ಪ್ರಧಾನ ಮಂತ್ರಿಯವರ ಕಛೇರಿ
ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರ ಯಶಸ್ವಿ ಸಮಾರೋಪದ ಕುರಿತ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
24 FEB 2026 7:49PM by PIB Bengaluru
ಪ್ರಧಾನಮಂತ್ರಿ ಅವರು ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಯಶಸ್ವಿ ಸಮಾರೋಪದ ಕುರಿತು ಕೇಂದ್ರ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ಅದ್ಭುತ ಲೇಖನವನ್ನು ಹಂಚಿಕೊಂಡಿದ್ದಾರೆ. ತಮ್ಮ ಲೇಖನದಲ್ಲಿ ಕೇಂದ್ರ ಸಚಿವರು, ಭಾರತವು ತನ್ನ ನಾಗರಿಕತೆಯ ಉತ್ಸಾಹದಿಂದ ಸ್ಫೂರ್ತಿ ಪಡೆದಿದೆ ಎಂದು ಉಲ್ಲೇಖಿಸಿದ್ದಾರೆ.
ಕೇಂದ್ರ ಸಚಿವರು ತಮ್ಮ ಲೇಖನದಲ್ಲಿ, ಭಾರತವು ತನ್ನದೇ ಆದ ಸಂಘಟನಾ ಕಲ್ಪನೆ, ದತ್ತಾಂಶದ ಮೇಲೆ ಸಾರ್ವಭೌಮತ್ವ, ವಿನ್ಯಾಸದ ಮೂಲಕ ಸೇರ್ಪಡೆ ಮತ್ತು ಪೂರ್ವನಿಯೋಜಿತ ಹೊಣೆಗಾರಿಕೆಯನ್ನು ಮುಂದಿಡುತ್ತಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ತನ್ನ ಸಾಮಾಜಿಕ ಜಾಲತಾಣದ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದೆ.
“ಈ ಅದ್ಭುತ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ @HardeepSPuri ಅವರು ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಯಶಸ್ವಿ ಸಮಾರೋಪದ ಬಗ್ಗೆ ಬರೆದಿದ್ದಾರೆ. ಭಾರತವು ತನ್ನ ನಾಗರಿಕತೆಯ ಉತ್ಸಾಹದೊಂದಿಗೆ ಸ್ಫೂರ್ತಿ ಪಡೆದಿದೆ ಎಂದು ಉಲ್ಲೇಖಿಸಿದ್ದಾರೆ. ಭಾರತವು ತನ್ನದೇ ಆದ ಸಂಘಟನಾ ಕಲ್ಪನೆಯನ್ನು, ದತ್ತಾಂಶದ ಮೇಲೆ ಸಾರ್ವಭೌಮತ್ವ, ವಿನ್ಯಾಸದ ಮೂಲಕ ಸೇರ್ಪಡೆ ಮತ್ತು ಪೂರ್ವನಿಯೋಜಿತ ಹೊಣೆಗಾರಿಕೆ ಮುಂದಿಡುತ್ತಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ."
******
(ಪ್ರಕಟಣೆ ಐ.ಡಿ.: 2232402)
ವಿಸಿಟರ್ ಕೌಂಟರ್ : 5