ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾರ್ವೆಯ ಘನತೆವೆತ್ತ ರಾಜ ಹರಾಲ್ಡ್ 5 ಅವರೊಂದಿಗೆ ಪ್ರಧಾನಮಂತ್ರಿ ಅವರ ಭೇಟಿ

ಪ್ರಕಟಣಾ ದಿನಾಂಕ: 18 MAY 2026 7:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಓಸ್ಲೋದ ರಾಜಮನೆಯಲ್ಲಿ ನಾರ್ವೆಯ ಘನತೆವೆತ್ತ ರಾಜ ಹರಾಲ್ಡ್ 5 ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿಯವರು ಭಾರತದ ಜನರ ಪರವಾಗಿ ಶುಭಾಶಯಗಳು ಮತ್ತು ಉತ್ತಮ ಹಾರೈಕೆಗಳನ್ನು ತಿಳಿಸಿದರು. ಅವರು ನಾರ್ವೆಯ ನೈಸರ್ಗಿಕ ಸೌಂದರ್ಯವನ್ನು ಶ್ಲಾಘಿಸಿದರು ಮತ್ತು ಪ್ರಜಾಪ್ರಭುತ್ವ, ಕಾನೂನಿನ ಆಡಳಿತ ಹಾಗೂ ಜನಕೇಂದ್ರಿತ ಆಡಳಿತದ ಹಂಚಿಕೊಂಡ ಮೌಲ್ಯಗಳಲ್ಲಿ ಅಡಕವಾಗಿರುವ ಭಾರತ ಮತ್ತು ನಾರ್ವೆ ನಡುವಿನ ಸುದೀರ್ಘ ಸ್ನೇಹವು ಮತ್ತಷ್ಟು ಬಲಗೊಳ್ಳುತ್ತಾ ಸಾಗುತ್ತಿದೆ ಎಂದು ಒತ್ತಿಹೇಳಿದರು.

ಪ್ರಧಾನಮಂತ್ರಿ ಮೋದಿ ಮತ್ತು ಘನತೆವೆತ್ತ ರಾಜ ಹರಾಲ್ಡ್ 5 ಅವರು ವೈವಿಧ್ಯಮಯ ವಲಯಗಳಲ್ಲಿ, ಅದರಲ್ಲೂ ಮುಖ್ಯವಾಗಿ ಹೊಸ ತಂತ್ರಜ್ಞಾನಗಳಲ್ಲಿ ಭಾರತೀಯ ಮತ್ತು ನಾರ್ವೇಜಿಯನ್ ಕಂಪನಿಗಳು ಸಾಧಿಸಿರುವ ಪ್ರಭಾವಶಾಲಿ ಪ್ರಗತಿಯ ಬಗ್ಗೆ ಚರ್ಚಿಸಿದರು.

ಈ ಭೇಟಿಯ ನಂತರ ಪ್ರಧಾನಮಂತ್ರಿ ಮೋದಿ ಅವರ ಗೌರವಾರ್ಥವಾಗಿ ಘನತೆವೆತ್ತ ರಾಜರು ಆಯೋಜಿಸಿದ್ದ ಮಧ್ಯಾಹ್ನದ ಔತಣಕೂಟ ನಡೆಯಿತು.

ತಮಗೆ ನೀಡಿದ ಸುಸಂಸ್ಕೃತ ಆತಿಥ್ಯಕ್ಕಾಗಿ ಪ್ರಧಾನಮಂತ್ರಿಯವರು ಘನತೆವೆತ್ತ ರಾಜರಿಗೆ ಧನ್ಯವಾದಗಳನ್ನು ಅರ್ಪಿಸಿದರು.

 

*****


(ಪ್ರಕಟಣೆ ಐ.ಡಿ.: 2262551) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil