ಯಾಚರಣೆಗಳಿಗಾಗಿ ಹೈಡ್ರೋಜನ್-ಚಾಲಿತ ರೈಲು ಸಾರಿಗೆಯ ವಿಸ್ತರಣೆಯನ್ನು (ಸ್ಕೇಲೆಬಿಲಿಟಿಯನ್ನು) ಪ್ರದರ್ಶಿಸುತ್ತದೆ.


ಆದರೆ ಹೈಡ್ರೋಜನ್ ಸ್ವಭಾವತಃ ದಹನಾನುಕೂಲಿ ಮತ್ತು ಅದು ಸ್ವಾಭಾವಿಕವಾಗಿ ಎಲ್ಲರ ಮನಸ್ಸಿನಲ್ಲಿ ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಸುಲಭವಾಗಿ ಬೆಂಕಿ ಹಿಡಿಯುವ ಅನಿಲದ ಮೇಲೆ ಚಲಿಸುವ ರೈಲಿಗೆ ಸಾವಿರಾರು ಪ್ರಯಾಣಿಕರನ್ನು ಹಾಕುವುದು ಸುರಕ್ಷಿತವೇ? ಇದಕ್ಕೆ ಸಂಬಂಧಿಸಿ ರೈಲು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಸುರಕ್ಷಿತವಾಗಿಸಲು ಭಾರತೀಯ ರೈಲ್ವೆ ಮಾಡಿರುವ ಎಲ್ಲದರ ಸರಳ ವಿವರಣೆ ಇಲ್ಲಿದೆ.
ಹೈಡ್ರೋಜನ್ ರೈಲು ವಾಸ್ತವವಾಗಿ ಹೇಗೆ ಕೆಲಸ ಮಾಡುತ್ತದೆ?
ಯಾಂತ್ರಿಕ ಶಕ್ತಿಯನ್ನು ಉತ್ಪಾದಿಸಲು ಇಂಧನವನ್ನು ದಹನ ಮಾಡುವ ಸಾಂಪ್ರದಾಯಿಕ ಡೀಸೆಲ್ ಲೋಕೋಮೋಟಿವ್‌ಗಳಿಗಿಂತ ಭಿನ್ನವಾಗಿ, ಹೈಡ್ರೋಜನ್ ರೈಲು ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ (ಪಿ.ಇ.ಎಂ.-PEM) ಇಂಧನ ಕೋಶದ ರೂಪದಲ್ಲಿ ಸಣ್ಣ ವಿದ್ಯುತ್ ಸ್ಥಾವರವನ್ನು ಹೊಂದಿರುತ್ತದೆ. ರೈಲಿನ ಸಿಲಿಂಡರ್‌ಗಳಲ್ಲಿ ಸಂಗ್ರಹವಾಗಿರುವ ಹೈಡ್ರೋಜನ್ ಇಂಧನ ಕೋಶದೊಳಗಿನ ಸುತ್ತಮುತ್ತಲಿನ ಗಾಳಿಯಿಂದ ಆಮ್ಲಜನಕದೊಂದಿಗೆ ಸಂಯೋಜನೆಗೊಳ್ಳುತ್ತದೆ, ಆ ಮೂಲಕ ಚಲನೆ/ಎಳೆಯುವ ಮೋಟಾರ್‌ಗಳಿಗೆ ಶಕ್ತಿ ನೀಡುವ ಮತ್ತು ಚಕ್ರಗಳನ್ನು ತಿರುಗಿಸುವ ವಿದ್ಯುತ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರೋಕೆಮಿಕಲ್ ಕ್ರಿಯೆಯ ನೇರ ಉಪ-ಉತ್ಪನ್ನಗಳು ನೀರಿನ ಆವಿ ಮತ್ತು ಶಾಖ ಮಾತ್ರ. ಇಲ್ಲಿ ದಹನವಿಲ್ಲ, ಹೊಗೆ ಇಲ್ಲ ಮತ್ತು ಟೈಲ್‌ಪೈಪ್ ಇಂಗಾಲದ ಹೊರಸೂಸುವಿಕೆ ಇಲ್ಲ.
ಸರಳವಾಗಿ ಹೇಳುವುದಾದರೆ, ಈ ಪ್ರಕ್ರಿಯೆಯು ಬಹುತೇಕ ಮ್ಯಾಜಿಕ್‌ನಂತಿದೆ: ಹೈಡ್ರೋಜನ್ + ಆಮ್ಲಜನಕ → ವಿದ್ಯುತ್ + ನೀರಿನ ಆವಿ → ರೈಲು ಚಲಿಸುತ್ತದೆ. ಮ್ಯಾಜಿಕ್ ಎಂದು ತೋರುತ್ತಿರುವುದು ವಾಸ್ತವವಾಗಿ ಕಾರ್ಯನಿರ್ವಹಿಸುವ ಶುದ್ಧ ವಿಜ್ಞಾನ, ಅದು ರೈಲಿನೊಳಗೆ ಹೈಡ್ರೋಜನ್ ನ್ನು ನೇರವಾಗಿ ವಿದ್ಯುತ್ ಆಗಿ ಪರಿವರ್ತಿಸುವುದು. ಏಕೈಕ ನೇರ ಉಪ-ಉತ್ಪನ್ನವೆಂದರೆ ನೀರಿನ ಆವಿ. ಯಾವುದೇ ಹೊಗೆ ಅಥವಾ ನೇರ ಇಂಗಾಲದ ಹೊರಸೂಸುವಿಕೆ ಇಲ್ಲ, ಇದು ಹಸಿರು ಭಾರತೀಯ ರೈಲ್ವೆಗೆ ಕೊಡುಗೆ ನೀಡುತ್ತದೆ.

ರೈಲು ಎರಡು ಹೈಡ್ರೋಜನ್ ಡ್ರೈವಿಂಗ್ ಪವರ್ ಕಾರ್‌ಗಳು (ಡಿಪಿ.ಸಿ.ಗಳು) ಮತ್ತು ಎಂಟು ಟ್ರೈಲರ್ ಕೋಚ್‌ಗಳನ್ನು (ಟಿ.ಸಿ.ಗಳು) ಒಳಗೊಂಡಿದೆ. ಪ್ರತಿಯೊಂದು ಡಿ.ಪಿ.ಸಿ.ಯು ಇಂಧನ ಕೋಶಗಳು, ಲಿಥಿಯಂ ಐರನ್ ಫಾಸ್ಫೇಟ್ (ಎಲ್.ಎಫ್.ಪಿ.-LFP) ಬ್ಯಾಟರಿಗಳು ಮತ್ತು ಹೈಡ್ರೋಜನ್ ಶೇಖರಣಾ ಸಿಲಿಂಡರ್‌ಗಳನ್ನು ಹೊಂದಿದ್ದು, ಅವು ವಿಭಿನ್ನ ಕಾರ್ಯಾಚರಣಾ ಪರಿಸ್ಥಿತಿಗಳಲ್ಲಿ ವಿಶ್ವಾಸಾರ್ಹ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳುವಾಗ ಎಳೆತದ/ಚಲನೆಯ ಶಕ್ತಿಯನ್ನು ಒದಗಿಸಲು ಜೊತೆಯಾಗಿ ಕೆಲಸ ಮಾಡುತ್ತವೆ.

ಎರಡೂ ಪವರ್ ಕಾರ್‌ಗಳು, ಅವುಗಳ ಪ್ರತಿ ತುದಿಯಲ್ಲಿ, ಪ್ರತಿ ಡಿಪಿ.ಸಿ. ಗೆ 1,200 ಕಿ.ವಾ (1600 ಎಚ್.ಪಿ-ಅಶ್ವಶಕ್ತಿ) ಶಕ್ತಿಯನ್ನು ಉತ್ಪಾದಿಸುತ್ತವೆ, ಇದು ಒಟ್ಟಾಗಿ ಇಡೀ ರೈಲು ಗಂಟೆಗೆ 110 ಕಿಮೀ ವೇಗದಲ್ಲಿ ಚಲಿಸಲು ಸಾಕಾಗುತ್ತದೆ. ಹೈಡ್ರೋಜನ್ ಇಂಧನ ಕೋಶ ಚಾಲಿತ ರೈಲು ಆರಂಭದಲ್ಲಿ ಉತ್ತರ ರೈಲ್ವೆಯ ಜಿಂದ್-ಸೋನಿಪತ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಜಿಂದ್ ಜಂಕ್ಷನ್, ಗೋಹಾನಾ ಜಂಕ್ಷನ್ ಮತ್ತು ಸೋನಿಪತ್ ನ್ನು ಸಂಪರ್ಕಿಸುತ್ತದೆ ಮತ್ತು ಮಧ್ಯಂತರ ನಿಲ್ದಾಣಗಳು ಹಾಗು ಜಿಂದ್ ಸಿಟಿ, ಪಾಂಡು ಪಿಂಡಾರ ಜಂಕ್ಷನ್, ಲಲಿತ್ ಖೇರಾ ಹಾಲ್ಟ್, ಭಂಭೇವಾ, ಇಸಾಪುರ್ ಖೇರಿ ಹಾಲ್ಟ್, ಬುಟೇನ್ ಹಾಲ್ಟ್, ಖಂಡ್ರೈ ಹಾಲ್ಟ್, ರಾಬ್ರಾ ಹಾಲ್ಟ್, ಲಾತ್ ಹಾಲ್ಟ್, ಮೋಹನ, ಬರ್ವಾಸ್ನಿ ಹಾಲ್ಟ್ ಮತ್ತು ಸೋನಿಪತ್ ನ್ಯೂ ಸೇರಿದಂತೆ ಪ್ರಸ್ತಾವಿತ ನಿಲುಗಡೆಗಳಿಗೆ ತನ್ನ ಸೇವೆ ಸಲ್ಲಿಸುತ್ತದೆ.
ನಿಯಮಿತ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ಹೈಡ್ರೋಜನ್-ಚಾಲಿತ ಪ್ರಯಾಣಿಕ ರೈಲು ಸೇವೆಗಳ ಕಾರ್ಯಾಚರಣೆಯ ಕಾರ್ಯಸಾಧ್ಯತೆ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರದರ್ಶಿಸಲು ಈ ಮಾರ್ಗವನ್ನು ಆಯ್ಕೆ ಮಾಡಲಾಗಿದೆ. ಜಿಂದ್‌ನಲ್ಲಿ ಸ್ಥಾಪಿಸಲಾದ ಮೀಸಲಾದ ಹೈಡ್ರೋಜನ್ ಸಂಗ್ರಹಣೆ, ಸಂಕೋಚನ ಮತ್ತು ವಿತರಣಾ ಸೌಲಭ್ಯವು ಇಂಧನ ಮರುಪೂರಣ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ, ಇದು ಭಾರತದ ಮೊದಲ ಸಂಯೋಜಿತ ಹೈಡ್ರೋಜನ್ ರೈಲ್ವೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
ಹೈಡ್ರೋಜನ್ ಎಲ್ಲಿಂದ ಬರುತ್ತದೆ? ಜಿಂದ್ನಲ್ಲಿರುವ ಇಂಧನ ಮರುಪೂರಣ/ಪೂರೈಕೆ ಕೇಂದ್ರ
ಪೆಟ್ರೋಲ್ ಪಂಪ್ ಅಥವಾ ಸಿಎನ್‌ಜಿ ಬಂಕ್ ಅಥವಾ ಸ್ಟೇಷನ್ ಗಳಂತೆಯೇ, ರೈಲಿಗೆ ಇಂಧನ ತುಂಬಿಸಲು ಸ್ಥಳ ಬೇಕು, ಮತ್ತು ಭಾರತೀಯ ರೈಲ್ವೆಯು ಹರಿಯಾಣದ ಜಿಂದ್‌ನಲ್ಲಿ ಈ ಉದ್ದೇಶಕ್ಕಾಗಿ ಭಾರತದ ಅತಿದೊಡ್ಡ ರೈಲ್ವೆ ಹೈಡ್ರೋಜನ್ ಇಂಧನ ತುಂಬುವ/ಮರುಪೂರಣ ಮಾಡುವ ಸೌಲಭ್ಯವನ್ನು ಸ್ಥಾಪಿಸಿದೆ. ಈ ಸೌಲಭ್ಯವು ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಮೊದಲನೆಯದಾಗಿ, ವಿದ್ಯುದ್ವಿಭಜನೆಯ ಮೂಲಕ ಹೈಡ್ರೋಜನ್ ಅನ್ನು ಉತ್ಪಾದಿಸಲಾಗುತ್ತದೆ, ಹಸಿರು ಹೈಡ್ರೋಜನ್ ಸ್ಥಾವರದಲ್ಲಿ ವಿದ್ಯುತ್ ಬಳಸಿ ನೀರನ್ನು ಹೈಡ್ರೋಜನ್ (ಜಲಜನಕ) ಮತ್ತು ಆಮ್ಲಜನಕವಾಗಿ ವಿಭಜಿಸಲಾಗುತ್ತದೆ ಮತ್ತು ನಂತರ ಅದಕ್ಕೆಂದೇ ಮೀಸಲಾದ ಶೇಖರಣಾ ಟ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಎರಡನೆಯದಾಗಿ, ಹೈಡ್ರೋಜನ್ ಅನ್ನು 500 ಬಾರ್‌ಗೆ ಸಂಕುಚಿತಗೊಳಿಸಲಾಗುತ್ತದೆ, ಇದು ದೊಡ್ಡ ಪ್ರಮಾಣವನ್ನು ಸಣ್ಣ ಪ್ರಮಾಣದಲ್ಲಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಅಂತಿಮವಾಗಿ, ಇದನ್ನು 350 ಬಾರ್‌ನ ನಿಯಂತ್ರಿತ ಒತ್ತಡದಲ್ಲಿ ಎರಡು ಸ್ವತಂತ್ರ ಹೈಡ್ರೋಜನ್ ವಿತರಕಗಳ ಮೂಲಕ ವಿತರಿಸಲಾಗುತ್ತದೆ, ಇದು ಎರಡೂ ಹೈಡ್ರೋಜನ್ ಡ್ರೈವಿಂಗ್ ಪವರ್ ಕಾರ್‌ಗಳನ್ನು ಏಕಕಾಲದಲ್ಲಿ ಇಂಧನ ತುಂಬಿಸಲು ಮತ್ತು ಟರ್ನ್‌ಅರೌಂಡ್ ಸಮಯವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.
