ಪ್ರಧಾನ ಮಂತ್ರಿಯವರ ಕಛೇರಿ
ರಷ್ಯಾದ ಮೊದಲ ಉಪ ಪ್ರಧಾನಮಂತ್ರಿ ಡೆನಿಸ್ ಮ್ಯಾಂಟುರೋವ್ ಅವರಿಂದ ಪ್ರಧಾನಮಂತ್ರಿ ಮೋದಿ ಅವರ ಭೇಟಿ
ಪ್ರಧಾನಮಂತ್ರಿಗಳಿಗೆ ವ್ಯಾಪಾರ, ರಸಗೊಬ್ಬರ, ಸಂಪರ್ಕ ಮತ್ತು ಜನರ ನಡುವಿನ ಬಾಂಧವ್ಯದ ಪ್ರಗತಿಯ ಬಗ್ಗೆ ಪ್ರಥಮ ಉಪ ಪ್ರಧಾನಮಂತ್ರಿ ಮ್ಯಾಂಟುರೋವ್ ವಿವರಣೆ
ಡಿಸೆಂಬರ್ 2025ರಲ್ಲಿ ಅಧ್ಯಕ್ಷರಾದ ಪುಟಿನ್ ಅವರ ಯಶಸ್ವಿ ಭಾರತ ಭೇಟಿ ನೆನಪು ಮಾಡಿಕೊಂಡ ಪ್ರಧಾನಮಂತ್ರಿ
ಶೃಂಗಸಭೆಯ ಫಲಿತಾಂಶಗಳ ಅನುಷ್ಠಾನಕ್ಕೆ ನಿರಂತರ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿ ತೃಪ್ತಿ
ಅಧ್ಯಕ್ಷರಾದ ಪುಟಿನ್ ಅವರಿಗೆ ಪ್ರಧಾನಮಂತ್ರಿಗಳಿಂದ ಶುಭ ಹಾರೈಕೆ
ಪ್ರಕಟಣಾ ದಿನಾಂಕ:
02 APR 2026 7:21PM by PIB Bengaluru
ರಷ್ಯಾ ಒಕ್ಕೂಟದ ಪ್ರಥಮ ಉಪ ಪ್ರಧಾನಮಂತ್ರಿ ಮಾನ್ಯ ಡೆನಿಸ್ ಮ್ಯಾಂಟುರೋವ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ, ರಸಗೊಬ್ಬರಗಳು, ಸಂಪರ್ಕ ಮತ್ತು ಜನರ ನಡುವಿನ ಸಂಬಂಧ ಸೇರಿದಂತೆ ಪರಸ್ಪರ ಅನುಕೂಲಕರ ಸಹಕಾರದ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯ ಬಗ್ಗೆ ಪ್ರಥಮ ಉಪ ಪ್ರಧಾನಮಂತ್ರಿ ಮ್ಯಾಂಟುರೋವ್ ಅವರು ಪ್ರಧಾನಮಂತ್ರಿಗಳಿಗೆ ವಿವರಿಸಿದರು.
23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ 2025 ರ ಡಿಸೆಂಬರ್ ನಲ್ಲಿ ಅಧ್ಯಕ್ಷ ಪುಟಿನ್ ಅವರ ಯಶಸ್ವಿ ಭಾರತ ಭೇಟಿಯನ್ನು ಪ್ರಧಾನಮಂತ್ರಿ ಇದೇ ವೇಳೆ ಸ್ಮರಿಸಿದರು.
ಭಾರತ-ರಷ್ಯಾ ನಡುವಿನ ವಿಶೇಷ ಮತ್ತು ಪ್ರತ್ಯೇಕ ಸವಲತ್ತುಳ್ಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿರುವ ವಾರ್ಷಿಕ ಶೃಂಗಸಭೆಯ ಫಲಿತಾಂಶಗಳ ಅನುಷ್ಠಾನಕ್ಕೆ ಎರಡೂ ದೇಶಗಳ ನಿರಂತರ ಪ್ರಯತ್ನಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.
ಅಧ್ಯಕ್ಷರಾದ ಪುಟಿನ್ ಅವರಿಗೆ ಪ್ರಧಾನಮಂತ್ರಿಗಳು ಆತ್ಮೀಯವಾಗಿ ಶುಭ ಕೋರಿದರು ಮತ್ತು ಅವರ ನಿರಂತರ ವಿನಿಮಯ ಎದುರು ನೋಡುತ್ತಿರುವುದಾಗಿ ಹೇಳಿದರು.
*****
(ಪ್ರಕಟಣೆ ಐ.ಡಿ.: 2248763)
ವಿಸಿಟರ್ ಕೌಂಟರ್ : 12