ನೌಕಾ ಸಚಿವಾಲಯ
2025–26ರ ಹಣಕಾಸು ವರ್ಷದಲ್ಲಿ ಪ್ರಮುಖ ಬಂದರುಗಳು 915 ಮಿಲಿಯನ್ ಟನ್ ಸರಕು ಸಾಗಣೆಯನ್ನು ದಾಖಲಿಸಿವೆ, 7.06% ಬೆಳವಣಿಗೆಯೊಂದಿಗೆ ಗುರಿಯನ್ನು ಮೀರಿ ಸಾಧಿಸಿವೆ
ವರ್ಷದಿಂದ ವರ್ಷಕ್ಕೆ ಬಲವಾದ ಬೆಳವಣಿಗೆಯು ದಕ್ಷತೆಯ ಲಾಭಗಳು ಮತ್ತು ಸಾಮರ್ಥ್ಯ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ
ಮಾರಿಟೈಮ್ ಅಮೃತ್ ಕಾಲ್ ವಿಷನ್ 2047 ಅಡಿಯಲ್ಲಿ ಭಾರತದ ವ್ಯಾಪಾರದ ತೀವ್ರತೆಯನ್ನು ಬಂದರುಗಳು ಹೆಚ್ಚಿಸುತ್ತವೆ
ಪ್ರಕಟಣಾ ದಿನಾಂಕ:
05 APR 2026 2:27PM by PIB Bengaluru
ಭಾರತದ ಕಡಲ ವಲಯಕ್ಕೆ ಮಹತ್ವದ ಸಾಧನೆಯಲ್ಲಿ, ಬಂದರುಗಳು, ಕೇಂದ್ರ ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿರುವ ಪ್ರಮುಖ ಬಂದರುಗಳು 2025–26ರ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ 915.17 ಮಿಲಿಯನ್ ಟನ್ (ಎಂಟಿ) ಸರಕು ಸಾಗಣೆಯನ್ನು ನಿರ್ವಹಿಸಿವೆ, ಹಾಗೂ ಇದು ವಾರ್ಷಿಕ 904 ಮಿಲಿಯನ್ ಟನ್ (ಎಂಟಿ) ಗುರಿಯನ್ನು ಮೀರಿದ ಸಾಧನೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ 7.06% ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ, ಇದು ವಲಯದ ಬಲವಾದ ಚೇತರಿಕೆ, ವರ್ಧಿತ ದಕ್ಷತೆ ಮತ್ತು ನಿರಂತರ ಬೆಳವಣಿಗೆಯ ಪಥವನ್ನು ಪುನರುಚ್ಚರಿಸುತ್ತದೆ. ಈ ಮಹತ್ವದ ಮೈಲಿಗಲ್ಲು, ಭಾರತ ಸರ್ಕಾರವು ಬಂದರು ಮೂಲಸೌಕರ್ಯವನ್ನು ಆಧುನೀಕರಿಸಲು, ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸಲು ಮತ್ತು ಮಾರಿಟೈಮ್ ಅಮೃತ್ ಕಾಲ್ ವಿಷನ್ 2047 ರ ಅಡಿಯಲ್ಲಿ ಪ್ರಮುಖ ಕಡಲ ರಾಷ್ಟ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಲು ಕೈಗೊಂಡ ಪರಿವರ್ತನಾತ್ಮಕ ಸುಧಾರಣೆಗಳು ಮತ್ತು ಕಾರ್ಯತಂತ್ರದ ಹೂಡಿಕೆಗಳ ಪರಿಣಾಮವನ್ನು ಒತ್ತಿ ಹೇಳುತ್ತದೆ.
ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್, "ನಮ್ಮ ಪ್ರಮುಖ ಬಂದರುಗಳಿಂದ 915 ಮಿಲಿಯನ್ ಟನ್ ಗಳಿಗೂ ಹೆಚ್ಚಿನ ದಾಖಲೆಯ ಸರಕು ನಿರ್ವಹಣೆಯು ಭಾರತದ ಮಾರಿಟೈಮ್ ವಲಯವನ್ನು ಬಲಪಡಿಸುವ ಸರ್ಕಾರದ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಮಾರ್ಗದರ್ಶನ ಪಡೆದ ನಾವು ವಿಶ್ವ ದರ್ಜೆಯ ಬಂದರು ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ, ದಕ್ಷತೆಯನ್ನು ಸುಧಾರಿಸುತ್ತಿದ್ದೇವೆ ಮತ್ತು ಭಾರತದ ಬೆಳೆಯುತ್ತಿರುವ ಆರ್ಥಿಕತೆಯನ್ನು ಬೆಂಬಲಿಸಲು ತಡೆರಹಿತ ಲಾಜಿಸ್ಟಿಕ್ಸ್ ಅನ್ನು ಸಕ್ರಿಯಗೊಳಿಸುತ್ತಿದ್ದೇವೆ. ಈ ಸಾಧನೆಯು ಮಾರಿಟೈಮ್ ಅಮೃತ್ ಕಾಲ್ ವಿಷನ್ 2047 ರ ಅಡಿಯಲ್ಲಿ ಭಾರತವನ್ನು ಜಾಗತಿಕ ಮಾರಿಟೈಮ್ ಪವರ್‌ಹೌಸ್ ಆಗಿ ಇರಿಸುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ" ಎಂದು ಹೇಳಿದರು.
ಪ್ರಮುಖ ಬಂದರುಗಳಲ್ಲಿ ಈ ಕಾರ್ಯಕ್ಷಮತೆಯು ಸ್ಥಿರವಾದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ, ದೀನದಯಾಳ್ ಬಂದರು ಪ್ರಾಧಿಕಾರವು 160.11 ಎಂಟಿ ಯೊಂದಿಗೆ ಅಗ್ರ ಕಾರ್ಯಕ್ಷಮತೆಯನ್ನು ಹೊರಹೊಮ್ಮಿದೆ, ನಂತರ ಪಾರಾದೀಪ್ ಬಂದರು ಪ್ರಾಧಿಕಾರವು 156.45 ಎಂಟಿ ಯೊಂದಿಗೆ ಮತ್ತು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರವು (ಜೆ.ಎನ್.ಪಿ.ಎ.) 102.01 ಎಂಟಿ ಯೊಂದಿಗೆ ಹೊರಹೊಮ್ಮಿದೆ. ವಿಶಾಖಪಟ್ಟಣ ಬಂದರು ಪ್ರಾಧಿಕಾರ, ಮುಂಬೈ ಬಂದರು ಪ್ರಾಧಿಕಾರ, ಚೆನ್ನೈ ಬಂದರು ಪ್ರಾಧಿಕಾರ ಮತ್ತು ನವ ಮಂಗಳೂರು ಬಂದರು ಪ್ರಾಧಿಕಾರ ಸೇರಿದಂತೆ ಇತರ ಪ್ರಮುಖ ಬಂದರುಗಳು ಸಹ ಬಲವಾದ ಕಾರ್ಯಕ್ಷಮತೆಯನ್ನು ದಾಖಲಿಸಿದ್ದು, ಒಟ್ಟಾರೆ ಸರಕು ಸಾಗಣೆಗೆ ಗಮನಾರ್ಹವಾಗಿ ಕೊಡುಗೆ ನೀಡಿವೆ. ಬೆಳವಣಿಗೆಯ ದರದಲ್ಲಿ, ಮೊರ್ಮುಗಾವೊ ಬಂದರು ಪ್ರಾಧಿಕಾರವು 15.91% ರಷ್ಟು ಅತ್ಯಧಿಕ ಹೆಚ್ಚಳವನ್ನು ದಾಖಲಿಸಿದೆ, ನಂತರ ಕೋಲ್ಕತಾ ಡಾಕ್ ಸಿಸ್ಟಮ್ 14.28% ಮತ್ತು ಜೆ.ಎನ್.ಪಿ.ಎ. 10.74% ರಷ್ಟು ದಾಖಲಾಗಿದ್ದು, ಇದು ಸುಧಾರಿತ ದಕ್ಷತೆ ಮತ್ತು ಹೆಚ್ಚುತ್ತಿರುವ ಸರಕು ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ.
ಸರಕು ನಿರ್ವಹಣೆಯಲ್ಲಿ ನಿರಂತರ ಬೆಳವಣಿಗೆಗೆ ಬಂದರು ಮೂಲಸೌಕರ್ಯದ ಸಾಮರ್ಥ್ಯ ವರ್ಧನೆ ಮತ್ತು ಆಧುನೀಕರಣ, ಬಲಪಡಿಸಿದ ಮಲ್ಟಿಮೋಡಲ್ ಸಂಪರ್ಕ ಮತ್ತು ತಡೆರಹಿತ ಒಳನಾಡು ಸಂಪರ್ಕಗಳು, ಡಿಜಿಟಲ್ ಮತ್ತು ಸ್ಮಾರ್ಟ್ ಬಂದರು ಉಪಕ್ರಮಗಳ ಅಳವಡಿಕೆ, ಕಲ್ಲಿದ್ದಲು, ಕಚ್ಚಾ ತೈಲ, ಕಂಟೇನರ್ ಗಳು, ರಸಗೊಬ್ಬರಗಳು ಮತ್ತು ಪಿಒಎಲ್ ಸೇರಿದಂತೆ ಪ್ರಮುಖ ಸರಕುಗಳ ಹೆಚ್ಚಿದ ನಿರ್ವಹಣೆ, ಹಾಗೆಯೇ ಸುಧಾರಿತ ಟರ್ನ್ ಅರೌಂಡ್ ಸಮಯ ಮತ್ತು ಬಂದರುಗಳಲ್ಲಿ ವ್ಯಾಪಾರ ಮಾಡುವ ಸುಲಭತೆ ಕಾರಣವಾಗಿವೆ. ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಬಂದರು-ನೇತೃತ್ವದ ಅಭಿವೃದ್ಧಿ, ಲಾಜಿಸ್ಟಿಕ್ಸ್ ಏಕೀಕರಣ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಿದ ಸಮಗ್ರ ಕಡಲ ಕಾರ್ಯತಂತ್ರವನ್ನು ಮುಂದುವರಿಸುತ್ತಿದೆ.
2025–26ನೇ ಹಣಕಾಸು ವರ್ಷದಲ್ಲಿ ದಾಖಲೆಯ ಕಾರ್ಯಕ್ಷಮತೆಯು ಬೆಳೆಯುತ್ತಿರುವ ವ್ಯಾಪಾರ ವಿಶ್ವಾಸ ಮತ್ತು ಕಾರ್ಯಾಚರಣೆಯ ದಕ್ಷತೆ ಮತ್ತು ಸಾಮರ್ಥ್ಯ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನೀತಿ ಕ್ರಮಗಳ ಪರಿಣಾಮಕಾರಿತ್ವವನ್ನು ಪ್ರತಿಬಿಂಬಿಸುತ್ತದೆ. ನಿರಂತರ ಸುಸ್ಥಿರ ನೀತಿಯಲ್ಲಿ ತೀವ್ರತೆ ಮತ್ತು ಮೂಲಸೌಕರ್ಯ ಅಪಾರ ಹೂಡಿಕೆಗಳೊಂದಿಗೆ, ಭಾರತದ ಪ್ರಮುಖ ಬಂದರುಗಳು ಹೊಸ ಮೈಲಿಗಲ್ಲುಗಳನ್ನು ಮತ್ತಷ್ಟು ತಲುಪಲು ಮತ್ತು ರಾಷ್ಟ್ರದ ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ವ್ಯಾಪಾರ ನಾಯಕತ್ವಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಲು ಈಗ ಉತ್ತಮ ಸ್ಥಾನದಲ್ಲಿವೆ.


*****
(ಪ್ರಕಟಣೆ ಐ.ಡಿ.: 2249135)
ವಿಸಿಟರ್ ಕೌಂಟರ್ : 20