ಹೈಡ್ರೋಜನ್ ಎಲ್ಲಿಂದ ಬರುತ್ತದೆ? ಜಿಂದ್ನಲ್ಲಿರುವ ಇಂಧನ ಮರುಪೂರಣ/ಪೂರೈಕೆ ಕೇಂದ್ರ
ಪೆಟ್ರೋಲ್ ಪಂಪ್ ಅಥವಾ ಸಿಎನ್‌ಜಿ ಬಂಕ್ ಅಥವಾ ಸ್ಟೇಷನ್ ಗಳಂತೆಯೇ, ರೈಲಿಗೆ ಇಂಧನ ತುಂಬಿಸಲು ಸ್ಥಳ ಬೇಕು, ಮತ್ತು ಭಾರತೀಯ ರೈಲ್ವೆಯು ಹರಿಯಾಣದ ಜಿಂದ್‌ನಲ್ಲಿ ಈ ಉದ್ದೇಶಕ್ಕಾಗಿ ಭಾರತದ ಅತಿದೊಡ್ಡ ರೈಲ್ವೆ ಹೈಡ್ರೋಜನ್ ಇಂಧನ ತುಂಬುವ/ಮರುಪೂರಣ ಮಾಡುವ ಸೌಲಭ್ಯವನ್ನು ಸ್ಥಾಪಿಸಿದೆ. ಈ ಸೌಲಭ್ಯವು ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಮೊದಲನೆಯದಾಗಿ, ವಿದ್ಯುದ್ವಿಭಜನೆಯ ಮೂಲಕ ಹೈಡ್ರೋಜನ್ ಅನ್ನು ಉತ್ಪಾದಿಸಲಾಗುತ್ತದೆ, ಹಸಿರು ಹೈಡ್ರೋಜನ್ ಸ್ಥಾವರದಲ್ಲಿ ವಿದ್ಯುತ್ ಬಳಸಿ ನೀರನ್ನು ಹೈಡ್ರೋಜನ್ (ಜಲಜನಕ) ಮತ್ತು ಆಮ್ಲಜನಕವಾಗಿ ವಿಭಜಿಸಲಾಗುತ್ತದೆ ಮತ್ತು ನಂತರ ಅದಕ್ಕೆಂದೇ ಮೀಸಲಾದ ಶೇಖರಣಾ ಟ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಎರಡನೆಯದಾಗಿ, ಹೈಡ್ರೋಜನ್ ಅನ್ನು 500 ಬಾರ್‌ಗೆ ಸಂಕುಚಿತಗೊಳಿಸಲಾಗುತ್ತದೆ, ಇದು ದೊಡ್ಡ ಪ್ರಮಾಣವನ್ನು ಸಣ್ಣ ಪ್ರಮಾಣದಲ್ಲಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಅಂತಿಮವಾಗಿ, ಇದನ್ನು 350 ಬಾರ್‌ನ ನಿಯಂತ್ರಿತ ಒತ್ತಡದಲ್ಲಿ ಎರಡು ಸ್ವತಂತ್ರ ಹೈಡ್ರೋಜನ್ ವಿತರಕಗಳ ಮೂಲಕ ವಿತರಿಸಲಾಗುತ್ತದೆ, ಇದು ಎರಡೂ ಹೈಡ್ರೋಜನ್ ಡ್ರೈವಿಂಗ್ ಪವರ್ ಕಾರ್‌ಗಳನ್ನು ಏಕಕಾಲದಲ್ಲಿ ಇಂಧನ ತುಂಬಿಸಲು ಮತ್ತು ಟರ್ನ್‌ಅರೌಂಡ್ ಸಮಯವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.
ಈ ಸೌಲಭ್ಯವು ಏಕಕಾಲದಲ್ಲಿ ಸುಮಾರು 3,000 ಕೆಜಿ ಹೈಡ್ರೋಜನನ್ನು ಸಂಗ್ರಹಿಸುತ್ತದೆ, ಇದು ರೈಲು ಸೆಟ್‌ನ ನಿಯಮಿತ ಕಾರ್ಯಾಚರಣೆಯನ್ನು ಬೆಂಬಲಿಸಲು ಸಾಕಾಗುತ್ತದೆ ಮತ್ತು ಅದರ ಸಂಗ್ರಹಣೆ ಹಾಗು ಪೂರೈಕೆ ವ್ಯವಸ್ಥೆಯನ್ನು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿ.ಇ.ಎಸ್.ಒ.-PESO) ಅನುಮೋದಿಸಿದೆ.

ಸ್ಥಳೀಯ ಸಾಮರ್ಥ್ಯಗಳನ್ನು ನಿರ್ಮಿಸುವುದು
ಭಾರತದಲ್ಲಿ ವಿನ್ಯಾಸಗೊಳಿಸಿ, ಎಂಜಿನಿಯರಿಂಗ್ ಮಾಡಲಾದ ಮತ್ತು ಸಂಯೋಜಿಸಲಾದ ಈ ರೈಲನ್ನು ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ, ಇದು ಮುಂದುವರಿದ ಆಧುನಿಕ ರೈಲ್ವೆ ಎಂಜಿನಿಯರಿಂಗ್‌ನಲ್ಲಿ ದೇಶದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ.
ಭಾರತದ ಮೊದಲ ಹೈಡ್ರೋಜನ್ ಇಂಧನ ಕೋಶ ಚಾಲಿತ ರೈಲನ್ನು ಭಾರತೀಯ ರೈಲ್ವೆಯ ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (ಆರ್.ಡಿ.ಎಸ್.ಒ-RDSO) ತಾಂತ್ರಿಕ ನಿರ್ದಿಷ್ಟತೆಗಳನ್ನು ರೂಪಿಸುತ್ತದೆ ಮತ್ತು ವಿನ್ಯಾಸ ಅನುಮೋದನೆ ಪ್ರಕ್ರಿಯೆಯನ್ನು ಮುನ್ನಡೆಸುತ್ತದೆ. ಈ ರೈಲು ವ್ಯವಸ್ಥೆಯನ್ನು ಮೆ/ಎಸ್ ಮೇಧಾ ಸರ್ವೋ ಡ್ರೈವ್ಸ್ ಸಂಯೋಜಿಸಿದೆ, ಜೊತೆಗೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐ.ಸಿ.ಎಫ್-ICF) ರೈಲಿನ ಥೀಮ್ ಮತ್ತು ಬಾಹ್ಯ ವಿನ್ಯಾಸಕ್ಕೆ ಕೊಡುಗೆ ನೀಡಿದೆ.
