ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಾದ್ಯಂತ 8 ಜಿಲ್ಲೆಗಳನ್ನು ಒಳಗೊಂಡ ಮೂರು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಸಂಪುಟ ಅನುಮೋದನೆ; ಇದರಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲ ಸುಮಾರು 307 ಕಿ.ಮೀ.ಗಳಷ್ಟು ವೃದ್ಧಿ
ಯೋಜನೆಗಳ ಒಟ್ಟು ಅಂದಾಜು ವೆಚ್ಚ 9,072 ಕೋಟಿ ರೂ.ಗಳಾಗಿದ್ದು, 2030-31 ರ ವೇಳೆಗೆ ಪೂರ್ಣ
ಪ್ರಕಟಣಾ ದಿನಾಂಕ:
24 FEB 2026 3:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಇಂದು ರೈಲ್ವೆ ಸಚಿವಾಲಯದ 3 (ಮೂರು) ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಅವುಗಳ ಒಟ್ಟು ವೆಚ್ಚ 9,072 ಕೋಟಿ ರೂಪಾಯಿ (ಅಂದಾಜು). ಅದರಲ್ಲಿ ಈ ಯೋಜನೆಗಳು ಸೇರಿವೆ
ಎ. ಗೊಂಡಿಯಾ-ಜಬಲ್ ಪುರ್ ಜೋಡಿಪಥ
ಬಿ. ಪುನರಖ್—ಕಿಯೂಲ್ 3 ಮತ್ತು 4ನೇ ಮಾರ್ಗ
ಸಿ.ಗಮ್ಹರಿಯಾ-ಚಾಂಡಿಲ್ 3ನೇ ಮತ್ತು 4ನೇ ಮಾರ್ಗ
ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಾದ್ಯಂತ 8 ಜಿಲ್ಲೆಗಳನ್ನು ಒಳಗೊಂಡ 3 (ಮೂರು) ಯೋಜನೆಗಳು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 307 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ.
ಪ್ರಸ್ತಾವಿತ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯು ಸುಮಾರು 98 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸುಮಾರು 5,407 ಹಳ್ಳಿಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ.
ಮಾರ್ಗದ ಸಾಮರ್ಥ್ಯ ಹೆಚ್ಚಳದಿಂದ ಸಾರಿಗೆ ಸಂಪರ್ಕ ಗಣನೀಯವಾಗಿ ವೃದ್ಧಿಯಾಗುತ್ತದೆ, ಅದರ ಪರಿಣಾಮವಾಗಿ ಭಾರತೀಯ ರೈಲ್ವೆಗಳಿಗೆ ಸುಧಾರಿತ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಉಂಟಾಗುತ್ತದೆ. ಈ ಮಲ್ಟಿ-ಟ್ರ್ಯಾಕಿಂಗ್ ಪ್ರಸ್ತಾಪಗಳು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮತ್ತು ದಟ್ಟಣೆಯನ್ನು ನಿವಾರಿಸಲು ಸಜ್ಜಾಗಿವೆ. ಈ ಯೋಜನೆಗಳು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತದ ದೂರದೃಷ್ಟಿಗೆ ಅನುಗುಣವಾಗಿದ್ದು, ಇದು ಈ ಪ್ರದೇಶದ ಜನರನ್ನು ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ”ಆತ್ಮನಿರ್ಭರ’’ವನ್ನಾಗಿ ಮಾಡುತ್ತದೆ, ಇದು ಅವರ ಉದ್ಯೋಗ/ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
ಈ ಯೋಜನೆಯನ್ನು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನಲ್ಲಿ ಯೋಜನೆಗಳಡಿ ಸಂಯೋಜಿತ ಯೋಜನೆ ಮತ್ತು ಪಾಲುದಾರರ ಸಮಾಲೋಚನೆಗಳ ಮೂಲಕ ಬಹು-ಮಾದರಿ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ದಕ್ಷತೆ ಹೆಚ್ಚಳಕ್ಕೆ ಹೆಚ್ಚಿನ ಗಮನಹರಿಸಿ ರೂಪಿಸಲಾಗಿದೆ. ಈ ಯೋಜನೆಗಳು ಜನರು, ಸರಕು ಮತ್ತು ಸೇವೆಗಳ ಸಂಚಾರಕ್ಕೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ.
ಉದ್ದೇಶಿತ ಸಾಮರ್ಥ್ಯ ಹೆಚ್ಚಳವು ದೇಶಾದ್ಯಂತದ ಹಲವು ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದದೆ, ಅವುಗಳೆಂದರೆ ಕಚ್ನಾರ್ ಶಿವ ದೇವಾಲಯ (ಜಬಲ್ ಪುರ), ಕನ್ಹಾ ರಾಷ್ಟ್ರೀಯ ಉದ್ಯಾನವನ (ಬಾಲಘಾಟ್), ಗಂಗುಲ್ಪಾರಾ ಅಣೆಕಟ್ಟು ಮತ್ತು ಜಲಪಾತ, ಪೆಂಚ್ ರಾಷ್ಟ್ರೀಯ ಉದ್ಯಾನವನ, ಧುಂಧರ್ ಜಲಪಾತ, ಬರ್ಗಿ ಅಣೆಕಟ್ಟು, ಗೋಮ್ಜಿ-ಸೋಮ್ಜಿ ದೇವಾಲಯ, ಚಾಂಡಿಲ್ ಅಣೆಕಟ್ಟು, ದಾಲ್ಮಾ ಬೆಟ್ಟದ ತುದಿ, ಹೆಸಕೋಚಾ ಜಲಪಾತ, ರೈಜಮಾ ಘಾಟಿ, ದಾಲ್ಮಾ ವನ್ಯಜೀವಿ ಅಭಯಾರಣ್ಯ ಇತ್ಯಾದಿ.
ಈ ಯೋಜನೆಗಳು ಕಲ್ಲಿದ್ದಲು, ಉಕ್ಕು, ಕಬ್ಬಿಣದ ಅದಿರು, ಸಿಮೆಂಟ್, ಬ್ಯಾಲೆಸ್ಟ್ ಮತ್ತು ಸ್ಟೋನ್ ಚಿಪ್ಸ್, ಹಾರುಬೂದಿ, ರಸಗೊಬ್ಬರಗಳು, ಸುಣ್ಣದ ಕಲ್ಲು, ಮ್ಯಾಂಗನೀಸ್, ಡಾಲಮೈಟ್, ಆಹಾರ ಧಾನ್ಯಗಳು, ಪಿಒಎಲ್ ಇತ್ಯಾದಿ ಸರಕುಗಳ ಸಾಗಣೆಗೆ ಅಗತ್ಯವಾದ ಮಾರ್ಗಗಳಾಗಿವೆ. ಸಾಮರ್ಥ್ಯ ವರ್ಧನೆಯ ಕಾರ್ಯಗಳು 52 ಎಂಟಿಪಿಎ MTPA (ವಾರ್ಷಿಕ ಮಿಲಿಯನ್ ಟನ್) ಗಳಷ್ಟು ಹೆಚ್ಚುವರಿ ಸರಕು ಸಾಗಣೆಗೆ ಕಾರಣವಾಗುತ್ತವೆ. ರೈಲ್ವೆಗಳು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿರುವುದರಿಂದ ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಸರಕು ಸಾಗಾಣೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲು, ತೈಲ ಆಮದು (6 ಕೋಟಿ ಲೀಟರ್) ಕಡಿಮೆ ಮಾಡಲು ಮತ್ತು CO2 ಹೊರಸೂಸುವಿಕೆ ತಗ್ಗಿಸಲು (30 ಕೋಟಿ ಕೆಜಿ) ಸಹಾಯ ಮಾಡುತ್ತದೆ, ಇದು ಒಂದು ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿರುತ್ತದೆ.
*****
(ಪ್ರಕಟಣೆ ಐ.ಡಿ.: 2232208)
ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam