ಪ್ರಧಾನ ಮಂತ್ರಿಯವರ ಕಛೇರಿ
ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
प्रविष्टि तिथि:
09 JUL 2026 6:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಲ್ಬೋರ್ನ್ ನ ಮಾರ್ವೆಲ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ವಿಶೇಷ ಸದ್ಭಾವನೆಯ ಸಂಕೇತವಾಗಿ, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಅವರೂ ಸಹ ಈ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ತಮಗೆ ನೀಡಿದ ಸೌಹಾರ್ದಯುತ ಸ್ವಾಗತಕ್ಕಾಗಿ ಭಾರತೀಯ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿ ಅಲ್ಬನೀಸ್ ಅವರ ಘನ ಉಪಸ್ಥಿತಿ ಹಾಗೂ ಭಾರತೀಯ ಸಮುದಾಯದ ಕಲ್ಯಾಣ ಸೇರಿದಂತೆ ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧಗಳ ಬಗ್ಗೆ ಅವರಿಗಿರುವ ದೃಢವಾದ ಬದ್ಧತೆಗಾಗಿ ಪ್ರಧಾನಮಂತ್ರಿಯವರು ಕೃತಜ್ಞತೆ ವ್ಯಕ್ತಪಡಿಸಿದರು. ಕಳೆದ ದಶಕದಲ್ಲಿ ಉಭಯ ದೇಶಗಳ ಪಾಲುದಾರಿಕೆಯಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಉಭಯ ಆರ್ಥಿಕತೆಗಳ ನಡುವಿನ ಪೂರಕತೆಗಳು ಭಾರತ ಮತ್ತು ಆಸ್ಟ್ರೇಲಿಯಾವನ್ನು ಸುರಕ್ಷಿತ, ಸಮೃದ್ಧ ಮತ್ತು ಚೇತರಿಕೆ ಹೊಂದಿದ ಪಾಲುದಾರಿಕೆಯನ್ನು ರೂಪಿಸುವಲ್ಲಿ ನೈಸರ್ಗಿಕ ಪಾಲುದಾರರನ್ನಾಗಿ ಮಾಡಿದೆ ಎಂದು ಅವರು ಒತ್ತಿ ಹೇಳಿದರು.
ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯದವರು ಎರಡು ದೇಶಗಳ ಸಂಬಂಧಕ್ಕೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಅವರನ್ನು ಎರಡೂ ದೇಶಗಳ ನಡುವಿನ 'ಜೀವಂತ ಸೇತುವೆ' ಎಂದು ಬಣ್ಣಿಸಿದರು. ಭಾರತೀಯ ಸಮುದಾಯವು ಆಸ್ಟ್ರೇಲಿಯಾದ ಸಾಮಾಜಿಕ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವಾಗಲೂ, ತಮ್ಮ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸಿಕೊಂಡು ಬಂದಿದೆ ಮತ್ತು ಸ್ಥಳೀಯ ಜನರೊಂದಿಗೆ ತಮ್ಮ ಬಣ್ಣ, ಆತ್ಮೀಯತೆ ಹಾಗೂ ಚೈತನ್ಯವನ್ನು ಹಂಚಿಕೊಳ್ಳುತ್ತಿದೆ ಎನ್ನುವುದರ ಬಗ್ಗೆ ಅವರು ಗಮನ ಸೆಳೆದರು. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಸಮುದಾಯ ಮತ್ತು ಭಾರತದಲ್ಲಿ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್ ಗಳನ್ನು ತೆರೆಯುತ್ತಿರುವ ಹೆಚ್ಚುತ್ತಿರುವ ಸಂಖ್ಯೆಯ ಬಗ್ಗೆ ಹೇಳಿದ ಅವರು, ಶಿಕ್ಷಣವು ದ್ವಿಪಕ್ಷೀಯ ಸಂಬಂಧದ ಅತ್ಯಂತ ಬಲವಾದ ಸ್ತಂಭಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ನಿರಂತರ ಉನ್ನತ ಬೆಳವಣಿಗೆ, ನೀತಿ ಸುಧಾರಣೆಗಳು, ಡಿಜಿಟಲ್ ಕ್ರಾಂತಿ ಮತ್ತು ಮುಂದಿನ ಪೀಳಿಗೆಯ ಮೂಲಸೌಕರ್ಯ ಅಭಿವೃದ್ಧಿಯ ಆಧಾರದ ಮೇಲೆ ಭಾರತದಲ್ಲಿ ನಡೆಯುತ್ತಿರುವ ಕ್ಷಿಪ್ರ ಪ್ರಗತಿಯನ್ನು ಪ್ರಧಾನಮಂತ್ರಿಯವರು ಸವಿಸ್ತಾರವಾಗಿ ವಿವರಿಸಿದರು. ಸಂವಹನ ತಂತ್ರಜ್ಞಾನ, ಸೆಮಿಕಂಡಕ್ಟರ್ಗಳು, ಸ್ಮಾರ್ಟ್ ಫೋನ್ ಉತ್ಪಾದನೆ ಮತ್ತು 'ಮೇಕ್ ಇನ್ ಇಂಡಿಯಾ' ರಕ್ಷಣಾ ರಫ್ತು ಕ್ಷೇತ್ರಗಳಲ್ಲಿ ದೇಶವು ಹೊಸ ದಾಪುಗಾಲುಗಳನ್ನು ಇಡುತ್ತಿದೆ ಎಂದು ಅವರು ಹೇಳಿದರು. ಭಾರತದ ಪ್ರಜಾಪ್ರಭುತ್ವದ ಶಕ್ತಿಯು ಅದರ ಪ್ರತಿಭೆ, ತಂತ್ರಜ್ಞಾನ ಮತ್ತು ನಾವೀನ್ಯತೆಗಳೊಂದಿಗೆ ಸೇರಿಕೊಂಡು, ಅದರ ಜಾಗತಿಕ ಪಾಲುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ತಿಳಿಸಿದರು. ಭಾರತದ ದೃಷ್ಟಿಕೋನವು ಕೇವಲ ತನ್ನದೇ ಪ್ರಗತಿಗೆ ಸೀಮಿತಿವಾಗಿಲ್ಲ, ಬದಲಿಗೆ ತನ್ನ ಸ್ನೇಹಿತರು ಮತ್ತು ಪಾಲುದಾರರೊಂದಿಗೆ ಕೈಜೋಡಿಸಿ ಮುನ್ನಡೆಯುವುದಾಗಿದೆ ಎಂದು ಅವರು ಒತ್ತಿ ಹೇಳಿದರು. 2047ರ ವೇಳೆಗೆ 'ವಿಕಸಿತ ಭಾರತ'ವನ್ನು ನಿರ್ಮಿಸುವ ಗುರಿಯನ್ನು ಸಾಧಿಸಲು ಕಲ್ಪನೆಗಳು ಮತ್ತು ಪರಿಣತಿಯೊಂದಿಗೆ ಕೊಡುಗೆ ನೀಡುವಂತೆ ಪ್ರಧಾನಮಂತ್ರಿಯವರು ಭಾರತೀಯ ಸಮುದಾಯಕ್ಕೆ ಕರೆ ನೀಡಿದರು. ಪ್ರಧಾನಮಂತ್ರಿಯವರ ಪೂರ್ಣ ಭಾಷಣವನ್ನು ಈ ಲಿಂಕ್ ನಲ್ಲಿ ನೋಡಬಹುದು.[link]
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ವೃತ್ತಿಪರರು, ಉದ್ಯಮಿಗಳು, ಸಂಶೋಧಕರು, ಸಮುದಾಯದ ಮುಖಂಡರು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಭಾರತೀಯ ಸಮುದಾಯದವರು ಭಾಗವಹಿಸಿದ್ದರು. ಈ ಸಭೆಯು ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧದ ವೈಶಿಷ್ಟ್ಯವಾಗಿರುವ ಜನರ ನಡುವಿನ ಆಳವಾದ ಬಾಂಧವ್ಯವನ್ನು ಪ್ರತಿಬಿಂಬಿಸಿತು. ಆಸ್ಟ್ರೇಲಿಯಾವು ಸುಮಾರು ಹತ್ತು ಲಕ್ಷ ಭಾರತೀಯ ಮೂಲದವರಿಗೆ ನೆಲೆಯಾಗಿದೆ.
*****
(रिलीज़ आईडी: 2283203)
आगंतुक पटल : 9
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam