ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ರಾಷ್ಟ್ರಪತಿಯವರು ಆಯೋಜಿಸಿದ್ದ ರಾಜಾಜಿ ಉತ್ಸವದಲ್ಲಿ ಶ್ರೀ ಚಕ್ರವರ್ತಿ ರಾಜಗೋಪಾಲಾಚಾರಿ ಅವರನ್ನು ಗೌರವಿಸಿ ಸನ್ಮಾನಿಸಿದ್ದು ಮಹತ್ಕಾರ್ಯವಾಗಿದೆ, ಇದು ನಮ್ಮ ದೇಶದ ಹಣೆಬರಹವನ್ನು ರೂಪಿಸಿದವರನ್ನು ಗೌರವಿಸುವ ಮತ್ತು ವಸಾಹತುಶಾಹಿ ಮನಸ್ಥಿತಿಯ ಅವಶೇಷಗಳನ್ನು ಅಳಿಸುವ ಭಾರತದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ" ಎಂದು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ

ಪ್ರಕಟಣಾ ದಿನಾಂಕ: 23 FEB 2026 5:12PM by PIB Bengaluru

ರಾಷ್ಟ್ರಪತಿ ಭವನದ ಅಶೋಕ ಮಂಟಪದ ಬಳಿಯಿರುವ ವೈಭವೋಪೇತ ತೆರೆದ ಮೆಟ್ಟಿಲು(ಗ್ರ್ಯಾಂಡ್ ಓಪನ್ ಸ್ಟೇರ್ಕೇಸ್)ಗಳಲ್ಲಿ ಸ್ಥಾಪಿಸಲಾದ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಅನಾವರಣಗೊಳಿಸಿದರು.

"ಇದು ರಾಷ್ಟ್ರದ ಹಣೆಬರಹವನ್ನು ರೂಪಿಸಿದವರನ್ನು ಗೌರವಿಸುವ ಮತ್ತು ವಸಾಹತುಶಾಹಿ ಮನಸ್ಥಿತಿಯ ಅವಶೇಷಗಳನ್ನು ಅಳಿಸುವ ಭಾರತದ ಸಂಕಲ್ಪವನ್ನು ಪ್ರತಿಬಿಂಬಿಸುವ ಶ್ಲಾಘನೀಯ ಪ್ರಯತ್ನವಾಗಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. "ರಾಜಾಜಿ ಒಬ್ಬ ಅತ್ಯುನ್ನತ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಮತ್ತು ಆಡಳಿತಗಾರರಾಗಿದ್ದರು, ಅವರ ಜೀವನವು ಸಮಗ್ರತೆ, ಬುದ್ಧಿಶಕ್ತಿ ಮತ್ತು ರಾಷ್ಟ್ರಕ್ಕೆ ಅಚಲ ಬದ್ಧತೆಯನ್ನು ಸಾಕಾರಗೊಳಿಸಿತು" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ 'ರಾಜಾಜಿ ಉತ್ಸವ'ದಲ್ಲಿ ಭಾರತದ ರಾಷ್ಟ್ರಪತಿಯವರು ಭಾಗವಹಿಸಿದ್ದರು. 'ರಾಜಾಜಿ ಉತ್ಸವ'ದ ಭಾಗವಾಗಿ, ಫೆಬ್ರವರಿ 24 ರಿಂದ ಮಾರ್ಚ್ 1, 2026 ರವರೆಗೆ ರಾಷ್ಟ್ರಪತಿ ಭವನದಲ್ಲಿ ರಾಜಾಜಿಯವರ ಜೀವನ ಮತ್ತು ಕೊಡುಗೆ - ಕಾರ್ಯಕ್ರಮಗಳ ಕುರಿತಾದ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ.

'ರಾಜಾಜಿ ಉತ್ಸವ'ವು ರಾಜಾಜಿಯವರು ರಾಷ್ಟ್ರಕ್ಕೆ ನೀಡಿದ ಶ್ರೀಮಂತ ಕೊಡುಗೆಗಳ ವಿವಿಧ ಅಂಶಗಳನ್ನು ಹೊರತರುವ ಮತ್ತು ಪ್ರಕಾಶಿಸುವ ಅದ್ಭುತ ಉಪಕ್ರಮವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು ಮತ್ತು ಪ್ರದರ್ಶನಕ್ಕೆ ಭೇಟಿ ನೀಡಿ ಅವರ ಜೀವನ ಮತ್ತು ಆದರ್ಶಗಳಿಂದ ಸ್ಫೂರ್ತಿ ಪಡೆಯುವಂತೆ ಜನರನ್ನು ಪ್ರಧಾನಮಂತ್ರಿ ಅವರು ಒತ್ತಾಯಿಸಿದರು.

ಮೇಲೆ ತಿಳಿಸಲಾದ ಉಪಕ್ರಮಗಳ ಕುರಿತು ಭಾರತದ ರಾಷ್ಟ್ರಪತಿಯವರ ಎಕ್ಸ್ ತಾಣದ ಸಂದೇಶಕ್ಕೆ  ಪ್ರತಿಕ್ರಿಯಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಬರೆದಿದ್ದಾರೆ.

“ನಮ್ಮ ದೇಶದ ಹಣೆಬರಹವನ್ನು ರೂಪಿಸಿದವರನ್ನು ಗೌರವಿಸುವ ಮತ್ತು ವಸಾಹತುಶಾಹಿ ಮನಸ್ಥಿತಿಯ ಅವಶೇಷಗಳನ್ನು ತೆಗೆದುಹಾಕುವ ಭಾರತದ ಸಂಕಲ್ಪವನ್ನು ಪ್ರತಿಬಿಂಬಿಸುವ ಶ್ಲಾಘನೀಯ ಪ್ರಯತ್ನವಾಗಿದೆ.

ರಾಜಾಜಿ ಒಬ್ಬ ಅತ್ಯುನ್ನತ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಮತ್ತು ಆಡಳಿತಗಾರ. ಅವರ ಜೀವನವು ಸಮಗ್ರತೆ, ಬುದ್ಧಿಶಕ್ತಿ ಮತ್ತು ರಾಷ್ಟ್ರಕ್ಕೆ ಅಚಲ ಬದ್ಧತೆಯನ್ನು ಒಳಗೊಂಡಿದೆ.”

ರಾಜಾಜಿ ಉತ್ಸವವು ಒಂದು ಅದ್ಭುತ ಉಪಕ್ರಮವಾಗಿದ್ದು, ಇದು ನಮ್ಮ ರಾಷ್ಟ್ರಕ್ಕೆ ರಾಜಾಜಿಯವರು ನೀಡಿದ ಶ್ರೀಮಂತ ಕೊಡುಗೆಯ ವಿವಿಧ ಅಂಶಗಳನ್ನು ಹೊರತರುತ್ತದೆ. ನೀವೆಲ್ಲರೂ ಇಲ್ಲಿಗೆ ಭೇಟಿ ನೀಡಿ ಇದರಿಂದ ಸ್ಫೂರ್ತಿ ಪಡೆಯಬೇಕೆಂದು ನಾನು  ಒತ್ತಾಯಿಸುತ್ತೇನೆ!

 

*****


(ಪ್ರಕಟಣೆ ಐ.ಡಿ.: 2231936) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Gujarati , English , Urdu , हिन्दी , Marathi , Tamil , Telugu , Malayalam