ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2026ರ ಜೂನ್ 26ರ ಶುಕ್ರವಾರದಂದು ನವದೆಹಲಿಯಲ್ಲಿ ನಡೆಯಲಿರುವ ʻಎನ್‌ಸಿಓಆರ್‌ಡಿʼಯ 10ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ
ಕೇಂದ್ರ ಗೃಹ ಸಚಿವರು "ಮಾದಕವಸ್ತು ನಿಯಂತ್ರಣ ಕುರಿತ ಮುನ್ನೋಟದ ದಾಖಲೆ (2026-2029)" ಮತ್ತು "ಎನ್‌ಸಿಬಿ ವಾರ್ಷಿಕ ವರದಿ- 2025" ಬಿಡುಗಡೆ ಮಾಡಲಿದ್ದಾರೆ
ಮಾದಕ ವಸ್ತು ಮುಕ್ತ ಭಾರತ ನಿರ್ಮಿಸುವ ಪ್ರಧಾನಮಂತ್ರಿ ಮೋದಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಈ ಮುನ್ನೋಟದ ದಾಖಲೆಯು ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ
6,000 ಕೋಟಿ ರೂ. ಮೌಲ್ಯದ 2,09,500 ಕೆ.ಜಿ. ಮಾದಕ ದ್ರವ್ಯಗಳನ್ನು ನಾಶಪಡಿಸಲು ಅನುಕೂಲವಾಗುವಂತೆ ಹದಿನೈದು ದಿನಗಳ ʻಆನ್‌ಲೈನ್ ಮಾದಕ ದ್ರವ್ಯ ವಿಲೇವಾರಿ ಅಭಿಯಾನʼಕ್ಕೆ ಚಾಲನೆ ನೀಡಲಿರುವ ಶ್ರೀ ಅಮಿತ್ ಶಾ
ಜಮ್ಮು ಮತ್ತು ಗುವಾಹಟಿಯಲ್ಲಿ ಎನ್‌ಸಿಬಿ ವಲಯ ಕಚೇರಿಗಳನ್ನು ಉದ್ಘಾಟಿಸಲಿರುವ ಶ್ರೀ ಅಮಿತ್ ಶಾ
ಮಾದಕ ದ್ರವ್ಯ ಪಿಡುಗನ್ನು ಎದುರಿಸಲು ಸಾಮೂಹಿಕ ರಾಷ್ಟ್ರೀಯ ಪ್ರಯತ್ನವನ್ನು ಪರಿಶೀಲಿಸಲು ಮತ್ತು ಮೌಲ್ಯಮಾಪನ ಮಾಡಲು ಉನ್ನತ ಮಟ್ಟದ ಸಭೆ ನಡೆಯಲಿದೆ
प्रविष्टि तिथि:
24 JUN 2026 2:33PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2026ರ ಜೂನ್ 26ರ ಶುಕ್ರವಾರದಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಮಾದಕವಸ್ತು-ಸಮನ್ವಯ ಕೇಂದ್ರದ (ಎನ್‌ಸಿಒಆರ್‌ಡಿ) 10ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಆಯೋಜಿಸುತ್ತಿರುವ ಈ ಸಭೆಯು, ಮಾದಕವಸ್ತು ಮುಕ್ತ ಭಾರತ ಕುರಿತಾದ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ಸಾಧಿಸಲು ಸರ್ಕಾರದ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಸಭೇಯು 44 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಪ್ರಮುಖ ಮಧ್ಯಸ್ಥಗಾರರನ್ನು ಜೊತೆಗೆ ರಾಜ್ಯ ಸರ್ಕಾರಗಳು ಮತ್ತು ಮಾದಕ ವಸ್ತು ಕಾನೂನು ಜಾರಿ ಸಂಸ್ಥೆಗಳ 108 ಪ್ರತಿನಿಧಿಗಳನ್ನು ಹೈಬ್ರಿಡ್ ಮೋಡ್‌ನಲ್ಲಿ ಒಟ್ಟುಗೂಡಿಸುತ್ತದೆ.
ಈ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವರು "ಮಾದಕ ದ್ರವ್ಯ ನಿಯಂತ್ರಣ ಕುರಿತ ಮುನ್ನೋಟದ ದಾಖಲೆ (2026-2029)” ಬಿಡುಗಡೆ ಮಾಡಲಿದ್ದಾರೆ. ಸಂಬಂಧಪಟ್ಟ ಕೇಂದ್ರ ಸರ್ಕಾರದ ಇಲಾಖೆಗಳು, ಮಾದಕ ವಸ್ತು ಕಾನೂನು ಜಾರಿ ಸಂಸ್ಥೆಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಶ್ರೇಣಿಯ ಸಮಾಲೋಚನೆಗಳ ಮೂಲಕ ಸಿದ್ಧಪಡಿಸಲಾದ ಈ ಮುನ್ನೋಟ ದಾಖಲೆಯು ಮಾದಕ ಮಾದಕ ಪಿಡುಗಿನ ಬೇಡಿಕೆ-ಕಡಿತ, ಪೂರೈಕೆ-ಕಡಿತ ಮತ್ತು ಹಾನಿ-ಕಡಿತ ಅಂಶಗಳನ್ನು ಪರಿಹರಿಸಲು ಮಾರ್ಗಸೂಚಿಯನ್ನು ಒದಗಿಸುತ್ತದೆ. ಜಾಲ ಕೇಂದ್ರಿತ ಜಾರಿ ವಿಧಾನವನ್ನು ಕಲ್ಪಿಸುವ ಮಾರ್ಗಸೂಚಿಯು ಸಂಶ್ಲೇಷಿತ ಔಷಧಗಳು, ಡಾರ್ಕ್ ನೆಟ್ ಸಕ್ರಿಯಗೊಳಿಸಿದ ಕಳ್ಳಸಾಗಣೆ, ಯುವಕರನ್ನು ಮಾದಕ ದ್ರವ್ಯಗಳಿಂದ ದೂರವಿಡುವುದು, ಮಾದಕ ದ್ರವ್ಯ ಬಳಕೆದಾರರಿಗೆ ಚಿಕಿತ್ಸೆ ಮತ್ತು ಪುನರ್ವಸತಿ ಕೇಂದ್ರಗಳ ಸೌಲಭ್ಯ ವಿಸ್ತರಿಸುವ ಸವಾಲುಗಳನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸಹ ಒಳಗೊಂಡಿದೆ. ಈ ದಾಖಲೆಯು ಜಾರಿ, ಬೇಡಿಕೆ ಕಡಿತ, ಪುನರ್ವಸತಿ, ಸಾರ್ವಜನಿಕ ಜಾಗೃತಿ, ಸಾಮರ್ಥ್ಯ ವರ್ಧನೆ ಮತ್ತು ಅಂತರ-ಏಜೆನ್ಸಿ ಸಮನ್ವಯವನ್ನು ಸಂಯೋಜಿಸುತ್ತದೆ. ಜೊತೆಗೆ ಎಲ್ಲಾ ಮಧ್ಯಸ್ಥಗಾರರ ಜವಾಬ್ದಾರಿಗಳು, ಕಾಲಮಿತಿಗಳು ಮತ್ತು ಅಳೆಯಬಹುದಾದ ಗುರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಈ ಮುನ್ನೋಟದ ದಾಖಲೆಯು ಮಾದಕ ದ್ರವ್ಯಗಳ ಹಾವಳಿಯನ್ನು ನಿಗ್ರಹಿಸಲು ದೇಶಾದ್ಯಂತ ನೀತಿ ನಿರೂಪಣೆ, ಅನುಷ್ಠಾನ ಮತ್ತು ಸಾಂಸ್ಥಿಕ ಬಲವರ್ಧನೆಗೆ ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ.
ಶ್ರೀ ಅಮಿತ್ ಶಾ ಅವರು ʻಎನ್‌ಸಿಬಿ ವಾರ್ಷಿಕ ವರದಿ-2025ʼ ಅನ್ನು ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಜಮ್ಮು ಮತ್ತು ಗುವಾಹಟಿಯಲ್ಲಿ ಹೊಸದಾಗಿ ನಿರ್ಮಿಸಲಾದ ʻಎನ್‌ಸಿಬಿʼ ವಲಯ ಕಚೇರಿಗಳನ್ನು ಉದ್ಘಾಟಿಸಲಿದ್ದಾರೆ. ಮಾದಕ ದ್ರವ್ಯಗಳನ್ನು ನಾಶಪಡಿಸುವ ಗುರಿ ಹೊಂದಿರುವ ಹದಿನೈದು ವಿಶೇಷ ಅಭಿಯಾನ ʻಮಾದಕ ದ್ರವ್ಯ ವಿಲೇವಾರಿ ಅಭಿಯಾನʼಕ್ಕೆ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ. ಹದಿನೈದು ದಿನಗಳಲ್ಲಿ, 6,000 ಕೋಟಿ ರೂಪಾಯಿ ಮೌಲ್ಯದ ಸುಮಾರು 2,09,500 ಕೆಜಿ ಮಾದಕ ವಸ್ತುಗಳನ್ನು ಕಾನೂನಿನ ಪ್ರಕಾರ, ವಿವಿಧ ಕೇಂದ್ರ ಮತ್ತು ರಾಜ್ಯ ಕಾನೂನು ಜಾರಿ ಸಂಸ್ಥೆಗಳು ಭಾರತದಾದ್ಯಂತ ನಾಶಪಡಿಸುವ ನಿರೀಕ್ಷೆಯಿದೆ.
ದೇಶದಲ್ಲಿ ಮಾದಕ ದ್ರವ್ಯ ಪಿಡುಗನ್ನು ಎದುರಿಸಲು ಸಂಬಂಧಪಟ್ಟ ಎಲ್ಲಾ ಪಾಲುದಾರರು ಕೈಗೊಂಡ ಸಾಮೂಹಿಕ ಪ್ರಯತ್ನಗಳ ಸಮಗ್ರ ಪರಿಶೀಲನೆ ಮತ್ತು ಮೌಲ್ಯಮಾಪನಕ್ಕೆ ಈ ಸಭೆಯು ವೇದಿಕೆ ಒದಗಿಸುತ್ತದೆ. ಈ ಸಭೆಯು ಇದಲ್ಲಿ ಭಾಗಿಯಾದ ರಾಜ್ಯಗಳು, ಇಲಾಖೆಗಳು ಮತ್ತು ಏಜೆನ್ಸಿಗಳಿಗೆ ಪರಿಣಾಮಕಾರಿ ಮಾದಕವಸ್ತು ನಿಯಂತ್ರಣದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಹುರುಪು ಮತ್ತು ಬದ್ಧತೆಯೊಂದಿಗೆ ಮುಂದುವರಿಯಲು ಅನುವು ಮಾಡಿಕೊಡುತ್ತದೆ. ದೇಶದಲ್ಲಿ ಮಾದಕ ದ್ರವ್ಯ ಪಿಡುಗನ್ನು ಪರಿಣಾಮಕಾರಿಯಾಗಿ ಎದುರಿಸಲು ಸಂಪೂರ್ಣ ಸರ್ಕಾರದ ಕಾರ್ಯವಿಧಾನದ ಅಗತ್ಯವನ್ನು ಒತ್ತಿಹೇಳುವ ಸಲುವಾಗಿ, ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ಮಾದಕ ದ್ರವ್ಯ ಸೇವನೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗುವುದು.
ಈ ಸಭೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದಂತೆ ದೇಶದಲ್ಲಿ ಮಾದಕವಸ್ತು ಕಳ್ಳಸಾಗಣೆಯ ವಿರುದ್ಧ ಸರ್ಕಾರದ 'ಶೂನ್ಯ ಸಹಿಷ್ಣುತೆ ನೀತಿ'ಯನ್ನು ಬಲಪಡಿಸುವ ನಿರೀಕ್ಷೆಯಿದೆ.
*****
(रिलीज़ आईडी: 2277412)
आगंतुक पटल : 17
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Malayalam