ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಆ್ಯಂಡಿ ಜಸ್ಸಿ ಅವರಿಂದ ಪ್ರಧಾನಮಂತ್ರಿ ಭೇಟಿ
प्रविष्टि तिथि:
25 JUN 2026 2:30PM by PIB Bengaluru
ಅಮೆಜಾನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಶ್ರೀ ಆ್ಯಂಡಿ ಜಸ್ಸಿ ಅವರು ನವದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಭಾರತದಲ್ಲಿ ಅಮೆಜಾನ್ ದಾಖಲೆಯ 48 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದು, ಇದು ಭಾರತದಲ್ಲಿ ಹೂಡಿಕೆಗೆ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಆಸಕ್ತಿಯ ಸಂಕೇತವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
ಶ್ರೀ ಆ್ಯಂಡಿ ಜಸ್ಸಿ ಅವರೊಂದಿಗೆ ಉತ್ತಮ ಸಭೆ. ಭಾರತದಲ್ಲಿ ಅಮೆಜಾನ್ ನ ದಾಖಲೆಯ $48 ಶತಕೋಟಿ ಹೂಡಿಕೆಯನ್ನು ನಾನು ಸ್ವಾಗತಿಸುತ್ತೇನೆ. ಇದು ನಮ್ಮ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಅದೇ ವೇಳೆ, ಭಾರತದಲ್ಲಿ ಹೂಡಿಕೆಗೆ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಆಸಕ್ತಿಯನ್ನೂ ತೋರಿಸಿದೆ!
@amazon
*****
(रिलीज़ आईडी: 2277757)
आगंतुक पटल : 10
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Assamese
,
Manipuri
,
Bengali
,
Bengali-TR
,
Gujarati
,
Tamil
,
Telugu