ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಮೋಸದ ವ್ಯಾಪಾರ ಚಟುವಟಿಕೆಗಳಿಗಾಗಿ ಕೋಚಿಂಗ್ ಸಂಸ್ಥೆಗಳಿಗೆ ದಂಡ ವಿಧಿಸಿದ ಸಿಸಿಪಿಎ


ಕೋಚಿಂಗ್ ವಲಯದಲ್ಲಿ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳ ವಿರುದ್ಧ ದೇಶಾದ್ಯಂತ ಕ್ರಮ ಕೈಗೊಂಡ ಸಿಸಿಪಿಎ; 60ಕ್ಕೂ ಅಧಿಕ ನೋಟಿಸ್‌ಗಳ ಜಾರಿ ಮತ್ತು ಕೋಚಿಂಗ್ ಸಂಸ್ಥೆಗಳಿಗೆ 1.39 ಕೋಟಿ ರೂಪಾಯಿಗಳಿಗಿಂತ ಅಧಿಕ ದಂಡ

ಪ್ರಕಟಣಾ ದಿನಾಂಕ: 15 MAY 2026 1:30PM by PIB Bengaluru

ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ), ಗ್ರಾಹಕ ರಕ್ಷಣಾ ಕಾಯ್ದೆ 2019 ರ ಅಡಿಯಲ್ಲಿ ದಾರಿತಪ್ಪಿಸುವ ಜಾಹೀರಾತುಗಳು, ಮೋಸದ ವ್ಯಾಪಾರ ಚಟುವಟಿಕೆಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದ್ದಕ್ಕಾಗಿ ಮೋಷನ್ ಎಜುಕೇಷನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ 10 ಲಕ್ಷ ರೂಪಾಯಿ ದಂಡ ಮತ್ತು ಸಿಕಾರ್‌ನ ಕೆರಿಯರ್ ಲೈನ್ ಕೋಚಿಂಗ್ (ಸಿ ಎಲ್ ಸಿ) ವಿರುದ್ಧ 5 ಲಕ್ಷ ರೂಪಾಯಿ ದಂಡ ವಿಧಿಸುವ ಅಂತಿಮ ಆದೇಶಗಳನ್ನು ಹೊರಡಿಸಿದೆ.

ಗ್ರಾಹಕ ರಕ್ಷಣಾ ಕಾಯ್ದೆ 2019ರ ನಿಬಂಧನೆಗಳನ್ನು ಉಲ್ಲಂಘಿಸಿ ಯಾವುದೇ ಸರಕು ಅಥವಾ ಸೇವೆಗಳ ವಿಷಯದಲ್ಲಿ ಯಾವುದೇ ಸುಳ್ಳು ಅಥವಾ ದಾರಿತಪ್ಪಿಸುವ ಜಾಹೀರಾತು ನೀಡದಂತೆ ನೋಡಿಕೊಳ್ಳಲು ಮತ್ತು ಗ್ರಾಹಕರ ರಕ್ಷಣಾ ಕಾಯ್ದೆ 2019ರ ನಿಬಂಧನೆಗಳನ್ನು ಉಲ್ಲಂಘಿಸಿ ಯಾವುದೇ ಸರಕು ಅಥವಾ ಸೇವೆಗಳ ವಿಷಯದಲ್ಲಿ ಯಾವುದೇ ಸುಳ್ಳು ಅಥವಾ ದಾರಿತಪ್ಪಿಸುವ ಜಾಹೀರಾತು ನೀಡದಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಮುಖ್ಯ ಆಯುಕ್ತರಾದ ಶ್ರೀಮತಿ ನಿಧಿ ಖರೆ ಮತ್ತು ಆಯುಕ್ತರಾದ ಶ್ರೀ ಅನುಪಮ್ ಮಿಶ್ರಾ ನೇತೃತ್ವದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಮೋಷನ್ ಎಜುಕೇಷನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆದೇಶಗಳನ್ನು ಹೊರಡಿಸಿದೆ. ಲಿಮಿಟೆಡ್ ಮತ್ತು ಕೆರಿಯರ್ ಲೈನ್ ಕೋಚಿಂಗ್ (ಸಿಎಲ್ ಸಿ), ಸಿಕಾರ್, ತರಬೇತಿ ಸಂಸ್ಥೆಗಳು ಐಐಟಿ-ಜೆಇಇ ಮತ್ತು ನೀಟ್ ಪರೀಕ್ಷೆಗಳಲ್ಲಿ ಯಶಸ್ವಿ ಅಭ್ಯರ್ಥಿಗಳ ಹೆಸರುಗಳು, ಛಾಯಾಚಿತ್ರಗಳು ಮತ್ತು ಸಾಧನೆಗಳನ್ನು ಪ್ರಮುಖವಾಗಿ ಬಳಸಿಕೊಂಡಿವೆ ಮತ್ತು ಅಂತಹ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಕೋರ್ಸ್‌ಗಳ ಬಗ್ಗೆ ಪ್ರಮುಖ ಮಾಹಿತಿ ಮರೆಮಾಚುತ್ತಿವೆ ಎಂಬುದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಮೋಷನ್ ಎಜುಕೇಷನ್ ಪ್ರೈವೇಟ್ ಲಿಮಿಟೆಡ್ ಪ್ರಕರಣ: ಹಕ್ಕುಗಳನ್ನು ಈ ಕೆಳಗಿನಂತೆ ಮಾಡಲಾಗಿದೆ -

i. “ಜೆಇಇ ಅಡ್ವಾನ್ಸ್ಡ್ 3231/6332 ರಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳ 2025 ರ ಜೆಇಇ ಅಡ್ವಾನ್ಸ್ಡ್ ಫಲಿತಾಂಶ = 51.02%”

ii. “ಜೆಇಇ (ಮುಖ್ಯ) 65.8% 6930/10532 ರಲ್ಲಿ

ii. “मोशन है तो सिलेक्शन है”

ii. ಅರ್ಹತೆ ಪಡೆದ ವಿದ್ಯಾರ್ಥಿಗಳ % = 51.02%”

iv. “ನೀಟ್ ಫಲಿತಾಂಶ 2025 ಅರ್ಹ ವಿದ್ಯಾರ್ಥಿಗಳ % 6972/7645 = 91.2 %”

v. “ನೀಟ್ ಫಲಿತಾಂಶ 2025-19 ಟಾಪ್ 500 ಅಖಿಲ ಭಾರತ ಶ್ರೇಣಿಯಲ್ಲಿ (ಸಾಮಾನ್ಯ ಮತ್ತು ಒಬಿಸಿ) ಮತ್ತು ನಮ್ಮ 7 ವಿದ್ಯಾರ್ಥಿಗಳು 100 ಕ್ಕಿಂತ ಕಡಿಮೆ ಅಖಿಲ ಭಾರತ ಶ್ರೇಣಿಯನ್ನು ಪಡೆದಿದ್ದಾರೆ.

ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌, ಯೂಟ್ಯೂಬ್ ಚಾನೆಲ್, ಇನ್‌ಸ್ಟಾಗ್ರಾಮ್ ಖಾತೆ ಮತ್ತು ವೃತ್ತಪತ್ರಿಕೆ ಜಾಹೀರಾತುಗಳಲ್ಲಿ ಪ್ರಕಟಿಸಿದ ದಾರಿತಪ್ಪಿಸುವ ಜಾಹೀರಾತುಗಳನ್ನು ಸಿಸಿಪಿಎ ಸ್ವಯಂ ಪ್ರೇರಿತವಾಗಿ ಸ್ವೀಕರಿಸಿತು. ಸಿಸಿಪಿಎ ಸಂಸ್ಥೆಯು ಯಶಸ್ವಿ ಅಭ್ಯರ್ಥಿಗಳ ಹೆಸರುಗಳು ಮತ್ತು ಛಾಯಾಚಿತ್ರಗಳನ್ನು ಪ್ರಮುಖವಾಗಿ ಪ್ರದರ್ಶಿಸುವುದರ ಜೊತೆಗೆ ”ಪೂರ್ಣ ಸಮಯದ ತರಗತಿ ಕಾರ್ಯಕ್ರಮ’’, “ವಸತಿ ಕಾರ್ಯಕ್ರಮ’’, “ನರ್ಚರ್ ಬ್ಯಾಚ್’’, ”ಎಂಟುಸ್ ಬ್ಯಾಚ್’’ ಮತ್ತು ”ಡ್ರಾಪರ್/ಲೀಡರ್ ಬ್ಯಾಚ್’’ ನಂತಹ ಪಾವತಿಸಿದ ಕಾರ್ಯಕ್ರಮಗಳನ್ನು ಜಾಹೀರಾತು ಮಾಡುವುದನ್ನು ಗಮನಿಸಿದೆ, ಆದರೆ ಯಶಸ್ವಿ ಅಭ್ಯರ್ಥಿಗಳು ಕೈಗೊಂಡ ನಿಜವಾದ ಕೋರ್ಸ್ಗಳನ್ನು ಬಹಿರಂಗಪಡಿಸಿಲ್ಲ.

ಮಹಾನಿರ್ದೇಶಕರು (ತನಿಖೆ) ನಡೆಸಿದ ತನಿಖೆಯಲ್ಲಿ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಹೆಚ್ಚಿನ ವಿದ್ಯಾರ್ಥಿಗಳು “ಐ-ಏಕ್ಲವ್ಯ (ಆನ್‌ಲೈನ್)" ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. "ಐ-ಏಕ್ಲವ್ಯ" ಕೋರ್ಸ್ ಜೆಇಇ ಮತ್ತು ನೀಟ್ ಆಕಾಂಕ್ಷಿಗಳಿಗೆ ಪ್ರಮುಖ ರ‍್ಯಾಂಕರ್ ಬ್ಯಾಚ್ ಆಗಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ನೀಡಲಾಗುತ್ತಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆಯ ಮೂಲಕ ಉಚಿತವಾಗಿ ನೀಡಲಾಗುತ್ತದೆ ಎಂದು ಸಿಸಿಪಿಎ ಗಮನಿಸಿದೆ. ಆದರೂ ಜಾಹೀರಾತುಗಳು ಈ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲವಾಗಿವೆ, ಅಂದರೆ ಯಶಸ್ವಿ ಅಭ್ಯರ್ಥಿಗಳು ಆಯ್ಕೆ ಮಾಡಿದ ಕೋರ್ಸ್ ವಿವರ ತಿಳಿಸಿಲ್ಲ.

ಪರೀಕ್ಷೆಯನ್ನು ಈಗಾಗಲೇ ನಡೆಸಿದ ನಂತರ ಸಂಸ್ಥೆಗೆ ದಾಖಲಾದ ಕೆಲವು ವಿದ್ಯಾರ್ಥಿಗಳ ಹೆಸರುಗಳು ಮತ್ತು ಛಾಯಾಚಿತ್ರಗಳನ್ನು ಸಂಸ್ಥೆಯು ಬಳಸಿಕೊಂಡಿದೆ, ಇದರಿಂದಾಗಿ ಅವರ ಯಶಸ್ಸನ್ನು ಪ್ರಚಾರದ ಉದ್ದೇಶಗಳಿಗಾಗಿ ಸಂಸ್ಥೆ ತಪ್ಪಾಗಿ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿದೆ. ವಿದ್ಯಾರ್ಥಿಗಳು ಅಥವಾ ಅವರ ಪೋಷಕರು/ಪೋಷಕರಿಂದ ಸರಿಯಾದ ಒಪ್ಪಿಗೆಯನ್ನು ಪಡೆಯದೆ ವಿದ್ಯಾರ್ಥಿಗಳ ಹೆಸರುಗಳು ಮತ್ತು ಛಾಯಾಚಿತ್ರಗಳನ್ನು ಬಳಸಲಾಗಿದೆ ಎಂಬುದನ್ನು ತನಿಖೆಯಲ್ಲಿ ಗಮನಿಸಲಾಗಿದೆ.

ದಾಖಲೆ ಪುರಾವೆಗಳನ್ನು ಒದಗಿಸಲು ಪದೇ ಪದೇ ಅವಕಾಶಗಳು ಮತ್ತು ನಿರ್ದೇಶನಗಳ ಹೊರತಾಗಿಯೂ ಜಾಹೀರಾತುಗಳಲ್ಲಿ ಮಾಡಲಾದ ಹಲವು ಕ್ಲೇಮ್ ಗಳನ್ನು ದೃಢೀಕರಿಸಲು ಸಂಸ್ಥೆಯು ವಿಫಲವಾಗಿದೆ ಎಂದು ಸಿಸಿಪಿಎ ಕಂಡುಹಿಡಿದಿದೆ. ಯಶಸ್ವಿ ಅಭ್ಯರ್ಥಿಗಳು ಕೈಗೊಂಡ ಕೋರ್ಸ್ಗಳ ಸ್ವರೂಪದ ಬಗ್ಗೆ ಪ್ರಮುಖ ಮಾಹಿತಿಯನ್ನು ಮರೆಮಾಚುವುದು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಸೆಕ್ಷನ್ 2(28) ಅಡಿಯಲ್ಲಿ ದಾರಿತಪ್ಪಿಸುವ ಜಾಹೀರಾತಾಗಿದೆ ಮತ್ತು ಸೆಕ್ಷನ್ 2(47) ಅಡಿಯಲ್ಲಿ ಅನ್ಯಾಯದ ವ್ಯಾಪಾರ ಪದ್ದತಿಯಾಗಿದೆ ಎಂದು ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ.

ಸಿಕಾರ್ ಕೆರಿಯರ್ ಲೈನ್ ಕೋಚಿಂಗ್ (ಸಿಎಲ್ ಸಿ) ಪ್ರಕರಣ: ಈ ಕೆಳಗಿನಂತೆ ಹಕ್ಕು ಸಾಧಿಸಲಾಗಿದೆ -

i. “MBBS, IIT ಮತ್ತು ಇತರ ವಿಷಯಗಳಲ್ಲಿ 1650+ ಸಿಎಲ್ ಸಿ ವಿದ್ಯಾರ್ಥಿಗಳು”

ii. “NEET AIR-100 ರಲ್ಲಿ 2 ಸಿಎಲ್ ಸಿ ವಿದ್ಯಾರ್ಥಿಗಳು”

iii. “ದೆಹಲಿಯ ಏಮ್ಸ್ ನಲ್ಲಿ 3 ಸಿಎಲ್ ಸಿ ವಿದ್ಯಾರ್ಥಿಗಳು”

iv. “6 ಸಿಎಲ್ ಸಿ ವಿದ್ಯಾರ್ಥಿಗಳು 710+ ಅಂಕಗಳನ್ನು ಗಳಿಸಿದ್ದಾರೆ (720 ರಲ್ಲಿ)”

v. “AIR-1000 ರಲ್ಲಿ 7 ಪಟ್ಟು ಫಲಿತಾಂಶದ ಬೆಳವಣಿಗೆ”

vi. “ಸಿಕಾರ್‌ನಲ್ಲಿ ಅತ್ಯುತ್ತಮ ಸಿಎಲ್ ಸಿ AIR-1000 ನಲ್ಲಿ ಗತ ವರ್ಷ ಸೇವೆ 7 ಗುಣ ವೃದ್ಧಿ”

ಸಿಕಾರ್‌ನ ಕೆರಿಯರ್ ಲೈನ್ ಕೋಚಿಂಗ್ (ಸಿಎಲ್ ಸಿ) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ವೃತ್ತಪತ್ರಿಕೆ ಜಾಹೀರಾತುಗಳ ಮೂಲಕ ಪ್ರಕಟಿಸಿದ ದಾರಿತಪ್ಪಿಸುವ ಜಾಹೀರಾತುಗಳನ್ನು ಸಿಸಿಪಿಎ ಸ್ವಯಂಪ್ರೇರಿತವಾಗಿ ಸ್ವೀಕರಿಸಿದೆ. ಸಂಸ್ಥೆಯು ಯಶಸ್ವಿ ಅಭ್ಯರ್ಥಿಗಳನ್ನು ಪ್ರಮುಖವಾಗಿ ಒಳಗೊಂಡಿತ್ತು ಮತ್ತು ಏಕಕಾಲದಲ್ಲಿ ವಿವಿಧ ತರಗತಿ ಕಾರ್ಯಕ್ರಮಗಳನ್ನು ಪ್ರಚಾರ ಮಾಡಿತು ಮತ್ತು ಅಂತಹ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ನಿಜವಾದ ಕೋರ್ಸ್ಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಮರೆಮಾಡಿದೆ ಎಂಬುದನ್ನು ಸಿಸಿಪಿಎ ಗಮನಿಸಿದೆ.

ಮಹಾ ನಿರ್ದೇಶಕರು (ತನಿಖೆ) ನಡೆಸಿದ ತನಿಖೆಯಲ್ಲಿ, ಪದೇ ಪದೇ ಅವಕಾಶಗಳಿದ್ದರೂ ಸಂಸ್ಥೆಯು ತನ್ನ ಹಕ್ಕುಗಳನ್ನು ದೃಢೀಕರಿಸಲು ಸಾಕ್ಷ್ಯ, ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ ಎಂದು ತಿಳಿದುಬಂದಿದೆ. ಜಾಹೀರಾತುಗಳಲ್ಲಿ ಹೆಸರುಗಳು ಮತ್ತು ಛಾಯಾಚಿತ್ರಗಳನ್ನು ಬಳಸಲಾದ ಹಲವಾರು ವಿದ್ಯಾರ್ಥಿಗಳು ಪರೀಕ್ಷಾ ಸರಣಿಯ ಕೋರ್ಸ್‌ಗಳಿಗೆ ಮಾತ್ರ ದಾಖಲಾಗಿದ್ದಾರೆ, ಇದನ್ನು ಉದ್ದೇಶಪೂರ್ವಕವಾಗಿ ಜಾಹೀರಾತುಗಳಲ್ಲಿ ಮರೆಮಾಚಲಾಗಿದೆ ಎಂದು ತನಿಖೆಯಲ್ಲಿ ಕಂಡುಬಂದಿದೆ.

“ಎಂಬಿಬಿಎಸ್, ಐಐಟಿ ಮತ್ತು ಇತರ ವಿಷಯಗಳಲ್ಲಿ 1650+ ಸಿಎಲ್ ಸಿ ವಿದ್ಯಾರ್ಥಿಗಳು’’ ಎಂಬ ತನ್ನ ಹೇಳಿಕೆಗೆ ಸಂಬಂಧಿಸಿದಂತೆ ಸಂಸ್ಥೆಯು ವಿರೋಧಾತ್ಮಕ ನಿಲುವುಗಳನ್ನು ತೆಗೆದುಕೊಂಡಿದೆ ಎಂದು ಸಿಸಿಪಿಎ ಗಮನಿಸಿದೆ. ತನ್ನ ಲಿಖಿತ ಸಲ್ಲಿಕೆಯಲ್ಲಿ ಈ ಅಂಕಿ ಅಂಶವು 1996 ರಿಂದ ಸಂಚಿತ ಆಯ್ಕೆಗಳನ್ನು ಪ್ರತಿನಿಧಿಸುತ್ತದೆ ಎಂದು ಸಂಸ್ಥೆ ಹೇಳಿದೆ, ಆದರೆ ವಿಚಾರಣೆಯ ಸಮಯದಲ್ಲಿ ಈ ಅಂಕಿ ಅಂಶವು 2024 ವರ್ಷಕ್ಕೆ ಮಾತ್ರ ಸಂಬಂಧಿಸಿದೆ ಎಂದು ಅದು ಹೇಳಿಕೊಂಡಿದೆ. ಅಂತಹ ತದ್ವಿರುದ್ಧ ಹೇಳಿಕೆಗಳು ಆಧಾರರಹಿತ ಮತ್ತು ದಾರಿತಪ್ಪಿಸುತ್ತವೆ ಎಂದು ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ.

2024 ರ ತರಬೇತಿ ವಲಯದಲ್ಲಿ ದಾರಿತಪ್ಪಿಸುವ ಜಾಹೀರಾತು ತಡೆಗಟ್ಟುವಿಕೆ ಮಾರ್ಗಸೂಚಿಗಳ ಅಡಿಯಲ್ಲಿ ಕಡ್ಡಾಯವಾಗಿ, ಫಲಿತಾಂಶಗಳ ಘೋಷಣೆಯ ನಂತರ ಯಶಸ್ವಿ ಅಭ್ಯರ್ಥಿಗಳಿಂದ ಲಿಖಿತ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಸಾಬೀತುಪಡಿಸುವ ಸಾಕ್ಷ್ಯ, ಪುರಾವೆಗಳನ್ನು ಒದಗಿಸಲು ಎರಡೂ ಸಂಸ್ಥೆಗಳು ವಿಫಲವಾಗಿವೆ ಎಂದು ಪ್ರಾಧಿಕಾರವು ಕಂಡುಹಿಡಿದಿದೆ.

ಸಿಸಿಪಿಎ ಎರಡೂ ತರಬೇತಿ ಸಂಸ್ಥೆಗಳಿಗೆ ದಾರಿತಪ್ಪಿಸುವ ಜಾಹೀರಾತುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು, ಭವಿಷ್ಯದಲ್ಲಿ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸಲು ಮತ್ತು ಭವಿಷ್ಯದ ಜಾಹೀರಾತುಗಳಲ್ಲಿ ಸತ್ಯವಾದ ಮತ್ತು ಸಂಪೂರ್ಣ ಬಹಿರಂಗಪಡಿಸುವಂತೆ ನಿರ್ದೇಶಿಸಿದೆ. ಆದರೂ ಎರಡೂ ಸಂಸ್ಥೆಗಳು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (ಎನ್ ಸಿಡಿಆರ್ ಸಿ) ಮುಂದೆ ಮೇಲ್ಮನವಿ ಸಲ್ಲಿಸುವ ಮೂಲಕ ಸಿಸಿಪಿಎ ಅಂಗೀಕರಿಸಿದ ಆದೇಶಗಳನ್ನು ಪ್ರಶ್ನಿಸಿವೆ.

ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಗ್ರಾಹಕರಿಗೆ ಮಾಹಿತಿ ಪಡೆಯುವ ಹಕ್ಕನ್ನು ನೀಡುತ್ತದೆ, ಇದರಲ್ಲಿ ಸತ್ಯವಾದ ಮತ್ತು ನಿಖರವಾದ ಮಾಹಿತಿಯನ್ನು ಪಡೆಯುವ ಹಕ್ಕು ಸೇರಿದೆ, ಇದು ಅವರಿಗೆ ತಿಳಿವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ದಾರಿತಪ್ಪಿಸುವ ಜಾಹೀರಾತುಗಳು ಈ ಹಕ್ಕನ್ನು ದುರ್ಬಲಗೊಳಿಸುತ್ತವೆ ಮತ್ತು ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಗಮನಾರ್ಹ ಸಮಯ, ಶ್ರಮ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಹೂಡಿಕೆ ಮಾಡುತ್ತಾರೆ ಮತ್ತು ಗ್ರಾಹಕರ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.

ಪೂರ್ಣ ಸಮಯದ ತರಗತಿ ಕಾರ್ಯಕ್ರಮಗಳು, ಆನ್‌ಲೈನ್ ಕೋರ್ಸ್‌ಗಳು, ಫೌಂಡೇಶನ್ ಬ್ಯಾಚ್‌ಗಳು, ಕ್ರ್ಯಾಶ್ ಕೋರ್ಸ್‌ಗಳು ಅಥವಾ ಕೇವಲ ಪರೀಕ್ಷಾ ಸರಣಿಗಳಿಗೆ ಹಾಜರಾಗಿದ್ದಾರೆಯೇ ಎಂಬುದನ್ನು ಒಳಗೊಂಡಂತೆ ಯಶಸ್ವಿ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಕೋರ್ಸ್‌ಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಮರೆಮಾಚುವುದು ಕಾಯ್ದೆಯಡಿ ದಾರಿತಪ್ಪಿಸುವ ಜಾಹೀರಾತಿಗೆ ಸಮನಾಗಿರುತ್ತದೆ ಎಂದು ಸಿಸಿಪಿಎ ಗಮನಿಸಿದೆ.

ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ತರಬೇತಿ ವಲಯದಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸಿಕೊಳ್ಳಲು ಈವರೆಗೆ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಅನ್ಯಾಯದ ವ್ಯಾಪಾರ ಪದ್ದತಿಗಳಿಗಾಗಿ ಸಿಸಿಪಿಎ ಕೋಚಿಂಗ್ ಸಂಸ್ಥೆಗಳಿಗೆ 60 ಕ್ಕೂ ಅಧಿಕ ನೋಟಿಸ್‌ಗಳನ್ನು ನೀಡಿದೆ. ವಿವರವಾದ ಪರೀಕ್ಷೆ ಮತ್ತು ತನಿಖೆಯ ನಂತರ, ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆ (ಸಿಎಸ್ ಇ ) ಐಐಟಿ-ಜೆಇಇ, ನೀಟ್ ಮತ್ತು ಆರ್ ಬಿಐ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಂತಹ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ 31 ಕೋಚಿಂಗ್ ಸಂಸ್ಥೆಗಳಿಗೆ ಸಿಸಿಪಿಎ 1.39 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸಿದೆ.

(ಅಂತಿಮ ಆದೇಶವು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ : https://doca.gov.in/ccpa/orders-advisories.php?page_no=1)

 

*****


(ಪ್ರಕಟಣೆ ಐ.ಡಿ.: 2261352) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , Marathi , हिन्दी , Tamil