ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಚಿಂತನ ಶಿಬಿರದಲ್ಲಿ ಭಿಕ್ಷುಕರ/ಆಶ್ರಯ ಗೃಹಗಳ ಆರೈಕೆ, ಪುನರ್ ವಸತಿ ಮತ್ತು ನಿರ್ವಹಣೆ ಕುರಿತು ಮಾದರಿ ಮಾರ್ಗಸೂಚಿ ಅನಾವರಣ

ಪ್ರಕಟಣಾ ದಿನಾಂಕ: 25 APR 2026 10:41AM by PIB Bengaluru

ಚಂಡೀಗಢದಲ್ಲಿ 2026ರ ಏಪ್ರಿಲ್ 24 ರಿಂದ 26 ರವರೆಗೆ ನಡೆಯುತ್ತಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಡೆದ ಚಿಂತನ ಶಿಬಿರದಲ್ಲಿ ಭಿಕ್ಷುಕರ/ಆಶ್ರಯ ಗೃಹಗಳ ಆರೈಕೆ, ಪುನರ್ ವಸತಿ ಮತ್ತು ನಿರ್ವಹಣೆ ಕುರಿತು ಮಾದರಿ ಮಾರ್ಗಸೂಚಿಗಳನ್ನು ಅನಾವರಣಗೊಳಿಸಲಾಯಿತು.

ಈ ಮಾರ್ಗಸೂಚಿಗಳು ಮುನ್ನೆಚ್ಚರಿಕೆ ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ, ಮೂಲಸೌಕರ್ಯ ಮತ್ತು ಸಾಮರ್ಥ್ಯ, ಪೋಷಣೆ ಮತ್ತು ಆಹಾರ ಸುರಕ್ಷತೆ, ವೃತ್ತಿಪರ ತರಬೇತಿ ಮತ್ತು ಪುನರ್ ವಸತಿ,  ಕಾನೂನು ನೆರವು ಮತ್ತು ಜಾಗೃತಿ, ಮಕ್ಕಳ ಮತ್ತು ಲಿಂಗ ಸಂವೇದನೆ ಮತ್ತು ಹೊಣೆಗಾರಿಕೆ ಮತ್ತು ಮೇಲ್ವಿಚಾರಣೆಯಂತಹ ಪ್ರಮುಖ ವಲಯಗಳನ್ನು ಒಳಗೊಂಡ ಸಮಗ್ರ ಚೌಕಟ್ಟನ್ನು ಒದಗಿಸುತ್ತವೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೇಲೆ ತಿಳಿಸಿದ ನಿರ್ದೇಶನಗಳ ಏಕರೂಪದ ಜಾರಿಯನ್ನು ಸುಗಮಗೊಳಿಸಲು ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳೊಂದಿಗೆ ಸಂಯೋಜನೆಗೊಳಿಸುವುದನ್ನೂ ಸಹ ಅವು ಒತ್ತಿಹೇಳುತ್ತವೆ.

ದೇಶಾದ್ಯಂತ ಭಿಕ್ಷುಕರ/ಆಶ್ರಯ ಗೃಹಗಳಲ್ಲಿ ಮಾನವೀಯ ಮತ್ತು ಘನತೆಯ ಜೀವನ ಪರಿಸ್ಥಿತಿಗಳನ್ನು ಖಾತ್ರಿಪಡಿಸಿಕೊಳ್ಳಲು ಈ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

 

*****


(ಪ್ರಕಟಣೆ ಐ.ಡಿ.: 2255489) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , हिन्दी , Marathi , Punjabi , Gujarati , Telugu