ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ವೀರಾಂಗನಾ ರಾಣಿ ಅವಂತಿಬಾಯಿ ಲೋಧಿ ಅವರ ಹುತಾತ್ಮ ದಿನದಂದು ಅವರಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದರು


ವೀರಾಂಗನಾ ರಾಣಿ ಅವಂತಿಬಾಯಿ ಲೋಧಿ ಅವರ ಜೀವನವು ಧೈರ್ಯ, ತ್ಯಾಗ ಮತ್ತು ದೇಶಭಕ್ತಿಗೆ ಅನುಪಮ ಉದಾಹರಣೆಯಾಗಿದೆ

1857 ರ ದಂಗೆಯ ಸಮಯದಲ್ಲಿ, ಅವರು ಬ್ರಿಟಿಷರ ವಿರುದ್ಧ ಶೌರ್ಯದಿಂದ ಹೋರಾಡಿದರು ಮತ್ತು ಶರಣಾಗತಿಗಿಂತ ಹುತಾತ್ಮತೆಯನ್ನು ಆರಿಸಿಕೊಂಡರು

 

ಪ್ರಕಟಣಾ ದಿನಾಂಕ: 20 MAR 2026 11:39AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವೀರಾಂಗನಾ ರಾಣಿ ಅವಂತಿಬಾಯಿ ಲೋಧಿ ಅವರ ಹುತಾತ್ಮ ದಿನದಂದು ಅವರಿಗೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದರು.

“ಎಕ್ಸ್” ತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಈ ರೀತಿ ತಿಳಿಸಿದ್ದಾರೆ, "ವೀರಾಂಗನಾ ರಾಣಿ ಅವಂತಿಬಾಯಿ ಲೋಧಿ ಜಿ ಅವರ ಜೀವನವು ಧೈರ್ಯ, ತ್ಯಾಗ ಮತ್ತು ದೇಶಭಕ್ತಿಗೆ ಅಪ್ರತಿಮ ಉದಾಹರಣೆಯಾಗಿದೆ. 1857ರ ದಂಗೆಯ ಸಂದರ್ಭದಲ್ಲಿ, ಅವರು ಬ್ರಿಟಿಷರ ವಿರುದ್ಧ ದೃಢನಿಶ್ಚಯದಿಂದ ಹೋರಾಡಿದರು ಮತ್ತು ಶರಣಾಗುವ ಬದಲು ಹುತಾತ್ಮತೆಯನ್ನು ಆರಿಸಿಕೊಂಡರು. ಅವರ ತ್ಯಾಗವು ರಾಷ್ಟ್ರದ ಕಡೆಗೆ ಸಮರ್ಪಣೆ ಮತ್ತು ಸ್ವಾಭಿಮಾನದ ಶಾಶ್ವತ ಸಂದೇಶವನ್ನು ನೀಡುತ್ತದೆ. ಅವರ ಹುತಾತ್ಮ ದಿನದಂದು ಅವರಿಗೆ ವಿನಮ್ರ ಗೌರವ ನಮನಗಳು."

https://x.com/AmitShah/status/2034818063829541289?s=20


*****


(ಪ್ರಕಟಣೆ ಐ.ಡಿ.: 2242851) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Assamese , Punjabi , Gujarati , Telugu