ಪ್ರಧಾನ ಮಂತ್ರಿಯವರ ಕಛೇರಿ
ಭಾರತದಲ್ಲಿ ಕ್ಷಯರೋಗ (TB) ನಿರ್ಮೂಲನೆಗೆ ಕೈಗೊಂಡಿರುವ ಪ್ರಯತ್ನಗಳ ಕುರಿತು ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
24 MAR 2026 1:36PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಬರೆದಿರುವ ಒಂದು ಲೇಖನವನ್ನು ಹಂಚಿಕೊಂಡಿದ್ದಾರೆ.
ಈ ಲೇಖನವು ಜನರ ಸಕ್ರಿಯ ಭಾಗವಹಿಸುವಿಕೆಯನ್ನು ಆಧಾರವಾಗಿಸಿಕೊಂಡು ದೇಶವು ಕ್ಷಯರೋಗ ನಿರ್ಮೂಲನೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸುತ್ತದೆ. ಕ್ಷಯರೋಗ ನಿರ್ಮೂಲನೆಗೆ ಭಾರತವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಿರಂತರ ಹೂಡಿಕೆ ಮಾಡಿದ್ದು, ಜನ ಸಾಮೂಹಿಕವಾಗಿ ಪಾಲ್ಗೊಳ್ಳುವುದನ್ನು ಬಲಪಡಿಸಿದೆ ಹಾಗೂ ‘ಮೇಕ್ ಇನ್ ಇಂಡಿಯಾ’ ಟಿಬಿ ಪರೀಕ್ಷಾ ವಿಧಾನಗಳ ಸರಪಳಿಯನ್ನು ನಿರ್ಮಿಸಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.
ಪ್ರಧಾನಮಂತ್ರಿ ಅವರ ಕಚೇರಿಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆಯಲಾಗಿದೆ;
“ಕೇಂದ್ರ ಸಚಿವರಾದ ಶ್ರೀ @JPNadda ಅವರು ಜನ ಭಾಗಿದಾರಿತ್ವವನ್ನು ಆಧಾರವಾಗಿಸಿಕೊಂಡು ದೇಶವು ಕ್ಷಯರೋಗ ನಿರ್ಮೂಲನೆಯಲ್ಲಿ ಕೈಗೊಂಡಿರುವ ಪ್ರಯಾಣದ ಬಗ್ಗೆ ಉಲ್ಲೇಖಿಸಿದ್ದಾರೆ.
ಅವರು ಭಾರತವು ಸಂಶೋಧನೆ ಮತ್ತು ಅಭಿವೃದ್ಧಿಗೆ ನಿರಂತರ ಹೂಡಿಕೆ ಮಾಡಿದ್ದು, ಭಾಗೀದಾರಿಕೆಯನ್ನು ಬಲಪಡಿಸಿದೆ. ‘ಮೇಕ್ ಇನ್ ಇಂಡಿಯಾ’ ಟಿಬಿ ಪರೀಕ್ಷಾ ವಿಧಾನಗಳ ಸರಪಳಿಯನ್ನು ನಿರ್ಮಿಸಿದೆ ಎಂದು ಉಲ್ಲೇಖಿಸಲಾಗಿದೆ."
*****
(ಪ್ರಕಟಣೆ ಐ.ಡಿ.: 2244535)
ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Bengali-TR
,
Punjabi
,
Gujarati
,
Telugu