ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪ್ರಸಾರ ಭಾರತಿಯ PB-SHABD ಲಾಂಛನ-ಮುಕ್ತ ಸುದ್ದಿ ವಿಷಯವನ್ನು ಒದಗಿಸುತ್ತದೆ; ಮಾರ್ಚ್ 2027 ರವರೆಗೆ ಉಚಿತ ಅವಕಾಶ


ದೇಶದಾದ್ಯಂತ 500+ ವರದಿಗಾರರ ನೆಟ್ವರ್ಕ್ ಮತ್ತು 24×7 ಸಮಯ ಕಾರ್ಯನಿರ್ವಹಿಸುವ 60 ಎಡಿಟ್ ಡೆಸ್ಕ್ ಗಳ ಮೂಲಕ ವಿವಿಧ ಸ್ವರೂಪಗಳಲ್ಲಿ 1000 ಕ್ಕೂ ಹೆಚ್ಚು ದೈನಂದಿನ ಸುದ್ದಿಗಳನ್ನು ಪ್ರಸಾರ ಭಾರತಿಯ PB-SHABD ನೀಡುತ್ತದೆ

ಪ್ರಕಟಣಾ ದಿನಾಂಕ: 10 MAR 2026 5:05PM by PIB Bengaluru

ಮಾಧ್ಯಮ ಸಂಸ್ಥೆಗಳಿಗೆ ವೀಡಿಯೊ, ಆಡಿಯೋ, ಪಠ್ಯ ಮತ್ತು ಫೋಟೋಗಳು ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ಲಾಂಛನ ಮುಕ್ತ, ದೈನಂದಿನ ಸುದ್ದಿಗಳಿಗೆ ಪ್ರವೇಶವನ್ನು ಒದಗಿಸಲು ಹಂಚಿಕೆಯ ವಿತರಣೆ(ಫೀಡ್) ಸೇವೆಯಾಗಿ ಪ್ರಸಾರ ಭಾರತಿ-ಹಂಚಿಕೊಂಡ ಆಡಿಯೋ-ವಿಷುಯಲ್ ಗಳು (ಪಿಬಿ-ಶಬ್ದ) ಅನ್ನು ಮಾರ್ಚ್ 2024 ರಲ್ಲಿ ಪ್ರಾರಂಭಿಸಲಾಯಿತು. ಪಿಬಿ-ಶಬ್ದಗೆ ಉಚಿತ ಪ್ರವೇಶವು ಮಾರ್ಚ್ 2027 ರವರೆಗೆ ಉಚಿತವಾಗಿದೆ ಎಂದು ಪ್ರಸಾರ ಭಾರತಿ ತಿಳಿಸಿದೆ.

ದೇಶದಾದ್ಯಂತ 1500 ಕ್ಕೂ ಹೆಚ್ಚು ವರದಿಗಾರರು, ವರದಿಗಾರರು ಮತ್ತು ಸ್ಟ್ರಿಂಗರ್ ಗಳ ಬಲಿಷ್ಠ ಜಾಲವನ್ನು ಬಳಸಿಕೊಂಡು, 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ 60 ಮೀಸಲಾದ ಎಡಿಟ್ ಡೆಸ್ಕ್ಗಳ ಬೆಂಬಲದೊಂದಿಗೆ, ಪಿಬಿ-ಶಬ್ದ ಭಾರತದ ಪ್ರತಿಯೊಂದು ಮೂಲೆಯಿಂದ ಇತ್ತೀಚಿನ ಸುದ್ದಿಗಳನ್ನು ನೀಡುತ್ತದೆ. ಕೃಷಿ, ತಂತ್ರಜ್ಞಾನ, ವಿದೇಶಾಂಗ ವ್ಯವಹಾರಗಳು ಮತ್ತು ರಾಜಕೀಯ ಬೆಳವಣಿಗೆಗಳಂತಹ ವಿವಿಧ ಸುದ್ದಿ ವಿಭಾಗಗಳನ್ನು ಒಳಗೊಂಡ ಪ್ರತಿದಿನ 1000 ಕಥೆಗಳನ್ನು ಪ್ರಾದೇಶಿಕ ಸುದ್ದಿ ಘಟಕಗಳು (ಆರ್.ಎನ್.ಯು.) ಮತ್ತು ಪ್ರಧಾನ ಕಚೇರಿಗಳಿಂದ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಪ್ರತಿದಿನ ಅಪ್ಲೋಡ್ ಮಾಡಲಾಗುತ್ತದೆ. ಪಿಬಿ-ಶಬ್ದ ಮೂಲಕ ಒದಗಿಸಲಾದ ವಿಷಯವು ಲಾಂಛನ-ಮುಕ್ತವಾಗಿದೆ ಮತ್ತು ಈ ವೇದಿಕೆಯಿಂದ ವಿಷಯವನ್ನು ಬಳಸುವುದಕ್ಕೆ ಯಾವುದೇ ಹಣಕಾಸು(ಕ್ರೆಡಿಟ್) ಅಗತ್ಯವಿಲ್ಲ.

ಪಿಬಿ-ಶಬ್ದ ಫೀಡ್ ವೈಶಿಷ್ಟ್ಯವನ್ನು ಸಹ ನೀಡುತ್ತದೆ, ರಾಷ್ಟ್ರೀಯ ಪ್ರಾಮುಖ್ಯತೆಯ ಘಟನೆಗಳು, ಹೂಡಿಕೆ ಸಮಾರಂಭಗಳು ಮತ್ತು ವಿವಿಧ ಪತ್ರಿಕಾಗೋಷ್ಠಿಗಳನ್ನು ಒಳಗೊಂಡಂತೆ ಲೈವ್ ಈವೆಂಟ್ಗಳ ವಿಶೇಷ ಪ್ರಸಾರವನ್ನು ನೀಡುತ್ತದೆ, ಎಲ್ಲವೂ ಲಾಂಛನ ಇಲ್ಲದೆ. ಪ್ರವೇಶವನ್ನು ಮತ್ತಷ್ಟು ಹೆಚ್ಚಿಸಲು, ಮಾಧ್ಯಮ ಭಂಡಾರವು ಆರ್ಕೈವಲ್ ಲೈಬ್ರರಿಯಾಗಿ ಲಭ್ಯವಿದೆ, ಇದು ಚಂದಾದಾರರಿಗೆ ವಿಶೇಷ ಕ್ಯುರೇಟೆಡ್ ಪ್ಯಾಕೇಜ್ಗಳ ಜೊತೆಗೆ ಆರ್ಕೈವಲ್ ದೃಶ್ಯಗಳನ್ನು ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ವಿಶೇಷ ಪ್ಯಾಕೇಜ್ಗಳು, ಸಂದರ್ಶನಗಳು, ಭಾರತದಾದ್ಯಂತದ ದೈನಂದಿನ ಹವಾಮಾನ ನವೀಕರಣಗಳು ಮತ್ತು ಸಂಪಾದಕೀಯ ತುಣುಕುಗಳನ್ನು ಪಿಬಿ-ಶಬ್ದ ನಲ್ಲಿ ನಿಯಮಿತವಾಗಿ ನವೀಕರಿಸಲಾಗುತ್ತದೆ, ವಿಷಯವನ್ನು ಮಾಧ್ಯಮಗಳು ಸುಲಭವಾಗಿ ಬಳಸಬಹುದೆಂದು ಖಚಿತಪಡಿಸುತ್ತದೆ, ಇದರಿಂದಾಗಿ ಸಮಯ ಉಳಿತಾಯವಾಗುತ್ತದೆ.  shabd.prasarbharati.org. ಗೆ ಭೇಟಿ ನೀಡುವ ಮೂಲಕ ಮಾಧ್ಯಮ ಸಂಸ್ಥೆಗಳು ಪಿಬಿ-ಶಬ್ದವನ್ನು ಉಚಿತವಾಗಿ ಖಾತೆ ತೆರೆಯಬಹುದು (ಸೈನ್ ಅಪ್ ಮಾಡಬಹುದು) ಹಾಗು ಮಾಹಿತಿಗಳನ್ನು ಉಪಯೋಗಿಸಬಹುದು.

Follow PB-SHABD on InstagramX, and YouTube for the latest updates.

 

*****


(ಪ್ರಕಟಣೆ ಐ.ಡಿ.: 2237899) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Telugu , Malayalam