ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2026ಕ್ಕೆ ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2026


ನಾಮನಿರ್ದೇಶನಗಳನ್ನು ಅಧಿಕೃತ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ ಆದ https://awards.gov.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ  ಸಲ್ಲಿಸಬಹುದು

ಪಿಎಂಆರ್‌ಬಿಪಿ-2026 ಪೋರ್ಟಲ್ ಪುಟದಲ್ಲಿರುವ “ಪಿಎಂಆರ್‌ಬಿಪಿ ಗಾಗಿ ನೋಂದಣಿ ಮತ್ತು ನಾಮನಿರ್ದೇಶನ ಪ್ರಕ್ರಿಯೆ” ದಾಖಲೆಯಲ್ಲಿ ವಿವರವಾದ ಹಂತ-ಹಂತದ ಸೂಚನೆಗಳು ಲಭ್ಯವಿದೆ

प्रविष्टि तिथि: 02 JUN 2026 3:51PM by PIB Bengaluru

ಭಾರತ ಸರ್ಕಾರವು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PMRBP) 2026ಕ್ಕೆ ನಾಮನಿರ್ದೇಶನಗಳನ್ನು ಆಹ್ವಾನಿಸಿದ್ದು, ಇದು ಭಾರತದ ರಾಷ್ಟ್ರಪತಿಯವರು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿದ ಮಕ್ಕಳಿಗೆ ನೀಡುವ ಪ್ರತಿಷ್ಠಿತ ಗೌರವವಾಗಿದೆ. ಈ ನಾಮನಿರ್ದೇಶನ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 31, 2026.

ನಾಮನಿರ್ದೇಶನಗಳನ್ನು ಇಲ್ಲಿ ನೀಡಲಾದ ಅಧಿಕೃತ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು: https://awards.gov.in.

ಜುಲೈ 31, 2026ಕ್ಕೆ 5 ರಿಂದ 18 ವರ್ಷ ವಯಸ್ಸಿನ ಮಕ್ಕಳು ಈ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ನಾಮನಿರ್ದೇಶನಗಳನ್ನು ನೀಡಬಹುದಾಗಿದ್ದು, ಮಕ್ಕಳು ಕೂಡಾ ಸ್ವಯಂ-ನಾಮನಿರ್ದೇಶನ ಮಾಡಬಹುದು.

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಆರು ವಿಭಾಗಗಳಲ್ಲಿ ನೀಡಲಾಗುವುದು:

  • ಶೌರ್ಯ
  • ಸಮಾಜ ಸೇವೆ
  • ಪರಿಸರ
  • ಕ್ರೀಡೆ
  • ಕಲೆ ಮತ್ತು ಸಂಸ್ಕೃತಿ
  • ವಿಜ್ಞಾನ ಮತ್ತು ತಂತ್ರಜ್ಞಾನ

ಅರ್ಜಿಯನ್ನು ಸಲ್ಲಿಸಲು, ಮೊದಲು ತಾವು https://awards.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು ಅಥವಾ ಲಾಗಿನ್ ಆಗಿ, ಅರ್ಜಿದಾರರ ಹೆಸರು, ಜನನ ದಿನಾಂಕ, ಆಧಾರ್, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮುಂತಾದ ಅಗತ್ಯ ವಿವರಗಳನ್ನು ಒದಗಿಸಬೇಕು. ದಯವಿಟ್ಟು ನಡೆಯುತ್ತಿರುವ ನಾಮನಿರ್ದೇಶನಗಳ ವಿಭಾಗದ ಅಡಿಯಲ್ಲಿ "ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2026" ಅನ್ನು ಆಯ್ಕೆ ಮಾಡಿ, "ನಾಮನಿರ್ದೇಶನ/ಈಗ ಅರ್ಜಿ ಸಲ್ಲಿಸಿ" ಕ್ಲಿಕ್ ಮಾಡಿ ಮತ್ತು ಸಂಬಂಧಿತ ಪ್ರಶಸ್ತಿ ವರ್ಗವನ್ನು ಆಯ್ಕೆ ಮಾಡಿ, ನಾಮನಿರ್ದೇಶನವು ಸ್ವತಃ ತಮಗೆ ಅಥವಾ ಬೇರೊಂದು ಮಗುವಿಗೆ ಮಾಡುತ್ತಿರುವಿರೇ ಎಂಬುದನ್ನು ಸ್ಪಷ್ಟವಾಗಿ ಸೂಚಿಸಿ.

ಅರ್ಜಿ ನಮೂನೆಯಲ್ಲಿ ನಾಮನಿರ್ದೇಶಿತರ ವಿವರಗಳು, ಸಾಧನೆ ಮತ್ತು ಅದರ ಪ್ರಭಾವದ ಕುರಿತಾಗಿ ಬರಹ (1000-ಪದಗಳವರೆಗೆ), ಪುಷ್ಟಿಕೃತ ದಾಖಲೆಗಳು ಮತ್ತು ಇತ್ತೀಚಿನ ಛಾಯಾಚಿತ್ರದ (jpg/jpeg/png) ಅಗತ್ಯವಿದೆ.

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2026 ಪೋರ್ಟಲ್ ಪುಟದಲ್ಲಿನ ಅಧಿಸೂಚನೆಯ ಟ್ಯಾಬ್ ಅಡಿಯಲ್ಲಿ "ಪಿಎಂಆರ್‌ಬಿಪಿ ಗಾಗಿ ನೋಂದಣಿ ಮತ್ತು ನಾಮನಿರ್ದೇಶನ ಪ್ರಕ್ರಿಯೆ" ದಾಖಲೆಯಲ್ಲಿ ವಿವರವಾದ ಹಂತ-ಹಂತದ ಸೂಚನೆಗಳು ಕೂಡಾ ಲಭ್ಯವಿದೆ.

ಅರ್ಜಿಗಳನ್ನು ಡ್ರಾಫ್ಟ್‌ ಗಳಾಗಿ ಸೇವ್ ಮಾಡಿ ಅಂತಿಮ ಸಲ್ಲಿಕೆಗೆ ಮೊದಲು ಅದನ್ನು ಪರಿಷ್ಕರಿಸಿ ಅಂತಿಮವಾಗಿ ಸಲ್ಲಿಸಬಹುದು. ಸಲ್ಲಿಸಿದ ನಂತರ, ಡೌನ್‌ಲೋಡ್ ಮಾಡಬಹುದಾದ ಪ್ರತಿಯನ್ನು ದಾಖಲೆ ಸಂಗ್ರಹಕ್ಕಾಗಿ ರಚಿಸಲಾಗುತ್ತದೆ.

ಈ ಪ್ರಶಸ್ತಿಯು ಯುವ ಸಾಧಕರನ್ನು ರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸುವ ಅವರ ಜೀವಮಾನದ ಮನ್ನಣೆಯಾಗಿದೆ. ವಿವರವಾದ ಮಾರ್ಗಸೂಚಿಗಳು ಮತ್ತು ಹಿಂದಿನ ವಿಜೇತರಿಗಾಗಿ, ಈ ಕೆಳಗೆ ನೀಡಲಾದ ಲಿಂಕ್ ಗೆ ಭೇಟಿ ನೀಡಿ:

• ನಾಮನಿರ್ದೇಶನ ಪೋರ್ಟಲ್: https://awards.gov.in

• ಹಿಂದಿನ ಪ್ರಶಸ್ತಿ ಪುರಸ್ಕೃತರು: https://awards.gov.in/Awardee

ಅರ್ಹ ಮಕ್ಕಳು ಈ ಗೌರವಕ್ಕೆ ಅರ್ಜಿ ಸಲ್ಲಿಸಲು ಅಥವಾ ನಾಮನಿರ್ದೇಶನಗೊಳ್ಳಲು ಸಹಾಯ ಮಾಡುವಂತೆ ಸಚಿವಾಲಯವು ಎಲ್ಲಾ ಪೋಷಕರು, ಶಿಕ್ಷಕರು, ಸಂಸ್ಥೆಗಳು ಮತ್ತು ನಾಗರಿಕರನ್ನು ಕೋರುತ್ತದೆ.

ಸಂಬಂಧಿತ PIB ಪ್ರಕಟಣೆಯ ಲಿಂಕ್ ಅನ್ನು ಕೆಳಗೆ ನೋಡಬಹುದು:

https://www.pib.gov.in/PressReleasePage.aspx?PRID=2255800®=3&lang=2

 

*****

 


(रिलीज़ आईडी: 2268034) आगंतुक पटल : 20
इस विज्ञप्ति को इन भाषाओं में पढ़ें: Telugu , English , Urdu , हिन्दी , Marathi , Bengali , Bengali-TR , Gujarati , Tamil , Malayalam