ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಸನಂದ್‌ನಲ್ಲಿಕೇನ್ಸ್ ಸೆಮಿಕಾನ್ ಸ್ಥಾವರದ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣದ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ
ಪ್ರಕಟಣಾ ದಿನಾಂಕ:
31 MAR 2026 4:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಸನಂದ್‌ನಲ್ಲಿ ಕೇನ್ಸ್ ಟೆಕ್ನಾಲಜಿ ಸೆಮಿಕಂಡಕ್ಟರ್ ಘಟಕದ ಉದ್ಘಾಟನೆಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ. ಮೈಕ್ರಾನ್ ಸ್ಥಾವರದಲ್ಲಿಉತ್ಪಾದನೆಯನ್ನು ಪ್ರಾರಂಭಿಸಲು ಫೆಬ್ರವರಿ 28ರಂದು ಸನಂದ್‌ನಲ್ಲಿದ್ದರು ಮತ್ತು ಕೇನ್ಸ್ ಮೈಲಿಗಲ್ಲಿಗಾಗಿ ಸರಿಯಾಗಿ ಒಂದು ತಿಂಗಳ ನಂತರ ಮರಳಿದ್ದಾರೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಭಾರತದ ಸೆಮಿಕಂಡಕ್ಟರ್ ಪ್ರಯಾಣದ ವೇಗವನ್ನು ಒತ್ತಿ ಹೇಳಿದರು. ಇದು ಕೇವಲ ಕಾಕತಾಳೀಯವಲ್ಲ, ಇದು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿರುವ ವೇಗಕ್ಕೆ ಪುರಾವೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಈ ಸಂಬಂಧ ಎಕ್ಸ್ ಖಾತೆಯ ಸರಣಿ ಪೋಸ್ಟ್‌ಗಳಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
‘‘ಕೇನ್ಸ್ ಸೆಮಿಕಾನ್ ಒಎಸ್‌ಎಟಿ ಸೌಲಭ್ಯವನ್ನು ಗುಜರಾತ್‌ನ ಸನಂದ್‌ನಲ್ಲಿ ಉದ್ಘಾಟಿಸಿರುವುದು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ನಿಜವಾಗಿಯೂ ಹೆಮ್ಮೆಯ ಕ್ಷ ಣವಾಗಿದೆ. ಇದು ಭವಿಷ್ಯದ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳಲ್ಲಿ ನಾಯಕನಾಗಿ ಹೊರಹೊಮ್ಮುವ ಭಾರತದ ಪ್ರಯತ್ನಗಳನ್ನು ಉತ್ತೇಜಿಸುತ್ತದೆ.’’
‘‘ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್‌ಗೆ ಉತ್ತೇಜನ.’’
‘‘ಭಾರತದ ಸೆಮಿಕಂಡಕ್ಟರ್ ಉದ್ಯಮವು ವಿವಿಧ ರಾಜ್ಯಗಳಲ್ಲಿಅಭಿವೃದ್ಧಿ ಹೊಂದುತ್ತಿದೆ, ಅಸಂಖ್ಯಾತ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಪ್ರಯತ್ನಗಳಿಗೆ ಮತ್ತಷ್ಟು ಪ್ರಮಾಣವನ್ನು ಸೇರಿಸಲು ನಾವು ಈಗ ಸೆಮಿಕಂಡಕ್ಟರ್ ಮಿಷನ್ 2.0 ನಲ್ಲಿಕೆಲಸ ಮಾಡುತ್ತಿದ್ದೇವೆ.’’
‘‘ಇದು ಭಾರತದ ತಂತ್ರಜ್ಞಾನ ದಶಕ!
ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ಗಳಲ್ಲಿನ ನಮ್ಮ ಉಪಕ್ರಮಗಳು ಇಡೀ ಗ್ರಹಕ್ಕೆ (ಭೂಮಿಗೆ) ಪ್ರಯೋಜನವನ್ನು ನೀಡಲಿವೆ.’’
*****
(ಪ್ರಕಟಣೆ ಐ.ಡಿ.: 2247435)
ವಿಸಿಟರ್ ಕೌಂಟರ್ : 2