ಕೃಷಿ ಸಚಿವಾಲಯ
ಭಾರತದ ಮಾವಿನ ಹಣ್ಣುಗಳ ಆಮದಿಗೆ ನೇಪಾಳದಿಂದ ಯಾವುದೇ ನಿಷೇಧವಿಲ್ಲ
प्रविष्टि तिथि:
10 JUN 2026 8:04PM by PIB Bengaluru
ಕೆಲವು ಮಾಧ್ಯಮ ವರದಿಗಳು ನೇಪಾಳವು ಭಾರತದಿಂದ ಮಾವಿನ ಹಣ್ಣುಗಳ ಆಮದಿನ ಮೇಲೆ ನಿಷೇಧ ಅಥವಾ ಅಮಾನತು ವಿಧಿಸಿದೆ ಎಂದು ತಿಳಿಸಿರುವುದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಗಮನಕ್ಕೆ ಬಂದಿದೆ. ಈ ವರದಿಗಳು ವಾಸ್ತವಿಕವಾಗಿ ತಪ್ಪಾಗಿವೆ ಮತ್ತು ದಾರಿತಪ್ಪಿಸುತ್ತಿವೆ.
ನೇಪಾಳ ಸರ್ಕಾರವು ತನ್ನ ಸಸ್ಯ ಕ್ವಾರಂಟೈನ್ ಮತ್ತು ಕೀಟನಾಶಕ ನಿರ್ವಹಣಾ ಕೇಂದ್ರ (ನೇಪಾಳದ ರಾಷ್ಟ್ರೀಯ ಸಸ್ಯ ಸಂರಕ್ಷಣಾ ಸಂಸ್ಥೆ) ಮೂಲಕ ಜೂನ್ 10, 2026 ರಂದು ಭಾರತೀಯ ಮಾವಿನ ಹಣ್ಣುಗಳ ಆಮದಿನ ಮೇಲೆ ಯಾವುದೇ ರೀತಿಯ ನಿಷೇಧ ಹೇರಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ನಿಗದಿತ ಫೈಟೊಸಾನಿಟರಿ ಅವಶ್ಯಕತೆಗಳಿಗೆ ಒಳಪಟ್ಟು ಆಮದುಗಳನ್ನು ಅನುಮತಿಸಲಾಗುತ್ತಿದೆ. ಈ ಅವಶ್ಯಕತೆಗಳನ್ನು ಪಾಲಿಸಿದ ನಂತರ ಮತ್ತು ಭಾರತ ಸರ್ಕಾರವು ನೀಡಿದ ಮಾನ್ಯ ಫೈಟೊಸಾನಿಟರಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ನಂತರ ಆಮದು ಪರವಾನಗಿಗಳು ಮತ್ತು ಬಿಡುಗಡೆ ಆದೇಶಗಳನ್ನು ನೀಡಲಾಗುತ್ತಿದೆ.
ನೇಪಾಳಕ್ಕೆ ಭಾರತೀಯ ಮಾವಿನ ಹಣ್ಣುಗಳ ರಫ್ತು ನಿರಂತರವಾಗಿ ಮುಂದುವರಿಯುತ್ತಿದೆ. ಜನವರಿ 2026 ರಿಂದ, 2005 ಮೆಟ್ರಿಕ್ ಟನ್ ಮಾವಿನ ಹಣ್ಣುಗಳನ್ನು ಒಳಗೊಂಡ ಒಟ್ಟು 149 ಸರಕುಗಳನ್ನು ನೇಪಾಳಕ್ಕೆ ರಫ್ತು ಮಾಡಲಾಗಿದೆ. ಕೇವಲ ಜೂನ್ 2026 ರ ಅವಧಿಯಲ್ಲಿ ಮಾತ್ರ, ಒಟ್ಟು 266 ಮೆಟ್ರಿಕ್ ಟನ್ 18 ಸರಕುಗಳನ್ನು ಇಲ್ಲಿಯವರೆಗೆ ರಫ್ತು ಮಾಡಲಾಗಿದೆ.
ನೇಪಾಳ ಇತ್ತೀಚೆಗೆ ಬಿಸಿನೀರಿನ ಸಂಸ್ಕರಣೆಯ (ಹೆಚ್ ಡಬ್ಲ್ಯೂ ಟಿ) ಅವಶ್ಯಕತೆ ಸೇರಿದಂತೆ ಕೆಲವು ಆಮದು ಷರತ್ತುಗಳನ್ನು ಪರಿಷ್ಕರಿಸಿದ್ದರೂ, ನೇಪಾಳದ ನಿಗದಿತ ಅವಶ್ಯಕತೆಗಳಿಗೆ ಅನುಗುಣವಾಗಿ ರಫ್ತುಗಳನ್ನು ಸುಗಮಗೊಳಿಸುವುದನ್ನು ಭಾರತ ಮುಂದುವರೆಸಿದೆ. ಇದೇ ಸಂದರ್ಭದಲ್ಲಿ, ಯಾವುದೇ ಪೂರ್ವ ಸಮಾಲೋಚನೆಯಿಲ್ಲದೆ ಹೊಸ ಫೈಟೊಸಾನಿಟರಿ ಕ್ರಮಗಳ ಪರಿಚಯದ ಬಗ್ಗೆ ಭಾರತ ತನ್ನ ಕಳವಳಗಳನ್ನು ಕೂಡ ತಿಳಿಸಿದೆ ಮತ್ತು ಡಬ್ಲ್ಯೂ.ಟಿ.ಜಿ.ಎಂ. ಎಸ್.ಪಿ.ಎಸ್. ಒಪ್ಪಂದ ಮತ್ತು ಅಂತರರಾಷ್ಟ್ರೀಯ ಸಸ್ಯ ಸಂರಕ್ಷಣಾ ಸಮಾವೇಶ (ಐಪಿಪಿಸಿ) ಚೌಕಟ್ಟಿನ ಅನುಸಾರವಾಗಿ ಸೂಕ್ತ ದ್ವಿಪಕ್ಷೀಯ ಮಾರ್ಗಗಳ ಮೂಲಕ ಈ ವಿಷಯವನ್ನು ಚರ್ಚಿಸಿ ಅನುಸರಿಸಲಾಗುತ್ತಿದೆ.
ಆಮದು ಮತ್ತು ರಫ್ತು ನಿಯಮಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಕೇವಲ ಅಧಿಕೃತ ಸಂವಹನಗಳನ್ನು ಅವಲಂಬಿಸಲು ಮತ್ತು ನೇಪಾಳಕ್ಕೆ ಭಾರತೀಯ ಮಾವು ರಫ್ತಿನ ವಿಚಾರಗಳಲ್ಲಿ ಯಾವುದೇ ಆಪಾದಿತ ವ್ಯಾಪಾರ ನಿರ್ಬಂಧಗಳ ಕುರಿತು ಪರಿಶೀಲಿಸದ ಸುಳ್ಳು ವರದಿಗಳನ್ನು ನಿರ್ಲಕ್ಷಿಸಲು ಪಾಲುದಾರರು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಈ ಮೂಲಕ ಸೂಚಿಸಲಾಗಿದೆ.
*****
(रिलीज़ आईडी: 2271598)
आगंतुक पटल : 8
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam