ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರಿಂದ ಮೇ 29 ರಿಂದ 31 ರವರೆಗೆ ಕರ್ನಾಟಕ, ಗೋವಾ ಮತ್ತು ಕೇರಳಕ್ಕೆ ಭೇಟಿ

ಪ್ರಕಟಣಾ ದಿನಾಂಕ: 28 MAY 2026 1:54PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು 2026 ರ ಮೇ 29 ರಿಂದ 31 ರವರೆಗೆ ಮೂರು ದಿನ ಕರ್ನಾಟಕ, ಗೋವಾ ಮತ್ತು ಕೇರಳ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.

 ಕರ್ನಾಟಕದ ಬೆಂಗಳೂರಿನಲ್ಲಿರುವ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ ನ 45 ವರ್ಷಗಳನ್ನು ಗುರುತಿಸುವ ಜಾಗತಿಕ ಆಚರಣೆಯಲ್ಲಿ ಮೇ 29 ರಂದು ಉಪರಾಷ್ಟ್ರಪತಿಗಳು ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು, ಕರ್ನಾಟಕದ ದಾವಣಗೆರೆಯಲ್ಲಿರುವ ವಿಶ್ವವಿದ್ಯಾಲಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ 75 ವರ್ಷಗಳ ಪ್ಲಾಟಿನಂ ಜುಬಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಉಪರಾಷ್ಟ್ರಪತಿಗಳು ಮೇ 30 ರಂದು ಪಣಜಿಯಲ್ಲಿ ನಡೆಯಲಿರುವ ಗೋವಾ ರಾಜ್ಯ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ಗೋವಾದ ಸಿ ಎಸ್ ಐ ಆರ್  - ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆಗೆ ಭೇಟಿ ನೀಡಲಿದ್ದಾರೆ.

ಉಪರಾಷ್ಟ್ರಪತಿಗಳು ಕರ್ನಾಟಕದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಮೇ 31 ರಂದು ಭೇಟಿ ನೀಡಲಿದ್ದಾರೆ. ಬಳಿಕ, ಬೆಳ್ತಂಗಡಿಯಲ್ಲಿ ಸಿರಿ ಕೈಗಾರಿಕಾ ಉದ್ಯಾನವನವನ್ನು ಉದ್ಘಾಟಿಸಲಿದ್ದಾರೆ.

ಅದೇ ದಿನ ನಂತರ, ಉಪರಾಷ್ಟ್ರಪತಿಯವರು ಕೊಟ್ಟಾಯಂನಲ್ಲಿ ದೀಪಿಕಾ ಮಲಯಾಳಂ ದಿನಪತ್ರಿಕೆಯ 140ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ಘಾಟನೆಗೆ ಕೇರಳಕ್ಕೆ ತೆರಳಲಿದ್ದಾರೆ. ಸಂಸತ್ ಸದಸ್ಯರಾದ (ರಾಜ್ಯಸಭೆ) ಶ್ರೀ ಸಿ. ಸದಾನಂದನ್ ಮಾಸ್ಟರ್ ಅವರು ಆಯೋಜಿಸಿರುವ ಖಾಸಗಿ ಸಮಾರಂಭದಲ್ಲಿ ಭಾಗಿಯಾಗಲು ಅವರು ಕಣ್ಣೂರಿಗೆ ಸಹ ಭೇಟಿ ನೀಡಲಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2266343) ವಿಸಿಟರ್ ಕೌಂಟರ್ : 32
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Tamil , Malayalam