ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಗೌರವಾನ್ವಿತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು 2026ರ ಏಪ್ರಿಲ್ 9-10 ರಂದು ಕತಾರ್ ನ ದೋಹಾಕ್ಕೆ ಭೇಟಿ
ಪ್ರಕಟಣಾ ದಿನಾಂಕ:
10 APR 2026 2:42PM by PIB Bengaluru
ಗೌರವಾನ್ವಿತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಏಪ್ರಿಲ್ 9 ರಂದು ಮಧ್ಯಾಹ್ನ ದೋಹಾಕ್ಕೆ ಆಗಮಿಸಿದರು. ಸಂಜೆ, ಅವರು ಕತಾರ್ ಇಂಧನ ವ್ಯವಹಾರಗಳ ಸಚಿವರಾದ ಹಾಗೂ ಕತಾರ್ ಎನರ್ಜಿಯ ಅಧ್ಯಕ್ಷರಾದ ಮತ್ತು ಸಿಇಒ ಘನತೆವೆತ್ತ ಶ್ರೀ ಸಾದ್ ಶೆರಿದಾ ಅಲ್-ಕಾಬಿ ಅವರನ್ನು ಭೇಟಿಯಾದರು.
ಕತಾರ್ ನ ಗೌರವಾನ್ವಿತ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಹಾಗೂ ಕತಾರ್ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವರಾದ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥಾನಿ ಅವರಿಗೆ ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರವಾಗಿ ಒಗ್ಗಟ್ಟು ಮತ್ತು ಬೆಂಬಲದ ಶುಭಾಶಯಗಳು, ಬೆಂಬಲದ ಸಂದೇಶವನ್ನು ಸಚಿವರು ತಿಳಿಸಿದರು.

ಸಂಘರ್ಷ ಪ್ರಾರಂಭವಾದ ನಂತರ ಮಾರ್ಚ್ 2026ರಲ್ಲಿ ಪ್ರಧಾನಮಂತ್ರಿ ಮೋದಿ ಮತ್ತು ಘನತೆವೆತ್ತ ಅಮೀರ್ ನಡುವಿನ ಎರಡು ದೂರವಾಣಿ ಸಂಭಾಷಣೆಗಳನ್ನು ಅವರು ನೆನಪಿಸಿಕೊಂಡರು, ಈ ಸಮಯದಲ್ಲಿ ಇಬ್ಬರೂ ನಾಯಕರು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದರು. ಭಾರತೀಯ ಸಮುದಾಯಕ್ಕೆ ಕತಾರ್ ನೀಡಿದ ಕಾಳಜಿ ಮತ್ತು ಬೆಂಬಲಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಉನ್ನತ ಮಟ್ಟದ ಮಾತುಕತೆಗಳು, ವ್ಯಾಪಾರ, ಹೂಡಿಕೆ, ಇಂಧನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಸಂಬಂಧಗಳ ಎಲ್ಲಾ ಅಂಶಗಳ ಬಗ್ಗೆ ಉಭಯ ಸಚಿವರು ಚರ್ಚಿಸಿದರು. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಶೀಘ್ರ ಮರಳುತ್ತದೆ ಜೊತೆಗೆ ಭಾರತ ಮತ್ತು ಕತಾರ್ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಘನತೆವೆತ್ತ ಸಚಿವರಾದ ಸಾದ್ ಶೆರಿದಾ ಅಲ್-ಕಾಬಿ ಅವರು ವಿಶ್ವಾಸಾರ್ಹ ಇಂಧನ ಪೂರೈಕೆದಾರನಾಗಿ ಉಳಿಯುವ ಕತಾರ್ ದೇಶದ ಬದ್ಧತೆಯನ್ನು ಪುನರುಚ್ಚರಿಸಿದರು. ಇದೇವೇಳೆ, ಭಾರತದೊಂದಿಗೆ ಇಂಧನ ಸಂಬಂಧಗಳು ಮತ್ತು ಸಹಕಾರವನ್ನು ಮುಂದುವರಿಸಲು ಮತ್ತು ಬಲಪಡಿಸಲು ಎದುರು ನೋಡುತ್ತಿರುವುದಾಗಿ ಹೇಳಿದರು.

ಏಪ್ರಿಲ್ 8 ರಂದು ಸಮ್ಮತಿಸಲಾದ ಎರಡು ವಾರಗಳ ಕದನ ವಿರಾಮವನ್ನು ಉಭಯ ಸಚಿವರು ಸ್ವಾಗತಿಸಿದರು ಮತ್ತು ಜಾಗತಿಕ ಇಂಧನ ಪೂರೈಕೆಯಲ್ಲಿನ ಅಡಚಣೆಯನ್ನು ಶೀಘ್ರವಾಗಿ ಕೊನೆಗೊಳಿಸುವ ಮತ್ತು ಸಹಜ ಸ್ಥಿತಿಯನ್ನು ಪುನಃಸ್ಥಾಪಿಸುವ ಮಹತ್ವವನ್ನು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಜಾಗತಿಕ ಪೂರೈಕೆ ಸರಪಳಿಗಳನ್ನು ಕಾಪಾಡಿಕೊಳ್ಳಲು ನೌಕಾಯಾನದ ಸ್ವಾತಂತ್ರ್ಯ ಮತ್ತು ವಾಣಿಜ್ಯದ ವಹಿವಾಟಿನ ಜಾಗತಿಕ ಹರಿವಿನ ಅಗತ್ಯವನ್ನು ಅವರು ಒತ್ತಿ ಹೇಳಿದರು.
ತಮಗೆ ಆತಿಥ್ಯ ನೀಡಿದ್ದಕ್ಕಾಗಿ ಕತಾರ್ ನ ಇಂಧನ ವ್ಯವಹಾರಗಳ ಸಚಿವರಾದ ಶ್ರೀ ಕಾಬಿ ಅವರಿಗೆ ಗೌರವಾನ್ವಿತ ಸಚಿವರು ಧನ್ಯವಾದ ಅರ್ಪಿಸಿದರು. ಮುಂಬರುವ ವಾರಗಳಲ್ಲಿ ನಿಯಮಿತವಾಗಿ ಸಂಪರ್ಕದಲ್ಲಿರಲು ಉಭಯ ಸಚಿವರು ಸಹಮತ ವ್ಯಕ್ತಪಡಿಸಿದರು.
*****
(ಪ್ರಕಟಣೆ ಐ.ಡಿ.: 2250782)
ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ:
Assamese
,
English
,
Urdu
,
Marathi
,
हिन्दी
,
Bengali-TR
,
Bengali
,
Punjabi
,
Gujarati
,
Telugu
,
Malayalam