ರೈಲ್ವೇ ಹಳಿಗಳ ಮೇಲೆ ಚಲಿಸುವ ಯಾವುದೇ ವಾಹನ ಅಥವಾ ರೋಲಿಂಗ್ ಸ್ಟಾಕ್‌ಗೆ ಪೂರಕವಾಗಿ, ಭಾರತೀಯ ರೈಲ್ವೆ ಜಿಂದ್‌ನಲ್ಲಿ ಸಂಪೂರ್ಣ ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಿದೆ, ಇದು ರೈಲು ಕಾರ್ಯಾಚರಣೆಗಳನ್ನು ಬೆಂಬಲಿಸಲು ವಿದ್ಯುದ್ವಿಭಜನೆ, ಸಂಗ್ರಹಣೆ, ಸಂಕೋಚನ ಮತ್ತು ವಿತರಣಾ ಮೂಲಸೌಕರ್ಯದ ಮೂಲಕ ಹೈಡ್ರೋಜನ್ ಉತ್ಪಾದನೆಯನ್ನು ಒಳಗೊಂಡಿದೆ.
ಹೈಡ್ರೋಜನ್ ಎಂದರೇನು ಮತ್ತು ಅದು ಜನರನ್ನು ಏಕೆ ಚಿಂತೆಗೀಡು ಮಾಡುತ್ತದೆ?
ಸರಳವಾಗಿ ಹೇಳುವುದಾದರೆ, ಹೈಡ್ರೋಜನ್ ಬಣ್ಣರಹಿತವಾಗಿದೆ, ಆದ್ದರಿಂದ ನೀವು ಅದನ್ನು ನೋಡಲು ಸಾಧ್ಯವಿಲ್ಲ, ಮತ್ತು ಅದಕ್ಕೆ ವಾಸನೆಯಿಲ್ಲ, ಆದ್ದರಿಂದ ನೀವು ಅದರ ವಾಸನೆ ಅನುಭವಿಸಲು ಸಾಧ್ಯವಿಲ್ಲ. ಇದಕ್ಕೆ ರುಚಿಯೂ ಇಲ್ಲ. ಇದು ವಿಷಕಾರಿಯಲ್ಲ, ಅಂದರೆ ನೀವು ಅದರ ಹತ್ತಿರದಲ್ಲಿದ್ದರೆ ಅದು ನಿಮ್ಮನ್ನು ವಿಷಪೂರಿತಗೊಳಿಸುವುದಿಲ್ಲ. ಜನರನ್ನು ಅಧೀರರನ್ನಾಗಿ ಮಾಡುವ ಅಂಶವೆಂದರೆ, ಮತ್ತು ಅದನ್ನು ಸರಿಯಾಗಿ ಹೇಳುವುದಾದರೆ, ಅದು ಹೆಚ್ಚು ಉರಿಯುವ ಗುಣವನ್ನು ಹೊಂದಿದೆ ಅಂದರೆ ಅದು ದಹನಾನುಕೂಲಿ. ಮತ್ತು ಅದನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಹೈಡ್ರೋಜನ್ ಅನ್ನು ನೋಡಲು ಅಥವಾ ವಾಸನೆ ಮಾಡಲು ಸಾಧ್ಯವಿಲ್ಲದ ಕಾರಣ, ಈ ಯೋಜನೆಯ ಸಂಪೂರ್ಣ ಸುರಕ್ಷತಾ ವಿನ್ಯಾಸವು ಒಂದು ಗುರಿಯ ಸುತ್ತ ಕೇಂದ್ರೀಕೃತವಾಗಿದೆ. ಅದು ಚಿಕ್ಕ ಸೋರಿಕೆಯನ್ನು ಸಹ ತಕ್ಷಣವೇ ಪತ್ತೆಹಚ್ಚುವುದು ಮತ್ತು ಅದನ್ನು ಎಂದಿಗೂ ಅಪಾಯವಾಗಿ ಪರಿವರ್ತಿಸುವುದಕ್ಕೆ ಬಿಡಬಾರದು ಎಂಬುದು ಈ ಗುರಿ..
ಹಾಗಾದರೆ ಸುರಕ್ಷತೆಯನ್ನು ನಿಜವಾಗಿಯೂ ಹೇಗೆ ಖಚಿತಪಡಿಸಿಕೊಳ್ಳಲಾಗುತ್ತದೆ?
ಯೋಜನೆಯ ಪ್ರತಿಯೊಂದು ಹಂತದಲ್ಲೂ ಸುರಕ್ಷತೆಯನ್ನು ಅಳವಡಿಸಲಾಗಿದೆ. ರೈಲು ಮತ್ತು ಹೈಡ್ರೋಜನ್ ಶೇಖರಣಾ ಸಿಲಿಂಡರ್‌ಗಳ ವಿನ್ಯಾಸದಿಂದ ಹಿಡಿದು ಇಂಧನ ತುಂಬುವ ಮೂಲಸೌಕರ್ಯ, ಮೇಲ್ವಿಚಾರಣಾ ಸಾಫ್ಟ್‌ವೇರ್ ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳವರೆಗೆ. ಒಂದೇ ರಕ್ಷಣಾತ್ಮಕ ಕ್ರಮವನ್ನು ಅವಲಂಬಿಸುವ ಬದಲು, ಭಾರತೀಯ ರೈಲ್ವೆಗಳು ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ರಕ್ಷಣಾ ತತ್ವವನ್ನು ಆಳವಾಗಿ ಅಳವಡಿಸಿಕೊಂಡಿವೆ, ಅಲ್ಲಿ ಬಹು ಸ್ವತಂತ್ರ ಸುರಕ್ಷತಾ ವ್ಯವಸ್ಥೆಗಳು ಹೈಡ್ರೋಜನ್ ಸಂಗ್ರಹಣೆ, ವರ್ಗಾವಣೆ ಮತ್ತು ಬಳಕೆಯ ಪ್ರತಿಯೊಂದು ಹಂತವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತವೆ, ಪರಿಶೀಲಿಸುತ್ತವೆ ಮತ್ತು ರಕ್ಷಿಸುತ್ತವೆ.
ಅಪಾಯ ಪತ್ತೆ ಎಲ್ಲೆಡೆ ನಡೆಯುತ್ತದೆ. ರೈಲು ಮತ್ತು ಸ್ಥಾವರವು ಹೈಡ್ರೋಜನ್ ಸೋರಿಕೆ, ಅಸಾಮಾನ್ಯ ಶಾಖ, ಜ್ವಾಲೆಗಳು ಅಥವಾ ಹೊಗೆಯನ್ನು ನಿರಂತರವಾಗಿ ವೀಕ್ಷಿಸುವ ಹದ್ದುಗಣ್ಣಿನ ಸಾಧನಗಳೊಂದಿಗೆ ಅಳವಡಿಸಲ್ಪಟ್ಟಿವೆ, ಆದ್ದರಿಂದ ಯಾವುದೇ ಸಮಸ್ಯೆ ಸೆಕೆಂಡುಗಳಲ್ಲಿ ಕಂಡುಹಿಡಿಯಲ್ಪಡುತ್ತದೆ. ಇದರ ಜೊತೆಗೆ, ತಡೆರಹಿತ ವಾತಾಯನವು ಎಲ್ಲಾ ಸಮಯದಲ್ಲೂ ರೈಲಿನಲ್ಲಿ ಗಾಳಿಯಾಡುವಂತೆ ಮಾಡುತ್ತದೆ, ಇದರಿಂದಾಗಿ ಸ್ವಲ್ಪ ಪ್ರಮಾಣದ ಹೈಡ್ರೋಜನ್ ಸೋರಿಕೆಯಾದರೂ, ಅದು ಎಲ್ಲಿಯಾದರೂ ಸಂಗ್ರಹವಾಗುವ ಬದಲು ಸುರಕ್ಷಿತವಾಗಿ ಸಾಗಿಸಲ್ಪಡುತ್ತದೆ ಮತ್ತು ತೆರೆದ ಗಾಳಿಯಲ್ಲಿ ದುರ್ಬಲಗೊಳ್ಳುತ್ತದೆ.
ಸ್ವಯಂಚಾಲಿತವಾಗಿ ಸ್ಥಗಿತಗೊಳಿಸುವ ವ್ಯವಸ್ಥೆಯೂ ಇದರಲ್ಲಿ ಇದೆ. ಏನಾದರೂ ಅಸಾಮಾನ್ಯ ಘಟನೆ ಪತ್ತೆಯಾದರೆ, ಯಾವುದೇ ವ್ಯಕ್ತಿಯ ಪ್ರತಿಕ್ರಿಯೆಗಾಗಿ ಕಾಯದೆ, ಈ ವ್ಯವಸ್ಥೆಯು ಸ್ವಯಂಚಾಲಿತವಾಗಿ ಹೈಡ್ರೋಜನ್ ಸರಬರಾಜನ್ನು ಸ್ಥಗಿತಗೊಳಿಸಬಲ್ಲುದು. ಲೋಕೋ ಪೈಲಟ್ ಸುರಕ್ಷತೆಗೂ ವಿಶೇಷ ಗಮನ ನೀಡಲಾಗಿದೆ. ಲೋಕೋ ಪೈಲೆಟ್ ಕ್ಯಾಬಿನನ್ನು ಲೊಕೊ ಪೈಲಟ್ ಅವರನ್ನು ಸುರಕ್ಷಿತವಾಗಿಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ, ತುರ್ತು ಪರಿಸ್ಥಿತಿಯಲ್ಲಿ ರೈಲನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅನುವು ಮಾಡಿಕೊಡುವ ವಿಶೇಷ ಮೋಡ್ ಮತ್ತು ಲೊಕೊ ಪೈಲಟ್‌ಗೆ ಎಲ್ಲಾ ಸಮಯದಲ್ಲೂ ಇಡೀ ವ್ಯವಸ್ಥೆಯ ನೈಜ ಕಾರ್ಯಾಚರಣಾ ಸಮರ್ಪಕತೆಯ ಆರೋಗ್ಯವನ್ನು ತೋರಿಸುವ ಪರದೆಯನ್ನು ಹೊಂದಿದೆ.
ಜಿಂದ್ ಹೈಡ್ರೋಜನ್ ಸ್ಥಾವರವು ಇದೇ ರೀತಿಯ ರಕ್ಷಣೆಗಳನ್ನು ಹೊಂದಿದೆ, ಇದರಲ್ಲಿ ಸೋರಿಕೆ ಪತ್ತೆ ವ್ಯವಸ್ಥೆ, ಜ್ವಾಲೆಯ ಪತ್ತೆ ವ್ಯವಸ್ಥೆ, ಸ್ವಯಂಚಾಲಿತ ಸ್ಥಗಿತಗೊಳಿಸುವ ವ್ಯವಸ್ಥೆಗಳು, ಯಾವುದೇ ಬೆಂಕಿಯನ್ನು ನಿಯಂತ್ರಿಸಲು ನೀರಿನ ಚಿಲುಮೆಗಳು (ಸ್ಪ್ರೇಗಳು) ಮತ್ತು ಅಗ್ನಿಶಾಮಕ ಎಚ್ಚರಿಕೆಗಳು ಸೇರಿವೆ, ಇವೆಲ್ಲವೂ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ.
ಭಾರತೀಯ ರೈಲ್ವೆಯಿಂದ ಮಾತ್ರವಲ್ಲದೆ, ಇತರರಿಂದಲೂ ಪರಿಶೀಲಿಸಲ್ಪಟ್ಟಿದೆ ಮತ್ತು ಅನುಮೋದಿಸಲ್ಪಟ್ಟಿದೆ
ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ಎನ್.ಎಫ್.ಪಿ.ಎ. (NFPA)-2 ಮತ್ತು ಐ.ಎಸ್.ಒ. (ISO) 19880 ಸರಣಿ ಸೇರಿದಂತೆ ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ, ಜೊತೆಗೆ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿ.ಇ.ಎಸ್.ಒ-PESO) ಯ ಶಾಸನಬದ್ಧ ಅವಶ್ಯಕತೆಗಳನ್ನು ಸಹ ಅನುಸರಿಸುತ್ತದೆ. ಕಾರ್ಯಾರಂಭ ಮಾಡುವ ಮೊದಲು, ಇಡೀ ವ್ಯವಸ್ಥೆಯು ವಿಶ್ವದ ಪ್ರಮುಖ ತಾಂತ್ರಿಕ ತಪಾಸಣೆ ಮತ್ತು ಪ್ರಮಾಣೀಕರಣ ಸಂಸ್ಥೆಗಳಲ್ಲಿ ಒಂದಾದ ಜರ್ಮನಿಯ ಟಿ.ಯು.ವಿ. ಎಸ್.ಯು.ಡಿ. (TÜV SÜD ) ಯಿಂದ ಸ್ವತಂತ್ರ ಮೂರನೇ ಸಂಸ್ಥೆಯ ಸುರಕ್ಷತಾ ಮೌಲ್ಯಮಾಪನಕ್ಕೆ ಒಳಗಾಗಿದೆ.
ಪ್ರಯಾಣಿಕರನ್ನು ಕರೆದೊಯ್ಯುವ ಮೊದಲು ರೈಲು ಪರೀಕ್ಷೆ
ಈ ರೈಲು ಓಡಾಟಕ್ಕೆ ಅನುಮತಿ ನೀಡುವ ಮೊದಲು, ಎಲ್ಲವೂ ಉದ್ದೇಶಿಸಿದಂತೆ ನಿಖರವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅದನ್ನು ಹಲವಾರು ಕಠಿಣ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಲೋಡ್ ಬಾಕ್ಸ್ ಪರೀಕ್ಷೆಯು ವಿದ್ಯುತ್ ಮತ್ತು ವಿದ್ಯುತ್ ವ್ಯವಸ್ಥೆಗಳು ನೈಜ ಹೊರೆಯ ಅಡಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂದು ಪರಿಶೀಲಿಸಿತು. ರೇಡಿಯೊ ಆವರ್ತನ ಪ್ರಯೋಗಗಳು ರೈಲಿನ ಎಲೆಕ್ಟ್ರಾನಿಕ್ಸ್ ಇತರ ಸಿಗ್ನಲಿಂಗ್ ಮತ್ತು ಸಂವಹನ ವ್ಯವಸ್ಥೆಗಳೊಂದಿಗೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಂಡವು. ಆಸಿಲೇಷನ್ ಪ್ರಯೋಗಗಳು ರೈಲು ಸರಾಗವಾಗಿ ಮತ್ತು ಸ್ಥಿರವಾಗಿ ವೇಗದಲ್ಲಿ, ಅತಿಯಾದ ಅಲುಗಾಡುವಿಕೆಯಿಲ್ಲದೆ ಚಲಿಸುತ್ತದೆಯೇ ಎಂದು ಪರಿಶೀಲಿಸಿದವು. ತುರ್ತು ಬ್ರೇಕ್ ದೂರ ಪ್ರಯೋಗಗಳು ತುರ್ತು ಪರಿಸ್ಥಿತಿಯಲ್ಲಿ ರೈಲು ಎಷ್ಟು ವೇಗವಾಗಿ ಮತ್ತು ಸುರಕ್ಷಿತವಾಗಿ ನಿಲ್ಲಬಹುದು ಎಂಬುದನ್ನು ನಿಖರವಾಗಿ ದೃಢಪಡಿಸಿದವು. ಶಾಸನಬದ್ಧ ತಪಾಸಣೆಗಳು ಮತ್ತು ಸ್ವತಂತ್ರ ಸುರಕ್ಷತಾ ಮೌಲ್ಯಮಾಪನಗಳೊಂದಿಗೆ ಈ ಎಲ್ಲ ಮೌಲ್ಯಮಾಪನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರವೇ, ಯೋಜನೆಯನ್ನು ಕಾರ್ಯಾಚರಣೆಯ ನಿಯೋಜನೆಗೆ ಸಿದ್ಧವೆಂದು ಪರಿಗಣಿಸಲಾಯಿತು.
