ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಔಷಧೀಯ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯ ಶಕ್ತಿ ಕುರಿತು ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 14 APR 2026 1:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. 

ಈ ಲೇಖನವು ಭಾರತದ ಔಷಧೀಯ ಕ್ಷೇತ್ರವು “ವಿಶ್ವದ ಫಾರ್ಮಸಿ”ಯಿಂದ ಹೊಸತನದ ಕೇಂದ್ರವಾಗಿಯೂ ರೂಪಾಂತರಗೊಳ್ಳುತ್ತಿರುವುದನ್ನು ಉಲ್ಲೇಖಿಸುತ್ತದೆ. ಇಂದಿನ ಕೇಂದ್ರ ಸರ್ಕಾರದ ಅವಧಿಯಲ್ಲಿ ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿ, ಜೈವಿಕ ಔಷಧಗಳು, ಬಯೋಸಿಮಿಲರ್ಸ್ ಅಂದರೆ ಮೂಲ ಔಷಧಿಯಂತೆ ಗುಣಮಟ್ಟ ಮತ್ತು ಪರಿಣಾಮ ಬೀರುವ ಔಷಧಿಗಳು ಹಾಗೂ ಅತ್ಯಾಧುನಿಕ ಚಿಕಿತ್ಸೆಗಳ ಮೇಲೆ ಹೆಚ್ಚು ಗಮನ ನೀಡಲಾಗಿದೆ ಎಂದು ಇದು ಸೂಚಿಸುತ್ತದೆ. ಭಾರತವು ಈ ಕ್ಷೇತ್ರದಲ್ಲಿ ಜಾಗತಿಕ ಸ್ಪರ್ಧೆಯಲ್ಲಿ ಮುನ್ನಡೆಯಲು ಸಿದ್ಧಗೊಳ್ಳುತ್ತಿದೆ ಎಂಬುದನ್ನೂ ಲೇಖನ ಉಲ್ಲೇಖಿಸುತ್ತದೆ.

ಪ್ರಧಾನಮಂತ್ರಿಗಳ ಕಚೇರಿಯ ಎಕ್ಸ್ ಖಾತೆಯಲ್ಲಿ ಇದನ್ನು ಹೀಗೆ ಹೇಳಿದ್ದಾರೆ;

“ವಿಶ್ವದ ಫಾರ್ಮಸಿ”ಯಿಂದ ಹೊಸ ಸಂಶೋಧನೆಯವರೆಗೆ, ಭಾರತದ ಔಷಧೀಯ ಕ್ಷೇತ್ರವು ಮೌಲ್ಯ ಸರಪಳಿಯಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿ ಕಂಡಿದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿ, ಬಯೋಲಾಜಿಕ್ಸ್, ಬಯೋಸಿಮಿಲರ್ಸ್ ಮತ್ತು ಅತ್ಯಾಧುನಿಕ ಚಿಕಿತ್ಸೆಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ಈ ಕ್ಷೇತ್ರದಲ್ಲಿ ಜಾಗತಿಕ ಸ್ಪರ್ಧೆಯನ್ನು ಮುನ್ನಡೆಸಲು ಭಾರತ ಹೇಗೆ ಸಿದ್ಧಗೊಳ್ಳುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರ ವಿಮರ್ಶಾತ್ಮಕ ಲೇಖನ ತಪ್ಪದೆ ಓದಿ! ಲೇಖನದ ಕೊಂಡಿ ಇಲ್ಲಿದೆ''

https://www.thehindubusinessline.com/opinion/india-moving-up-the-pharma-value-chain/article70858640.ece

 

*****


(ಪ್ರಕಟಣೆ ಐ.ಡಿ.: 2251883) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Manipuri , Assamese , Gujarati , Telugu