ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ನಾಳೆ ವಿಕಸಿತ ಭಾರತ ಯುವ ಸಂಸತ್ತು 2026 ಅನ್ನು ಉದ್ಘಾಟಿಸಲಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ


ಚರ್ಚೆಯಿಂದ ನಿರ್ಣಯದವರೆಗೆ: ನಾರಿ ಶಕ್ತಿ ವಂದನೆ ಕುರಿತು ಯುವಕರಿಂದ ಚರ್ಚೆ: ವಿಕಸಿತ ಭಾರತ 2047 ಗೆ ಮತ್ತಷ್ಟು ವೇಗ  
ಸಂಸದೀಯ ಕಾರ್ಯಕಲಾಪಗಳಲ್ಲಿ ನೇರ ಭಾಗಿಯಾಗಿ ಖುದ್ದು ಅನುಭವ ಪಡೆಯಲಿರುವ ಯುವಕರು: ಆಡಳಿತದ ಬಗ್ಗೆ ಪರಿವರ್ತನಾಶೀಲ ಒಳನೋಟ

ಯುವಜನರ ನೇತೃತ್ವದ ರಾಷ್ಟ್ರ ನಿರ್ಮಾಣ ಮತ್ತು ಆಡಳಿತದಲ್ಲಿ ಒಂದು ಮಹತ್ವದ ಕ್ಷಣ

प्रविष्टि तिथि: 15 JUN 2026 2:06PM by PIB Bengaluru

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು 2026ರ ಜೂನ್ 15 ರಿಂದ 17 ರವರೆಗೆ ನವದೆಹಲಿಯಲ್ಲಿ  ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರ ನೇತೃತ್ವದಲ್ಲಿ ವಿಕಸಿತ ಭಾರತ ಯುವ ಸಂಸತ್ತು 2026 ಅನ್ನು ಆಯೋಜಿಸುತ್ತಿದೆ. ರಾಷ್ಟ್ರ ಮಟ್ಟದ ವಿಕಸಿತ ಭಾರತ ಯುವ ಸಂಸತ್ ಅನ್ನು 2026ರ ಜೂನ್ 16ರಂದು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಉದ್ಘಾಟಿಸಲಿದ್ದಾರೆ. ಹಿಂದಿನ ಆವೃತ್ತಿಗಳ ಯಶಸ್ಸಿನ ಆಧಾರದ ಮೇಲೆ ಈ ಪ್ರಮುಖ ಉಪಕ್ರಮವು ಸಂಸದೀಯ ಕಲಾಪಗಳಲ್ಲಿ ಯುವಜನರ ತೊಡಗಿಸಿಕೊಳ್ಳುವಿಕೆಯನ್ನು ಮರುರೂಪಿಸುತ್ತದೆ, ಯುವ ನಾಗರಿಕರಿಗೆ ಆಡಳಿತ, ನೀತಿ ಚರ್ಚೆ ಮತ್ತು ಸಂಸದೀಯ ಕಾರ್ಯಚಟುವಟಿಕೆಗಳ ಬಗ್ಗೆ ಖುದ್ದು ತಿಳಿವಳಿಕೆಯನ್ನು ನೀಡಲಿದೆ.

ವಿಕಸಿತ ಭಾರತ ಯುವ ಸಂಸತ್ತು ಕೇವಲ ಒಂದು ಕಾರ್ಯಕ್ರಮಕ್ಕಿಂತ ಹೆಚ್ಚಿನದಾಗಿದೆ - ಇದು ಭಾರತದ ಯುವಕರ ಶಕ್ತಿ, ಆಲೋಚನೆಗಳು ಮತ್ತು ಆಕಾಂಕ್ಷೆಗಳನ್ನು ರಾಷ್ಟ್ರೀಯ ಸಂಭಾಷಣೆಗೆ ಒಳಪಡಿಸುವ ಒಂದು ಚಳವಳಿಯಾಗಿದೆ. ಸೆಂಟ್ರಲ್ ಹಾಲ್‌ನಲ್ಲಿ ರೂಪಿಸಲಾದ ನಿರ್ಣಯಗಳು ಈ ಮೂರು ದಿನಗಳ ನಂತರವೂ ಪ್ರತಿಧ್ವನಿಸುತ್ತವೆ, ವಿಕಸಿತ ಭಾರತ 2047 ಕಡೆಗೆ ಭಾರತದ ಪಯಣದ ಮಾಲೀಕತ್ವವನ್ನು ಪಡೆಯಲು ಯುವ ನಾಯಕರ ಪೀಳಿಗೆಯನ್ನು ಉತ್ತೇಜಿಸುತ್ತವೆ.

ಈ ಕಾರ್ಯಕ್ರಮವು ಮೂರು ಪ್ರಗತಿಪರ ಹಂತಗಳಲ್ಲಿ ಒಳಗೊಂಡಿದ್ದು, ಪ್ರತಿಯೊಂದರಲ್ಲೂ ಯುವ ಭಾಗವಹಿಸುವಿಕೆಯನ್ನು ಹೆಚ್ಚಿಸುವಂತೆ ವಿನ್ಯಾಸಗೊಳಿಸಲಾಗಿದೆ:

ಜಿಲ್ಲಾ ನೋಡಲ್ ಸುತ್ತು :

  • 50 ವರ್ಷಗಳ ತುರ್ತು ಪರಿಸ್ಥಿತಿಯ ಕುರಿತು ವ್ಯಾಪಕ ಚರ್ಚೆಗಳು: 757 ನೋಡಲ್ ವಿಶ್ವವಿದ್ಯಾಲಯಗಳು/ ಸಂಸ್ಥೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕಾಗಿ ಪಾಠಗಳನ್ನು ನಡೆಸಲಾಗಿದ್ದು, ಇದು ದೇಶದ ಮೂಲೆ ಮೂಲೆಗೆ ಸಂವಾದಕ್ಕೆ ಕಾರಣವಾಯಿತು.

  • ಪ್ರತಿ ಜಿಲ್ಲೆಯಿಂದ ಅಗ್ರ 5 ಭಾಗವಹಿಸುವವರಿಗೆ ರಾಜ್ಯ ಸುತ್ತಿನಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ.

ರಾಜ್ಯ ಮಟ್ಟದ ಸುತ್ತು :

  • ಎಲ್ಲಾ ರಾಜ್ಯಗಳಾದ್ಯಂತ ರಾಜ್ಯ ವಿಧಾನ ಸಭೆಗಳು ಮತ್ತು ಪ್ರಮುಖ ಸರ್ಕಾರಿ ಸ್ಥಳಗಳಲ್ಲಿ ನಡೆಸಲಾಯಿತು. ಈ ಸುತ್ತುಗಳು ಯುವಜನರಿಗೆ ಕೇಂದ್ರ ಬಜೆಟ್ 2026: ಯುವ ಶಕ್ತಿ ಆಧರಿಸಿದ ಬಜೆಟ್‌ಗೆ ಸಂಬಂಧಿಸಿದ ಪ್ರಾದೇಶಿಕ ಆಡಳಿತ ರಚನೆಗಳ ಬಗ್ಗೆ ಅರ್ಥಪೂರ್ಣ ನೋಟವನ್ನು ಕಟ್ಟಿಕೊಟ್ಟಿತು.

  • ರಾಜ್ಯ ಸ್ಪೀಕರ್‌ಗಳು ಮತ್ತು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಗಳ ಸಾರ್ವಜನಿಕ ಭಾಷಣದಲ್ಲಿ ಯುವಜನರ ಧ್ವನಿಯ ಸ್ಥಾನ ಪ್ರಾಮುಖ್ಯತೆಗಳನ್ನು ಪಡೆದವು.

ರಾಷ್ಟ್ರೀಯ ಸುತ್ತು (2026 ಜೂನ್ 15 ರಿಂದ 17 ರವರೆಗೆ):

  • ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅತ್ಯುತ್ತಮ ಪ್ರದರ್ಶನ ನೀಡುವ ಪ್ರತಿನಿಧಿಗಳು ನವದೆಹಲಿಯಲ್ಲಿ ಗ್ರ್ಯಾಂಡ್ ಫಿನಾಲೆಗಾಗಿ ಒಗ್ಗೂಡುತ್ತಾರೆ.

  • ರಾಷ್ಟ್ರೀಯ ಸುತ್ತಿನಲ್ಲಿ ಚಟುವಟಿಕೆಗಳ ಸಮೃದ್ಧ ಕಾರ್ಯಕ್ರಮಗಳಿರಲಿವೆ.

  • ಪ್ರಾಸ್ತಾವಿಕ ನುಡಿಗಳು: ಪ್ರತಿ ತಂಡದಿಂದ ಒಬ್ಬ ಪ್ರತಿನಿಧಿ ನಾರಿ ಶಕ್ತಿ ವಂದನ: ಒಳಗೊಳ್ಳುವಿಕೆ ವೇಗಗೊಳಿಸುವುದು ಮತ್ತು ವಿಕಸಿತ ಭಾರತ 2047 ಕುರಿತು ಸದನವನ್ನು ಉದ್ದೇಶಿಸಿ ತಲಾ 3 ನಿಮಿಷಗಳ ಕಾಲ ಮಾತನಾಡಲಿದ್ದಾರೆ.

  • ಪ್ರಶ್ನೋತ್ತರ ಕಲಾಪ: ನಿಜವಾದ ಸಂಸದೀಯ ಮನೋಭಾವದ ರೀತಿಯಲ್ಲಿ ತಂಡಗಳು ಪ್ರಶ್ನೆಗಳನ್ನು ಕೇಳುತ್ತವೆ ಮತ್ತು ಅವುಗಳಿಗೆ ಪ್ರತಿಕ್ರಿಯಿಸುತ್ತವೆ - ಪ್ರಶ್ನೆಗೆ 3 ನಿಮಿಷಗಳು, ಉತ್ತರಿಸಲು 3 ನಿಮಿಷಗಳು – ನಂತರ ಸಾಮೂಹಿಕ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯತ್ತ ಸದನ ಸಾಗಲಿದೆ.

  • ಮಾಸ್ಟರ್ಕ್ಲಾಸ್: ಒಬ್ಬ ಶ್ರೇಷ್ಠ ವ್ಯಕ್ತಿ ಭಾಷಣ ಮತ್ತು ಸಾರ್ವಜನಿಕ ಭಾಷಣದ ಕುರಿತು ಮಾಸ್ಟರ್‌ಕ್ಲಾಸ್ ನಡೆಸಲಿದ್ದಾರೆ, ಇದು ಭಾಗವಹಿಸುವ ಯುವಕರ ನಾಯಕತ್ವದ ವ್ಯಕ್ತಿತ್ವವನ್ನು ಹರಿತಗೊಳಿಸುತ್ತದೆ.

  • ಪಿಎಂ ಸಂಗ್ರಹಾಲಯ ಭೇಟಿ: ಪ್ರತಿನಿಧಿಗಳು ಪ್ರಧಾನ ಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡುವ ಮೂಲಕ ಭಾರತದ ಶ್ರೀಮಂತ ರಾಜಕೀಯ ಪರಂಪರೆ ಮತ್ತು ನಾಯಕತ್ವದ ಪರಂಪರೆಯ ಅನುಭವ ಪಡೆಯಲಿದ್ದಾರೆ.

  • ಹೊಸ ಸಂಸತ್ಭವನಕ್ಕೆ ಭೇಟಿ: ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಭಾರತದ ಹೊಸ ಸಂಸತ್ತಿನ ಕಟ್ಟಡದ ಸ್ಪೂರ್ತಿದಾಯಕ ದರ್ಶನದ ಮೂಲಕ ರಾಷ್ಟ್ರದ ಪ್ರಜಾಪ್ರಭುತ್ವದ ಕೇಂದ್ರ ಸ್ಥಾನದ ಅನುಭವ ಕಟ್ಟಿಕೊಡಲಿದೆ.

  • ಪ್ರಶಸ್ತಿ ಪ್ರದಾನ ಸಮಾರಂಭ: ಭಾಗವಹಿಸುವ ಯುವ ಜನರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ವಿಕಸಿತ ಭಾರತ ಯುವ ಸಂಸತ್ತು 2026 ಪ್ರಶಸ್ತಿಗಳನ್ನು ಜೂನ್ 17 ರಂದು ಪ್ರದಾನ ಮಾಡಲಾಗುವುದು.

 

*****


(रिलीज़ आईडी: 2273046) आगंतुक पटल : 16
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Tamil , Telugu_Vw , Telugu , Malayalam