ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ʻಕಾಮನ್ ವೆಲ್ತ್ ಕ್ರೀಡಾಕೂಟʼಕ್ಕೆ ಪೂರ್ವಭಾವಿಯಾಗಿ ರಾಷ್ಟ್ರವ್ಯಾಪಿ ತೊಡಗಿಸಿಕೊಳ್ಳುವಿಕೆ ಅಭಿಯಾನಗಳನ್ನು ಪ್ರಾರಂಭಿಸಿದ ʻಭಾರತೀಯ ಕ್ರೀಡಾ ಪ್ರಾಧಿಕಾರʼ ಮತ್ತು ʻಮೈಭಾರತ್ʼ
ಕಾಮನ್ ವೆಲ್ತ್ ಕ್ರೀಡಾಕೂಟದ ಅಭಿಯಾನಕ್ಕೆ ಸೇರಲು ದೇಶಾದ್ಯಂತದ ಯುವಕರಿಗೆ ಆಹ್ವಾನ
ಎಲ್ಲಾ ಮೂರು ಅಭಿಯಾನಗಳು ಉಚಿತವಾಗಿದ್ದು, ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ವಿಶೇಷವಾಗಿ ಯುವಕರನ್ನು ಉತ್ತೇಜಿಸುವ ಗುರಿ ಹೊಂದಿವೆ
ಪ್ರಕಟಣಾ ದಿನಾಂಕ:
12 MAY 2026 12:16PM by PIB Bengaluru
ಗುಜರಾತ್‌ನ ಅಹಮದಾಬಾದ್‌ನ ಆತಿಥ್ಯದಲ್ಲಿ ನಡೆಯಲಿರುವ ʻಕಾಮನ್ ವೆಲ್ತ್ ಗೇಮ್ಸ್-2030’(ಸಿಡಬ್ಲ್ಯೂಜಿ-2023) ಕ್ರೀಡಾಕೂಟಕ್ಕೆ ಪೂರ್ವಸಿದ್ಧತೆಯ ಭಾಗವಾಗಿ, ಭಾರತೀಯ ಕ್ರೀಡಾ ಪ್ರಾಧಿಕಾರವು (ಎಸ್‌ಎಐ) ʻಮೈಭಾರತ್ʼ ಪೋರ್ಟಲ್ ಸಹಯೋಗದೊಂದಿಗೆ ರಾಷ್ಟ್ರವ್ಯಾಪಿ ಮೂರು ಅಭಿಯಾನಗಳನ್ನು ಪ್ರಾರಂಭಿಸಿದೆ.
ಈ ಅಭಿಯಾನಗಳು ದೇಶಾದ್ಯಂತ ಕ್ರೀಡಾ ಸ್ಫೂರ್ತಿ, ಸೃಜನಶೀಲತೆ ಮತ್ತು ಯುವಜನರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಅಭಿಯಾನದ ಭಾಗವಾಗಿ, ಭಾಗವಹಿಸುವವರು 'ಕಾಮನ್ವೆಲ್ತ್ ಗೇಮ್ಸ್-2030 ಕ್ರೀಡಾ ಜ್ಯೋತಿ ವಿನ್ಯಾಸ ಸ್ಪರ್ಧೆ', 'ಸಿಡಬ್ಲ್ಯೂಜಿ ರೀಲ್ ಚಾಲೆಂಜ್' ಮತ್ತು 'ಕಾಮನ್ವೆಲ್ತ್ ಗೇಮ್ಸ್-2030 ರಸಪ್ರಶ್ನೆ'ಯಲ್ಲಿ ಭಾಗವಹಿಸಬಹುದು.
ಈ ಸ್ಪರ್ಧೆಗಳು ಎಲ್ಲಾ ʻಮೈಭಾರತ್ʼ ಪೋರ್ಟಲ್ ಬಳಕೆದಾರರಿಗೆ ಮುಕ್ತವಾಗಿವೆ ಮತ್ತು ʻಭಾರತದಲ್ಲಿ #CWG2030InBharat ಆಶಯದ ಬಗ್ಗೆ ಜಾಗೃತಿ ಮತ್ತು ಉತ್ಸಾಹವನ್ನು ಉಂಟುಮಾಡಲು ಪ್ರಯತ್ನಿಸುತ್ತವೆ.
ಕಾಮನ್ವೆಲ್ತ್ ಕ್ರೀಡಾಕೂಟ-2030 ಕ್ರೀಡಾ ಜ್ಯೋತಿ ವಿನ್ಯಾಸ ಸ್ಪರ್ಧೆ

'ಕಾಮನ್ ವೆಲ್ತ್ ಗೇಮ್ಸ್-2030 ಕ್ರೀಡಾ ಜ್ಯೋತಿ ವಿನ್ಯಾಸ ಸ್ಪರ್ಧೆ'ಯು ಭಾರತದ ಸಂಸ್ಕೃತಿ, ಪರಂಪರೆ, ನಾವೀನ್ಯತೆ, ಸುಸ್ಥಿರತೆ ಮತ್ತು ಕ್ರೀಡಾ ಶ್ರೇಷ್ಠತೆಯಿಂದ ಪ್ರೇರಿತವಾದ ಕ್ರೀಡಾ ಜ್ಯೋತಿಯ ಪರಿಕಲ್ಪನೆಯನ್ನು ವಿನ್ಯಾಸಗೊಳಿಸಲು ನಾಗರಿಕರನ್ನು ಆಹ್ವಾನಿಸುತ್ತದೆ. ಭಾಗವಹಿಸುವವರು ತಮ್ಮ ವಿನ್ಯಾಸದ ನಮೂದುಗಳನ್ನು ಡಿಜಿಟಲ್ ಅಥವಾ ಕೈಯಿಂದ ರಚಿಸಿದ ಸ್ವರೂಪದಲ್ಲಿ ಸಲ್ಲಿಸಬಹುದು. 200 ಪದಗಳವರೆಗಿನ ಪರಿಕಲ್ಪನೆಯ ಟಿಪ್ಪಣಿಯನ್ನೂ ಐಚ್ಛಿಕವಾಗಿ ಸೇರಿಸಬಹುದು.
ಈ ಸ್ಪರ್ಧೆಯನ್ನು 11 ಮೇ 2026 ರಿಂದ 20 ಮೇ 2026ರವರೆಗೆ ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಒಬ್ಬ ಸ್ಪರ್ಧಿಗೆ ಕೇವಲ ಒಂದು ನಮೂದನ್ನು ಸಲ್ಲಿಸಲು ಅವಕಾಶವಿದೆ. ಆಯ್ಕೆಯಾದ ವಿಜೇತರಿಗೆ ʻಫಿಟ್ ಇಂಡಿಯಾ ಹ್ಯಾಂಪರ್ʼಗಳು ಮತ್ತು ಮಾನ್ಯತೆ ಪ್ರಮಾಣಪತ್ರಗಳನ್ನು ನೀಡಲಾಗುವುದು. ಜೊತೆಗೆ, ಅರ್ಹ ಸ್ಪರ್ಧಿಗಳು ಡಿಜಿಟಲ್ ಭಾಗವಹಿಸುವಿಕೆ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ.
ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ:
https://mybharat.gov.in/pages/event_detail?event_name=CWG-2030-Torch-Design-Contest&key=644159126644
ʻಸಿಡಬ್ಲ್ಯೂಜಿ ರೀಲ್ ಚಾಲೆಂಜ್ʼ

'ಸಿಡಬ್ಲ್ಯೂಜಿ ರೀಲ್ ಚಾಲೆಂಜ್' ಸ್ಪರ್ಧೆಯು ಹೆಚ್ಚುತ್ತಿರುವ ಭಾರತದ ಕ್ರೀಡಾ ಸಂಸ್ಕೃತಿ, ಸ್ಥಳೀಯ ಕ್ರೀಡಾ ಮೂಲಸೌಕರ್ಯ, ಫಿಟ್ ನೆಸ್ ಮತ್ತು ʻಸಿಡಬ್ಲ್ಯೂಜಿ-2030ʼ ಆತಿಥ್ಯದ ಉತ್ಸಾಹವನ್ನು ಪ್ರದರ್ಶಿಸುವ ರೀಲ್‌ಗಳನ್ನು ರಚಿಸಲು ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತದೆ. ಈ ರೀಲ್‌ಗಳು ಮೂಲ ಸ್ವರೂಪದವಾಗಿರಬೇಕು.
ʻಸಿಡಬ್ಲ್ಯೂಜಿ 2030ʼಕ್ಕೆ ಭಾರತದ ಸನ್ನದ್ಧತೆಯನ್ನು ಬೆಂಬಲಿಸುವ ಮತ್ತು ʻಸಿಡಬ್ಲ್ಯೂಜಿ-2026ʼಕ್ಕೆ ಭಾರತೀಯ ತಂಡದ ಯಶಸ್ಸನ್ನು ಹಾರೈಸುವ ಸಂದೇಶಗಳನ್ನು ಸೇರಿಸಲು ಭಾಗವಹಿಸುವವರನ್ನು ಪ್ರೋತ್ಸಾಹಿಸಲಾಗುತ್ತದೆ. ʻರೀಲ್ʼ ಅವಧಿ 60 ಸೆಕೆಂಡುಗಳನ್ನು ಮೀರಬಾರದು.
ಈ ಸ್ಪರ್ಧೆಯು 07 ಮೇ 2026 ರಿಂದ 16 ಮೇ 2026 ರವರೆಗೆ ನಡೆಯುತ್ತದೆ. ಪ್ರತಿ ಸ್ಪರ್ಧಿಗೆ ಒಂದು ಪ್ರವೇಶವನ್ನು ಮಾತ್ರ ಅನುಮತಿಸಲಾಗಿದೆ. ಅಗ್ರ ಐದು ರೀಲ್ ರಚನೆಕಾರರು ʻಎಸ್ಎಐʼನಿಂದ ʻಫಿಟ್ ಇಂಡಿಯಾ ಹ್ಯಾಂಪರ್ʼಗಳನ್ನು ಪಡೆಯುತ್ತಾರೆ.
ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ:
https://mybharat.gov.in/pages/event_detail?event_name=CWG-Reel-Challenge&key=139158851139
ಕಾಮನ್ ವೆಲ್ತ್ ಕ್ರೀಡಾಕೂಟ 2030 ರಸಪ್ರಶ್ನೆ

'ಕಾಮನ್ ವೆಲ್ತ್ ಕ್ರೀಡಾಕೂಟ-2030 ರಸಪ್ರಶ್ನೆ' – ಇದು ಭಾರತದ ಕ್ರೀಡಾ ಪರಂಪರೆಯನ್ನು ಆಚರಿಸುವ ಜೊತೆಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ದೇಶದ ಪ್ರಯಾಣದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಈ ರಸಪ್ರಶ್ನೆಯು 5 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಾದ 10 ಬಹು-ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದೆ. ಸ್ಪರ್ಧಿಗಳು ಅರ್ಹತೆ ಪಡೆಯಲು ಕನಿಷ್ಠ 8 ಅಂಕಗಳನ್ನು ಗಳಿಸಬೇಕು. ಪ್ರತಿ ಸ್ಪರ್ಧಿಗೆ ಕೇವಲ ಒಂದು ಪ್ರಯತ್ನವನ್ನು ಮಾತ್ರ ಅನುಮತಿಸಲಾಗಿದೆ.
ರಸಪ್ರಶ್ನೆಯು 09 ಮೇ 2026 ರಿಂದ 26 ಸೆಪ್ಟೆಂಬರ್ 2026 ರವರೆಗೆ ನಡೆಯುತ್ತದೆ. ಪ್ರತಿ ವಾರ ಅಗ್ರ ಐದು ವಿಜೇತರನ್ನು ಘೋಷಿಸಲಾಗುತ್ತದೆ. ಭಾಗವಹಿಸುವಿಕೆ ಪ್ರಮಾಣಪತ್ರಗಳನ್ನು ಸಹ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ: https://mybharat.gov.in/quiz/quiz_dashboard/c09vUVNQUjlMKytsTStSQUkyVFhWQT09
ಎಲ್ಲಾ ಮೂರು ಅಭಿಯಾನಗಳು ಉಚಿತವಾಗಿವೆ. 2030ರ ಕಾಮನ್ ವೆಲ್ತ್ ಕ್ರೀಡಾಕೂಟದ ಯಶಸ್ವಿ ಆತಿಥ್ಯಕ್ಕಾಗಿ ಸೃಜನಶೀಲತೆ, ರಾಷ್ಟ್ರೀಯ ಹೆಮ್ಮೆ ಮತ್ತು ಸಾಮೂಹಿಕ ಉತ್ಸಾಹವನ್ನು ಬೆಳೆಸುವುದರ ಜೊತೆಗೆ ಭಾರತದ ಕ್ರೀಡಾ ಆಂದೋಲನದಲ್ಲಿ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಇವುಗಳ ಗುರಿಯಾಗಿದೆ.
*****
(ಪ್ರಕಟಣೆ ಐ.ಡಿ.: 2260196)
ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam