ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯ ಗ್ರ್ಯಾಂಡ್ ಕ್ರಾಸ್ ಪದಕವನ್ನು ಸ್ವೀಕರಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 18 MAY 2026 7:35PM by PIB Bengaluru

ಓಸ್ಲೋದಲ್ಲಿ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ, ನಾರ್ವೆಯ ಮಹಾರಾಜ ಘನತೆವೆತ್ತ 5ನೇ ಹೆರಾಲ್ಡ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್' ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಯು, ವಿದೇಶಿ ಸರ್ಕಾರದ ಮುಖ್ಯಸ್ಥರಿಗೆ ನೀಡಲಾಗುವ ನಾರ್ವೆಯ ಅತ್ಯುನ್ನತ ಗೌರವವಾಗಿದೆ ಮತ್ತು ನಾರ್ವೆ ಮತ್ತು ಮಾನವಕುಲದ ಹಿತಾಸಕ್ತಿಗಾಗಿ ಅತ್ಯುತ್ತಮ ಸೇವೆಯನ್ನು ಗುರುತಿಸಿ ಇದನ್ನು ನಾರ್ವೆ ಸರ್ಕಾರದಿಂದ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಮೋದಿ, ಈ ಗೌರವಕ್ಕಾಗಿ ಮಹಾರಾಜ ಘನತೆವೆತ್ತ 5ನೇ ಹೆರಾಲ್ಡ್  ಮತ್ತು ನಾರ್ವೆಯ ಜನರಿಗೆ ತಮ್ಮ ಮನದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅವರು ಈ ಪ್ರಶಸ್ತಿಯನ್ನು ಭಾರತ ಮತ್ತು ನಾರ್ವೆಯ ನಡುವಿನ ಐತಿಹಾಸಿಕ ಸ್ನೇಹಕ್ಕೆ ಅರ್ಪಿಸಿದರು, ಇದು ಭಾರತದ ಜನರು ಮತ್ತು ನಾರ್ವೆಯ ಜನರ ನಡುವೆ ಹಂಚಿಕೊಂಡಿರುವ ಶಾಶ್ವತ ಉಷ್ಣತೆ, ನಂಬಿಕೆ ಮತ್ತು ವಾತ್ಸಲ್ಯಕ್ಕೆ ಸಂದ ಗೌರವ ಎಂದು ಪ್ರಧಾನಮಂತ್ರಿಯವರು ಕರೆದರು.

ಈ ಪ್ರಶಸ್ತಿಯು ಭಾರತ ಮತ್ತು ನಾರ್ವೆ ನಡುವೆ ಇರುವ ಆಳವಾದ ಸದ್ಭಾವನೆಯ ಸಂಕೇತವಾಗಿ ನಿಂತಿದೆ ಮತ್ತು ಭವಿಷ್ಯದಲ್ಲಿ ಅವರ ಸ್ನೇಹ ಮತ್ತು ಸಹಯೋಗದ ಪ್ರಯಾಣಕ್ಕೆ ಮಾರ್ಗದರ್ಶನ ನೀಡುತ್ತದೆ.

 

*****


(ಪ್ರಕಟಣೆ ಐ.ಡಿ.: 2262553) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Gujarati , Tamil