ರಾಜ್ಯಸಭಾ ಕಾರ್ಯಾಲಯ
azadi ka amrit mahotsav

ರಾಜ್ಯಸಭೆ ಸಭಾಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರಿಂದ ಹೊಸದಾಗಿ ಆಯ್ಕೆಯಾದ/ಮರು ಆಯ್ಕೆಯಾದ ಸದಸ್ಯರಿಗೆ ಇಂದು ರಾಜ್ಯಸಭಾ ಕೊಠಡಿಯಲ್ಲಿ ಪ್ರಮಾಣವಚನ ಬೋಧನೆ

प्रविष्टि तिथि: 25 JUN 2026 4:50PM by PIB Bengaluru

ರಾಜ್ಯಸಭೆ ಸಭಾಪತಿ ಮಾನ್ಯ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಹೊಸದಾಗಿ ಚುನಾಯಿತರಾದ / ಮರು ಆಯ್ಕೆಯಾದ ಹತ್ತು ಸದಸ್ಯರಾದ ಶ್ರೀ ಪ್ರವೀಣ್ ಚಕ್ರವರ್ತಿ, ಶ್ರೀ ದೇಬಾಶಿಶ್ ಸಾಮಂತರಾಯ್, ಶ್ರೀ ಸನಾ ಸತೀಶ್ ಬಾಬು, ಶ್ರೀ ವಿಜಯ್ ಚಿಂತಕಯಾಲ, ಶ್ರೀ ಭಾಷ್ಯಂ ರಾಮ ಕೃಷ್ಣ, ಶ್ರೀ ಲಿಂಗಮನೇನಿ ರಮೇಶ್, ಶ್ರೀ ರಾಜೇಶ್ ಪರಮಾನಂದ್ ಶುಕ್ಲಾ, ಶ್ರೀ ಬೈದ್ಯನಾಥ್ ರಾಮ್, ಶ್ರೀ ನಾಥ್ವಾನಿ‌ ಪರಿಮಳ್ ಮತ್ತು ಶ್ರೀ ತೈ ತಗಾಕ್ ಅವರಿಗೆ ರಾಜ್ಯಸಭಾ ಸಭಾಂಗಣದಲ್ಲಿ ಇಂದು ಪ್ರಮಾಣ ವಚನ ಬೋಧಿಸಿದರು.

ಐವರು ಸದಸ್ಯರು ಹಿಂದಿಯಲ್ಲಿ, ಒಬ್ಬರು ಇಂಗ್ಲಿಷ್‌ ನಲ್ಲಿ, ಒಬ್ಬರು ತಮಿಳಿನಲ್ಲಿ ಮತ್ತು ಮೂವರು ತೆಲುಗು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಾಲ್ವರು ಸದಸ್ಯರು ಆಂಧ್ರಪ್ರದೇಶ ರಾಜ್ಯದವರಾಗಿದ್ದು, ಇಬ್ಬರು ಜಾರ್ಖಂಡ್‌ ಹಾಗೂ ತಮಿಳುನಾಡು, ಗುಜರಾತ್, ಅರುಣಾಚಲ ಪ್ರದೇಶ ಮತ್ತು ಒಡಿಶಾದ ತಲಾ ಒಬ್ಬರು ಸೇರಿ ಒಟ್ಟು ಹತ್ತು ಜನರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಖಾತೆ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘ್ ವಾಲ್, ಸದನದ ಕೆಲವು ಸದಸ್ಯರು; ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ. ಮೋದಿ, ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(रिलीज़ आईडी: 2277863) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Tamil