ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಲಭ್ಯತೆ ಮಾರ್ಗಸೂಚಿ ಹೊರಡಿಸಿದ ಸರಕಾರ; ಶ್ರವಣದೋಷ ಮತ್ತು ದೃಷ್ಟಿದೋಷ ಹೊಂದಿರುವ ಪ್ರೇಕ್ಷಕರಿಗೆ ವೈಶಿಷ್ಟ್ಯಗಳ ಕಡ್ಡಾಯ
ಪ್ರಕಟಣಾ ದಿನಾಂಕ:
27 MAR 2026 3:48PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು 2026ರ ಫೆಬ್ರವರಿ 6 ರಂದು ಶ್ರವಣ ಮತ್ತು ದೃಷ್ಟಿದೋಷ ಹೊಂದಿರುವ ವ್ಯಕ್ತಿಗಳಿಗಾಗಿ ಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್ ನ (ಒಟಿಟಿ ಪ್ಲಾಟ್‌ಫಾರ್ಮ್‌ಗಳು) ಪ್ರಸಾರಕರ ವೇದಿಕೆಗಳಲ್ಲಿ ಕಂಟೆಂಟ್ ಗಳ ಲಭ್ಯತೆಗಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮಾರ್ಗಸೂಚಿಗಳು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಈ ಕೆಳಗಿನ ಮಾರ್ಗದಡಿಯಲ್ಲಿ ಸಾರ್ವಜನಿಕರಿಗಾಗಿ ಲಭ್ಯವಿದೆ: https://mib.gov.in → ಮುಖಪುಟ (Home) →ದಾಖಲೆಗಳು (Documents) →ಕಾಯ್ದೆಗಳು, ನೀತಿಗಳು ಮತ್ತು ಮಾರ್ಗಸೂಚಿಗಳು.
ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ಆಡಿಯೊ-ದೃಶ್ಯ ವಿಷಯವು ಶ್ರವಣ ಮತ್ತು ದೃಷ್ಟಿದೋಷ ಹೊಂದಿರುವ ವ್ಯಕ್ತಿಗಳಿಗೆ ಸುಲಭವಾಗಿ ಲಭ್ಯವಾಗುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು ಜಾರಿಯ ವೇಳಾಪಟ್ಟಿಯನ್ನು ಒದಗಿಸುತ್ತದೆ.
ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸದಾಗಿ ಪ್ರಕಟವಾದ ಎಲ್ಲಾ ವಿಷಯಗಳು ನಿಗದಿತ ಜಾರಿ ವೇಳಾಪಟ್ಟಿಯ ಪ್ರಕಾರ ಶ್ರವಣದೋಷವುಳ್ಳವರಿಗೆ (Closed Captioning /Open Captioning / ಭಾರತೀಯ ಸಂಕೇತ ಭಾಷೆ) ಮತ್ತು ದೃಷ್ಟಿದೋಷವುಳ್ಳ ವೀಕ್ಷಕರಿಗೆ (ಆಡಿಯೊ ವಿವರಣೆಗಳು) ಕನಿಷ್ಠ ಒಂದು ಲಭ್ಯತೆಯ ವೈಶಿಷ್ಟ್ಯವನ್ನು ಹೊಂದಿರಬೇಕೆಂದು ಮಾರ್ಗಸೂಚಿಗಳು ಆದೇಶಿಸುತ್ತವೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ರಾಜ್ಯಸಭೆಯಲ್ಲಿ ಶ್ರೀಮತಿ ಮಾಯಾ ನರೋಲಿಯಾ ಅವರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2246133)
ವಿಸಿಟರ್ ಕೌಂಟರ್ : 15