ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮಾರ್ಚ್ 26 ರಿಂದ ರಾಷ್ಟ್ರೀಯ ಗೀತೆ ʻವಂದೇ ಮಾತರಂʼನ ಪೂರ್ಣ ಆವೃತ್ತಿಯನ್ನು ಪ್ರಸಾರ ಮಾಡಲಿರುವ ಆಕಾಶವಾಣಿ
ಸಂಗೀತ ವೈವಿಧ್ಯತೆಯನ್ನು ಪ್ರದರ್ಶಿಸಲು 6 ಚರಣಗಳ ಪೂರ್ಣ "ವಂದೇ ಮಾತರಂ" ಅನ್ನು ಪ್ರಾದೇಶಿಕ ಆವೃತ್ತಿಗಳಲ್ಲಿ ಧ್ವನಿಮುದ್ರಣ ಮಾಡಲಾಗುತ್ತಿದೆ
प्रविष्टि तिथि:
25 MAR 2026 2:02PM by PIB Bengaluru
ಸ್ವಾತಂತ್ರ್ಯಾ ನಂತರ ದೇಶಾದ್ಯಂತ ಆಕಾಶವಾಣಿ ಕೇಂದ್ರಗಳು ತಮ್ಮ ಅಪ್ರತಿಮ ʻಸಿಗ್ನೇಚರ್ ಟ್ಯೂನ್ʼನೊಂದಿಗೆ ತಮ್ಮ ಬೆಳಗಿನ ಪ್ರಸಾರವನ್ನು ಆರಂಭಿಸಿ, ಇದರ ಬೆನ್ನಲ್ಲೇ ರಾಷ್ಟ್ರೀಯ ಗೀತೆ "ವಂದೇ ಮಾತರಂ"ನ (ಅವಧಿ 65 ಸೆಕೆಂಡುಗಳು) ಎರಡು ಚರಣಗಳ ಆವೃತ್ತಿಯನ್ನು ಪ್ರಸಾರ ಮಾಡುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿವೆ.

ಆರು ಚರಣಗಳನ್ನು ಒಳಗೊಂಡಿರುವ ರಾಷ್ಟ್ರೀಯ ಗೀತೆಯ ಬಗ್ಗೆ 2026ರ ಜನವರಿ 28ರ ಗೃಹ ಸಚಿವಾಲಯದ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು, ಆಕಾಶವಾಣಿಯ ಎಲ್ಲಾ ಕೇಂದ್ರಗಳು 2026ರ ಮಾರ್ಚ್ 26ರಿಂದ ಜಾರಿಗೆ ಬರುವಂತೆ ಹಾಡಿನ ಹೊಸ ಆವೃತ್ತಿಯನ್ನು ಪ್ರಸಾರ ಮಾಡಲು ಪ್ರಾರಂಭಿಸಲಿವೆ. ಹೊಸ ಆವೃತ್ತಿಯು 3 ನಿಮಿಷ 10 ಸೆಕೆಂಡುಗಳ ಅವಧಿಯನ್ನು ಹೊಂದಿದೆ.
ಪ್ರಸಾರವಾಗಲಿರುವ ಆರಂಭಿಕ ಆವೃತ್ತಿಯನ್ನು ಖ್ಯಾತ ಹಿಂದಿ ಶಾಸ್ತ್ರೀಯ ಗಾಯಕ ಪಂಡಿತ್ ಚಂದ್ರಶೇಖರ್ ವಾಜೆ ಅವರು ʻರಾಗ್ ದೇಸ್ʼನಲ್ಲಿ ಹಾಡಿದ್ದಾರೆ.
ಪ್ರಾದೇಶಿಕ ವೈವಿಧ್ಯಮಯ ಸಂಗೀತ ವಾದ್ಯಗಳಿಗೆ ಅವಕಾಶ ಕಲ್ಪಿಸಲು ರಾಷ್ಟ್ರಗೀತೆಯ ಹಲವಾರು ಇತರ ಆವೃತ್ತಿಗಳನ್ನು ಸಹ ಧ್ವನಿಮುದ್ರಣ ಮಾಡಲಾಗುತ್ತಿದೆ. ಈ ಆವೃತ್ತಿಗಳನ್ನು ಆಯಾ ರಾಜ್ಯಗಳಲ್ಲಿರುವ ಆಕಾಶವಾಣಿ ಕೇಂದ್ರಗಳು ಅಳವಡಿಸಿಕೊಳ್ಳಲಿವೆ.
*****
(रिलीज़ आईडी: 2244968)
आगंतुक पटल : 75
इस विज्ञप्ति को इन भाषाओं में पढ़ें:
Bengali
,
Assamese
,
English
,
Urdu
,
हिन्दी
,
Marathi
,
Bengali-TR
,
Manipuri
,
Punjabi
,
Gujarati
,
Telugu
,
Malayalam