ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಜವಳಿ ಸಾಮರ್ಥ್ಯ ಮತ್ತು 2030ರ ದೂರದೃಷ್ಟಿಯನ್ನು ಭಾರತ್ ಟೆಕ್ಸ್ 2026 ಹೇಗೆ ಪ್ರತಿಬಿಂಬಿಸುತ್ತದೆ ಎಂಬುದರ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
15 JUL 2026 2:34PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತ್ ಟೆಕ್ಸ್ 2026 ಕುರಿತು ಕೇಂದ್ರ ಜವಳಿ ರಾಜ್ಯ ಸಚಿವರಾದ ಶ್ರೀ ಪಬಿತ್ರ ಮಾರ್ಗರಿಟಾ ಬರೆದ ಲೇಖನವನ್ನು ಇಂದು ಹಂಚಿಕೊಂಡಿದ್ದಾರೆ. ಆ ಲೇಖನ ಭಾರತದ ಸಂಪೂರ್ಣ ಜವಳಿ ಮೌಲ್ಯ ಸರಣಿಯನ್ನು ಒಂದೇ ಸೂರಿನಡಿ ತರುತ್ತದೆ, ದೇಶದ ಉತ್ಪಾದನಾ ಸಾಮರ್ಥ್ಯ, ಶ್ರೀಮಂತ ಜವಳಿ ಪರಂಪರೆ ಮತ್ತು ವಿಸ್ತರಿಸುತ್ತಿರುವ ಜಾಗತಿಕ ಉಪಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ಆ ಲೇಖನ ಜವಳಿ ವಲಯಕ್ಕಾಗಿ ರೂಪಿಸಿರುವ ಭಾರತದ ವಿಷನ್ 2030 ನೀಲನಕ್ಷೆಯನ್ನೂ ಸಹ ಪ್ರತಿಬಿಂಬಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಶ್ರೀ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀ @PmargheritaBJP @Bharat_tex 2026 ಭಾರತದ ಸಂಪೂರ್ಣ ಜವಳಿ ಮೌಲ್ಯ ಸರಣಿಯನ್ನು ಒಂದೇ ಸೂರಿನಡಿ ತರುತ್ತದೆ, ಇದು ದೇಶದ ಉತ್ಪಾದನಾ ಸಾಮರ್ಥ್ಯ, ಶ್ರೀಮಂತ ಜವಳಿ ಪರಂಪರೆ ಮತ್ತು ಬೆಳೆಯುತ್ತಿರುವ ಜಾಗತಿಕ ಉಪಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದು ಬರೆಯುತ್ತಾರೆ. ಇದು ಜವಳಿ ವಲಯಕ್ಕಾಗಿ ಭಾರತದ ವಿಷನ್ 2030 ನೀಲನಕ್ಷೆಯನ್ನೂ ಸಹ ಪ್ರತಿಬಿಂಬಿಸುತ್ತದೆ.
via NaMo App
*****
(ಪ್ರಕಟಣೆ ಐ.ಡಿ.: 2284812)
ವಿಸಿಟರ್ ಕೌಂಟರ್ : 53
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam