ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ಭಾರತದ ಉಪ ರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದರು
ಪ್ರಧಾನಮಂತ್ರಿ ಅವರು ಉಪ ರಾಷ್ಟ್ರಪತಿಗಳಿಗೆ ಪುತ್ತಾಂಡು ಹಬ್ಬದ ಶುಭಾಶಯಗಳನ್ನು ತಿಳಿಸಿದರು
ಪ್ರಕಟಣಾ ದಿನಾಂಕ:
14 APR 2026 10:35AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಉಪ ರಾಷ್ಟ್ರಪತಿ ತಿರು ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ, ತಮಿಳು ಜನತೆಯ ಹೊಸ ವರ್ಷವಾದ ಪುತ್ತಾಂಡು ಹಬ್ಬದ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು.
ಉತ್ತಮ ಆರೋಗ್ಯ ಮತ್ತು ಸಂತೋಷದಿಂದ ಕೂಡಿದ ಅದ್ಭುತ ವರ್ಷವಾಗಿರಲಿ ಎಂದು ಪ್ರಧಾನಮಂತ್ರಿಯವರು ಪ್ರಾರ್ಥಿಸಿದರು.
ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;
“ಭಾರತದ ಉಪ ರಾಷ್ಟ್ರಪತಿಗಳಾದ ತಿರು ಸಿ. ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ, ಪುತ್ತಾಂಡು ವಿಶೇಷ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದೆ. ಉತ್ತಮ ಆರೋಗ್ಯ ಮತ್ತು ಸಂತೋಷದಿಂದ ಕೂಡಿದ ಅದ್ಭುತ ವರ್ಷವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.'
@VPIndia
@CPR_VP”
*****
(ಪ್ರಕಟಣೆ ಐ.ಡಿ.: 2251763)
ವಿಸಿಟರ್ ಕೌಂಟರ್ : 12