ಜಾಗತಿಕವಾಗಿ ಭಾರತದ ಸ್ಥಾನ ಎಲ್ಲಿದೆ?
ಜಾಗತಿಕವಾಗಿ ಹೈಡ್ರೋಜನ್ ಚಾಲಿತ ರೈಲುಗಳು ಇನ್ನೂ ಶೈಶವಾವಸ್ಥೆಯಲ್ಲಿವೆ. ಜರ್ಮನಿ ವಾಣಿಜ್ಯ ಹೈಡ್ರೋಜನ್ ಪ್ರಯಾಣಿಕ ರೈಲುಗಳನ್ನು ಪರಿಚಯಿಸಿದ ಮೊದಲ ದೇಶವಾಯಿತು, ಆದರೆ ಫ್ರಾನ್ಸ್, ಇಟಲಿ, ಚೀನಾ, ಜಪಾನ್ ಮತ್ತು ಇತರ ಕೆಲವು ದೇಶಗಳು ಪ್ರಾಯೋಗಿಕ ಯೋಜನೆಗಳನ್ನು ಅಥವಾ ಸೀಮಿತ ನಿಯೋಜನೆಗಳನ್ನು ಅನುಸರಿಸುತ್ತಿವೆ. ಈ ರೈಲುಗಳು ಸಾಮಾನ್ಯವಾಗಿ ಎರಡರಿಂದ ನಾಲ್ಕು ಬೋಗಿಗಳನ್ನು ಒಳಗೊಂಡಿರುತ್ತವೆ ಮತ್ತು ಪ್ರಾಥಮಿಕವಾಗಿ ಪ್ರಾದೇಶಿಕ ಪ್ರಯಾಣಿಕರ ಸೇವೆಗಳಿಗಾಗಿ ಬಳಕೆಯಾಗುತ್ತಿವೆ.
ಭಾರತದ ಹೈಡ್ರೋಜನ್ ಇಂಧನ ಕೋಶ ರೈಲುಗಳು ಪ್ರಮಾಣ ಮತ್ತು ಮಹತ್ವಾಕಾಂಕ್ಷೆ ಎರಡರಲ್ಲೂ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತವೆ. ರೈಲಿನ ಹೊರತಾಗಿ, ಭಾರತವು ಜಿಂಡ್‌ನಲ್ಲಿ ದೇಶದ ಅತಿದೊಡ್ಡ ರೈಲ್ವೆ ಹೈಡ್ರೋಜನ್ ಮರುಪೂರಣ ಸೌಲಭ್ಯವನ್ನು ಸ್ಥಾಪಿಸಿದೆ, ಇದು ರೋಲಿಂಗ್ ಸ್ಟಾಕ್, ಸಂಗ್ರಹಣೆ, ವಿತರಣಾ ಮೂಲಸೌಕರ್ಯ, ಸುರಕ್ಷತಾ ವ್ಯವಸ್ಥೆಗಳು ಮತ್ತು ಕಾರ್ಯಾಚರಣೆಯ ಶಿಷ್ಟಾಚಾರಗಳನ್ನು (ಪ್ರೋಟೋಕಾಲ್) ಗಳನ್ನು ಒಳಗೊಂಡ ಸಂಪೂರ್ಣ ಹೈಡ್ರೋಜನ್ ರೈಲು ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ.
ಹೈಡ್ರೋಜನ್ ರೈಲುಗಳ ಭವಿಷ್ಯ
ಜಿಂದ್-ಸೋನಿಪತ್ ಹೈಡ್ರೋಜನ್ ರೈಲು ಯೋಜನೆಯ ಮೂಲಕ ಪಡೆದ ಅನುಭವವನ್ನು ಬಳಸಿಕೊಂಡು, ಕಲ್ಕಾ-ಶಿಮ್ಲಾ ಮಾರ್ಗ ಸೇರಿದಂತೆ ಪಾರಂಪರಿಕ ರೈಲ್ವೆಗಳಲ್ಲಿ ಹೈಡ್ರೋಜನ್ ತಂತ್ರಜ್ಞಾನದ ನಿಯೋಜನೆಯನ್ನು ಭಾರತೀಯ ರೈಲ್ವೆ ಅನ್ವೇಷಿಸುತ್ತಿದೆ.
ಈ ಉಪಕ್ರಮಗಳು ಭಾರತೀಯ ರೈಲ್ವೆಯ ಪ್ರವರ್ತಕ ಪೈಲಟ್ ಯೋಜನೆಯಿಂದ ಹೈಡ್ರೋಜನ್-ಚಾಲಿತ ರೋಲಿಂಗ್ ಸ್ಟಾಕ್‌ಗಾಗಿ ರಚನಾತ್ಮಕ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಪರಿವರ್ತನೆಯನ್ನು ಸೂಚಿಸುತ್ತವೆ, ಇದು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಮತ್ತು ದೇಶದ ದೀರ್ಘಕಾಲೀನ ನಿವ್ವಳ ಶೂನ್ಯ ಗುರಿಗೆ ಕೊಡುಗೆ ನೀಡುತ್ತಲೇ ಸುಸ್ಥಿರ ಚಲನಶೀಲತೆಯಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುತ್ತದೆ.
*****
(रिलीज़ आईडी: 2285359)
आगंतुक पटल : 15