ಗೃಹ ವ್ಯವಹಾರಗಳ ಸಚಿವಾಲಯ
ಆಪರೇಷನ್ ಸಿಂದೂರಿನ ಮೊದಲ ವಾರ್ಷಿಕೋತ್ಸವದಂದು ಸಶಸ್ತ್ರ ಪಡೆಗಳ ಸಾಟಿಯಿಲ್ಲದ ಶೌರ್ಯಕ್ಕೆ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
'ಆಪರೇಷನ್ ಸಿಂದೂರ್' ಭಾರತದ ಯುಗದ ಧ್ಯೇಯವಾಗಿ ನಿಂತಿದೆ, ಇದು ನಮ್ಮ ಸಶಸ್ತ್ರ ಪಡೆಗಳ ದೋಷರಹಿತ ಹೊಡೆತ ಶಕ್ತಿಯನ್ನು ಯಾವಾಗಲೂ ನಮ್ಮ ಶತ್ರುಗಳಿಗೆ ನೆನಪಿಸುತ್ತದೆ
ಸಶಸ್ತ್ರ ಪಡೆಗಳ ನಿಖರವಾದ ಹೊಡೆತ ಶಕ್ತಿ, ಏಜೆನ್ಸಿಗಳ ನಿಖರವಾದ ಗುಪ್ತಚರ ಮಾಹಿತಿ ಮತ್ತು ದೃಢವಾದ ರಾಜಕೀಯ ಇಚ್ಛಾಶಕ್ತಿಯು ಗಡಿಯುದ್ದಕ್ಕೂ ಇರುವ ಭಯೋತ್ಪಾದಕ ನೆಲೆಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಒಗ್ಗೂಡಿತು
ಈ ದಿನವು ನಮ್ಮ ಶತ್ರುಗಳಿಗೆ ಅವರು ಎಲ್ಲಿ ಅಡಗಿಕೊಂಡರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಭಯಾನಕ ಸಂದೇಶವನ್ನು ತರುವುದನ್ನು ಮುಂದುವರಿಸುತ್ತದೆ
ಅವರು ಸದಾ ನಮ್ಮ ದೃಷ್ಟಿಯಲ್ಲಿ ಇರುತ್ತಾರೆ ಮತ್ತು ನಮ್ಮ ಶಸ್ತ್ರಸ್ತ್ರ ಪಡೆಗಳ ಉಗ್ರ ಕೋಪದಲ್ಲಿರುತ್ತಾರೆ
ಪ್ರಕಟಣಾ ದಿನಾಂಕ:
07 MAY 2026 10:30AM by PIB Bengaluru
ಆಪರೇಷನ್ ಸಿಂದೂರ್‌ನ ಮೊದಲ ವಾರ್ಷಿಕೋತ್ಸವದಂದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸಶಸ್ತ್ರ ಪಡೆಗಳ ಸಾಟಿಯಿಲ್ಲದ ಶೌರ್ಯಕ್ಕೆ ವಂದನೆ ಸಲ್ಲಿಸಿದರು ಮತ್ತು ಆಪರೇಷನ್ ಸಿಂದೂರ್ ಭಾರತದ ಯುಗದ ಧ್ಯೇಯವಾಗಿ ನಿಂತಿದೆ, ಇದು ನಮ್ಮ ಸಶಸ್ತ್ರ ಪಡೆಗಳ ದೋಷರಹಿತ ಹೊಡೆತ ಶಕ್ತಿಯನ್ನು ನಮ್ಮ ಶತ್ರುಗಳಿಗೆ ಯಾವಾಗಲೂ ನೆನಪಿಸುತ್ತದೆ ಎಂದು ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವರು, "ಆಪರೇಷನ್ ಸಿಂದೂರ್ ಭಾರತದ ಯುಗದ ಧ್ಯೇಯವಾಗಿ ನಿಂತಿದೆ, ಇದು ನಮ್ಮ ಸಶಸ್ತ್ರ ಪಡೆಗಳ ದೋಷಾತೀತ ಹೊಡೆತ ಶಕ್ತಿಯನ್ನು ನಮ್ಮ ಶತ್ರುಗಳಿಗೆ ಯಾವಾಗಲೂ ನೆನಪಿಸುತ್ತದೆ. ನಮ್ಮ ಸಶಸ್ತ್ರ ಪಡೆಗಳ ನಿಖರವಾದ ಹೊಡೆತದ ಶಕ್ತಿ, ನಮ್ಮ ಏಜೆನ್ಸಿಗಳ ನಿಖರವಾದ ಗುಪ್ತಚರ ಮಾಹಿತಿ ಮತ್ತು ಪಹಲ್ಗಾಮ್ ನಲ್ಲಿ ನಮ್ಮ ನಾಗರಿಕರ ಮೇಲೆ ಕೆಟ್ಟ ನೆರಳು ಬೀರುವ ಧೈರ್ಯ ಮಾಡಿದ ಗಡಿಯಾಚೆಗಿನ ಭಯೋತ್ಪಾದನೆಯ ಪ್ರತಿಯೊಂದು ವಿಳಾಸವನ್ನು ನಾಶಪಡಿಸಲು ಒಟ್ಟಾಗಿ ಏರುವ ದೃಢವಾದ ರಾಜಕೀಯ ಇಚ್ಛಾಶಕ್ತಿಯ ದಿನ ಎಂದು ಇತಿಹಾಸವು ನೆನಪಿಸಿಕೊಳ್ಳುತ್ತದೆ. ಈ ದಿನವು ನಮ್ಮ ಶತ್ರುಗಳಿಗೆ ಅವರು ಎಲ್ಲಿ ಅಡಗಿಕೊಂಡರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಭಯಾನಕ ಸಂದೇಶವನ್ನು ತರುವುದನ್ನು ಮುಂದುವರಿಸುತ್ತದೆ. ಅವರು ಯಾವಾಗಲೂ ನಮ್ಮ ದೃಷ್ಟಿಯಲ್ಲಿ ಇರುತ್ತಾರೆ ಮತ್ತು ನಮ್ಮ ಶಸ್ತ್ರಸ್ತ್ರ ಪಡೆಗಳ ಉಗ್ರ ಕೋಪದಲ್ಲಿರುತ್ತಾರೆ. ಈ ದಿನದಂದು, ನಮ್ಮ ಪಡೆಗಳ ಸಾಟಿಯಿಲ್ಲದ ಶೌರ್ಯಕ್ಕೆ ನಾನು ನಮಸ್ಕರಿಸುತ್ತೇನೆ."
*****
(ಪ್ರಕಟಣೆ ಐ.ಡಿ.: 2258635)
ವಿಸಿಟರ್ ಕೌಂಟರ್ : 10