ಹಣಕಾಸು ಸಚಿವಾಲಯ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಸಂಪೂರ್ಣ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಜುಲೈ 15, 2026 ರವರೆಗೆ ಸರ್ಕಾರ ವಿಸ್ತರಿಸಿದೆ
प्रविष्टि तिथि:
30 JUN 2026 5:20PM by PIB Bengaluru
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾದ ಅಡೆತಡೆಗಳ ಹಿನ್ನೆಲೆಯಲ್ಲಿ, ಸರ್ಕಾರವು ಈ ಹಿಂದೆ ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ ಆಮದಿನ ಮೇಲೆ 30 ಜೂನ್ 2026 ರವರೆಗೆ ತಾತ್ಕಾಲಿಕ ಮತ್ತು ನಿರ್ದಿಷ್ಟ ಪರಿಹಾರವಾಗಿ ಸಂಪೂರ್ಣ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ನೀಡಿತ್ತು.
ಈ ಅವಧಿಯಲ್ಲಿ ಭಾರತೀಯ ಪೆಟ್ರೋಲಿಯಂ ಕಂಪನಿಗಳಿಗೆ ಎಲ್ ಪಿ ಜಿ ಉತ್ಪಾದನೆಯ ಮೇಲೆ ಹೆಚ್ಚಿನ ಗಮನ ಹರಿಸಲು ಸೂಚಿಸಲಾಗಿದ್ದರಿಂದ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಕೆಮಿಕಲ್ಸ್‌ಗಳ ಪರ್ಯಾಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ವಿನಾಯಿತಿಯನ್ನು ನೀಡಲಾಗಿತ್ತು. ಸದ್ಯ ಪರಿಸ್ಥಿತಿಯು ಹಂತಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ, ಬಾಧಿತ ವಲಯಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಹಳೆಯ ಸ್ಥಿತಿಗೆ ಬದಲಾಗಲು ಅನುಕೂಲ ಮಾಡಿಕೊಡುವ ಸಲುವಾಗಿ, ಸದರಿ ವಿನಾಯಿತಿಯನ್ನು ಮತ್ತೆ 15 ದಿನಗಳ ಅವಧಿಗೆ, ಅಂದರೆ 15 ಜೂನ್ 2026 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ವಿನಾಯಿತಿಗೆ ಒಳಪಡುವ ಉತ್ಪನ್ನಗಳ ಪಟ್ಟಿಯು ಈ ಹಿಂದೆ ಸೂಚಿಸಿದಂತೆಯೇ ಇರಲಿದೆ.
ಭಾರತದ ಉತ್ಪಾದನಾ ವಲಯವನ್ನು ಬೆಂಬಲಿಸಲು ಸರ್ಕಾರವು ಬದ್ಧವಾಗಿದೆ. ಮುಂಚಿನಂತೆಯೇ, ಈ ವಿನಾಯಿತಿಯು ಪೆಟ್ರೋಕೆಮಿಕಲ್ ಕಚ್ಚಾ ವಸ್ತುಗಳು ಮತ್ತು ಮಧ್ಯಂತರ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧೀಯ (ಫಾರ್ಮಾಸ್ಯುಟಿಕಲ್ಸ್), ರಾಸಾಯನಿಕಗಳು, ಆಟೋಮೊಬೈಲ್ ಬಿಡಿಭಾಗಗಳು ಮತ್ತು ಇತರ ಉತ್ಪಾದನಾ ವಿಭಾಗಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಲಯಗಳಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ. ಇದು ಅಂತಿಮ ಉತ್ಪನ್ನಗಳ ಗ್ರಾಹಕರಿಗೂ ಸಹ ಪರಿಹಾರವನ್ನು ಒದಗಿಸಲಿದೆ.
ಅಧಿಸೂಚನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹೊರಡಿಸಲಾದ ಹಿಂದಿನ ಪತ್ರಿಕಾ ಟಿಪ್ಪಣಿಯ ಲಿಂಕ್:
https://www.pib.gov.in/PressReleasePage.aspx?PRID=2248110®=3&lang=1
******
(रिलीज़ आईडी: 2279549)
आगंतुक पटल : 12