ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಅಂತಾರಾಷ್ಟ್ರೀಯ ಸಹಕಾರದ ಕುರಿತು ಮಿಸ್ಟ್ರಲ್ ಎಐ ಸಿಇಒ ಆರ್ಥರ್ ಮೆಂಚ್ ಅವರೊಂದಿಗೆ ಪ್ರಧಾನಮಂತ್ರಿ ಅಭಿಪ್ರಾಯ ವಿನಿಮಯ 

ಪ್ರಕಟಣಾ ದಿನಾಂಕ: 18 JUN 2026 6:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಿಸ್ಟ್ರಲ್ ಎಐ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಆರ್ಥರ್ ಮೆಂಚ್ ಅವರೊಂದಿಗೆ ವಿಕಸನಗೊಳ್ಳುತ್ತಿರುವ ಜಾಗತಿಕ ಕೃತಕ ಬುದ್ಧಿಮತ್ತೆ (ಎಐ) ಭೂದೃಶ್ಯದ ಬಗ್ಗೆ ಒಳನೋಟವುಳ್ಳ ಚರ್ಚೆ ನಡೆಸಿದರು.

ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆ, ನಾವೀನ್ಯತೆ ಹಾಗೂ ಕೃತಕ ಬುದ್ಧಿಮತ್ತೆಯು ಮಾನವ ಕೇಂದ್ರಿತವಾಗಿ ಎಲ್ಲರನ್ನೂ ಒಳಗೊಳ್ಳುವುದನ್ನು ಖಾತರಿಪಡಿಸುವ ಅಗತ್ಯದ ಬಗ್ಗೆಯೂ  ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾಗಿ ಪ್ರಧಾನಮಂತ್ರಿ ತಿಳಿಸಿದ್ದಾರೆ.

ಎಐ ಗೆ ಸಂಬಂಧಿಸಿದ ವೈವಿಧ್ಯಮಯ ಅಂಶಗಳಲ್ಲಿ ಭಾರತದಲ್ಲಿ ಪಾಲುದಾರಿಕೆ ಅವಕಾಶಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ನಾವೀನ್ಯತೆ, ವಿಶ್ವಾಸ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವುದರ ಜೊತೆಗೆ ಮಾನವೀಯತೆಯ ಸಬಲೀಕರಣಕ್ಕೆ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

"ಮಿಸ್ಟ್ರಲ್ ಎಐ ನ ಶ್ರೀ ಆರ್ಥರ್ ಮೆಂಚ್ ಅವರೊಂದಿಗೆ ವಿಕಸನಗೊಳ್ಳುತ್ತಿರುವ ಜಾಗತಿಕ ಕೃತಕ ಬುದ್ಧಿಮತ್ತೆ (ಎಐ) ಭೂದೃಶ್ಯದ ಕುರಿತು ಒಳನೋಟವುಳ್ಳ ಚರ್ಚೆ ನಡೆಸಿದೆ. ವಿಶ್ವಾಸಾರ್ಹ ಎಐ, ನಾವೀನ್ಯತೆ ಹಾಗೂ ಕೃತಕ ಬುದ್ಧಿಮತ್ತೆಯು ಮಾನವ ಕೇಂದ್ರಿತವಾಗಿ ಎಲ್ಲರನ್ನೂ ಒಳಗೊಳ್ಳುವಂತೆ ನೋಡಿಕೊಳ್ಳುವ ಅಗತ್ಯತೆಯ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಯಿತು. 

ಎಐಗೆ ಸಂಬಂಧಿಸಿದ ವೈವಿಧ್ಯಮಯ ಅಂಶಗಳಲ್ಲಿ ಭಾರತದಲ್ಲಿ ಪಾಲುದಾರಿಕೆ ಸಾಧ್ಯತೆಗಳ ಬಗ್ಗೆಯೂ ಮಾತನಾಡಿದೆವು. ನಾವೀನ್ಯತೆ, ವಿಶ್ವಾಸ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ಜೊತೆಗೆ ಮಾನವೀಯತೆಯನ್ನು ಸಬಲಗೊಳಿಸುವ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತ ಬದ್ಧವಾಗಿದೆ.

@arthurmensch

@MistralAI”

 

*****


(ಪ್ರಕಟಣೆ ಐ.ಡಿ.: 2276553) ವಿಸಿಟರ್ ಕೌಂಟರ್ : 47