ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತೀಯ ಚಲನಚಿತ್ರದ ಜಾಗತಿಕ ಮನ್ನಣೆಗೆ ಭಾರತ ಸರ್ಕಾರ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಸಂಭ್ರಮ


ಬಿ ಎ ಎಫ್‌ ಟಿ ಎ 2026ರಲ್ಲಿ ಲಕ್ಷ್ಮಿಪ್ರಿಯಾ ದೇವಿಯವರ 'ಬೂಂಗ್' ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಮತ್ತು ಕೌಟುಂಬಿಕ ಚಿತ್ರ ಪ್ರಶಸ್ತಿ 

ಪ್ರಕಟಣಾ ದಿನಾಂಕ: 25 FEB 2026 8:45PM by PIB Bengaluru

ಚಲನಚಿತ್ರ ಮತ್ತು ದೂರದರ್ಶನ ಕಲೆಯ ಬ್ರಿಟಿಷ್ ಅಕಾಡೆಮಿ (ಬಿ ಎ ಎಫ್‌ ಟಿ ಎ), 2026ರ ಚಲನಚಿತ್ರ ಪ್ರಶಸ್ತಿಗಳ ಪೈಕಿ ಅತ್ಯುತ್ತಮ ಮಕ್ಕಳು ಮತ್ತು ಕೌಟುಂಬಿಕ ಚಿತ್ರ ಪ್ರಶಸ್ತಿಯು ಲಕ್ಷ್ಮಿಪ್ರಿಯಾ ದೇವಿ ಅವರ ಬೂಂಗ್ ಚಿತ್ರಕ್ಕೆ ಸಂದಿದೆ. ಚಲನಚಿತ್ರ ನಿರ್ದೇಶಕರಾದ ಲಕ್ಷ್ಮಿಪ್ರಿಯಾ ದೇವಿ ಮತ್ತು ಬೂಂಗ್ ಚಿತ್ರದ ಸಂಪೂರ್ಣ ತಂಡವನ್ನು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಅಭಿನಂದಿಸಿದೆ. ಈ ಹೆಗ್ಗುರುತಿನ ಸಾಧನೆಯು ಭಾರತೀಯ ಚಲನಚಿತ್ರ ರಂಗಕ್ಕೆ ಹೆಮ್ಮೆಯ ಕ್ಷಣವಾಗಿದೆ ಹಾಗೂ ಭಾರತದ ವೈವಿಧ್ಯಮಯ ಮತ್ತು ಅರ್ಥಪೂರ್ಣ ಕಥಾ ನಿರೂಪಣೆ ಪರಂಪರೆಗೆ ಹೆಚ್ಚುತ್ತಿರುವ ಜಾಗತಿಕ ಮೆಚ್ಚುಗೆಯನ್ನೂ ತೋರಿಸಿದೆ.

ಈ ಚಿತ್ರದ ಪಯಣಕ್ಕೆ ಭಾರತದ ಚಲನಚಿತ್ರ ಅಭಿವೃದ್ಧಿ ಮತ್ತು ಉತ್ಸವ ಪರಿಸರ ವ್ಯವಸ್ಥೆಯು ಬೆಂಬಲ ನೀಡಿದೆ. ಬೂಂಗ್ ಚಿತ್ರವನ್ನು ಭರವಸೆಯ ಚಲನಚಿತ್ರ ನಿರ್ಮಾತೃಗಳನ್ನು ಪೋಷಿಸಲು ಮತ್ತು ಜಾಗತಿಕ ಉದ್ಯಮ ತೊಡಗಿಸಿಕೊಳ್ಳುವಿಕೆಯನ್ನು ಸಾಧ್ಯವಾಗಿಸಲು ವಿನ್ಯಾಸಗೊಳಿಸಲಾಗಿರುವ ಉಪಕ್ರಮವಾದ ವರ್ಕ್ ಇನ್ ಪ್ರೋಗ್ರೆಸ್ ಲ್ಯಾಬ್ ಮತ್ತು ಫಿಲ್ಮ್ ಬಜಾರ್ ಶಿಫಾರಸುಗಳ ಅಡಿಯಲ್ಲಿ 2023ರಲ್ಲಿ ಫಿಲ್ಮ್ ಬಜಾರ್ ನಲ್ಲಿ ರಚಿಸಿ, ಪ್ರಸ್ತುತಪಡಿಸಲಾಯಿತು. ಈ ಚಿತ್ರವನ್ನು ನಂತರ 2024 ರಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು, ಅಲ್ಲಿ ಈ ಚಿತ್ರ ಅತ್ಯುತ್ತಮ ಚೊಚ್ಚಲ ನಿರ್ದೇಶಕ ವಿಭಾಗದಲ್ಲಿ ಆಯ್ಕೆಯಾಗಿದ್ದು, ಇದು ಅದರ ವಿಮರ್ಶಾತ್ಮಕ ಮೆಚ್ಚುಗೆಯನ್ನು ಮತ್ತಷ್ಟು ದೃಢಪಡಿಸಿತು.

ಭಾರತ ಸರ್ಕಾರ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು ಚಲನಚಿತ್ರ ನಿರ್ಮಾತೃಗಳನ್ನು ಸಬಲಗೊಳಿಸುವ, ಸೃಜನಶೀಲ ಶ್ರೇಷ್ಠತೆಯನ್ನು ಪೋಷಿಸುವ ಮತ್ತು ಭಾರತೀಯ ಸಿನಿಮಾ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ತಲುಪಲು ಮಾರ್ಗಗಳನ್ನು ಸೃಷ್ಟಿಸುವ ಫಿಲ್ಮ್ ಬಜಾರ್ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಂತಹ ವೇದಿಕೆಗಳನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದೆ.

 

*****


(ಪ್ರಕಟಣೆ ಐ.ಡಿ.: 2232909) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Punjabi , Gujarati , Tamil , Telugu , Malayalam