ಗೃಹ ವ್ಯವಹಾರಗಳ ಸಚಿವಾಲಯ
ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದರು
ಛತ್ರಪತಿ ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲಿಯೇ ಹಿಂದ್ವಿ ಸ್ವರಾಜ್ ಸ್ಥಾಪಿಸುವ ಪ್ರತಿಜ್ಞೆ ತೆಗೆದುಕೊಂಡರು ಮತ್ತು ತಮ್ಮ ಜೀವನದುದ್ದಕ್ಕೂ ಧರ್ಮದ ಧ್ವಜವನ್ನು ರಕ್ಷಿಸಲು ಬದ್ಧರಾಗಿದ್ದರು
ಶಿವಾಜಿ ಮಹಾರಾಜರು ರಾಷ್ಟ್ರದ ಪ್ರತಿಯೊಂದು ಭಾಗದಲ್ಲೂ ಸ್ವಧರ್ಮ, ಸ್ವರಾಜ್ ಮತ್ತು ಸ್ವಭಾಷೆಗಾಗಿ ಬದುಕುವ ಮತ್ತು ಸಾಯುವ ಶಾಶ್ವತ ಇಚ್ಛಾಶಕ್ತಿಯನ್ನು ಜಾಗೃತಗೊಳಿಸಿದರು
ಶಿವಾಜಿ ಮಹಾರಾಜರು ಸಮಾಜದ ಪ್ರತಿಯೊಂದು ವರ್ಗವನ್ನು ಸಂಘಟಿಸಿದರು ಮತ್ತು ರಾಷ್ಟ್ರ ಮತ್ತು ಅದರ ಸಂಸ್ಕೃತಿಯನ್ನು ರಕ್ಷಿಸುವ ಏಕೈಕ ಉದ್ದೇಶವನ್ನು ಹೊಂದಿದ್ದ ವಿಶಾಲ ಸೈನ್ಯವನ್ನು ನಿರ್ಮಿಸಿದರು
ಶಿವಾಜಿ ಮಹಾರಾಜ ಅವರ ಬಲವಾದ ಇಚ್ಛಾಶಕ್ತಿ, ಅದಮ್ಯ ಧೈರ್ಯ ಮತ್ತು ಊಹಿಸಲಾಗದ ತಂತ್ರವನ್ನು ಇತಿಹಾಸದಲ್ಲಿ ವಿರಳವಾಗಿ ಕಾಣಬಹುದು
ಪ್ರಕಟಣಾ ದಿನಾಂಕ:
19 FEB 2026 11:12AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಛತ್ರಪತಿ ಶಿವಾಜಿ ಮಹಾರಾಜ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಈ ಕುರಿತು ‘ಎಕ್ಸ್’ ಖಾತೆಯಲ್ಲಿ ಪ್ರಕಟಿಸಿದ ಸಂದೇಶದಲ್ಲಿ , ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು “ಛತ್ರಪತಿ ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲಿಯೇ ಹಿಂದ್ವಿ ಸ್ವರಾಜ್ ಸ್ಥಾಪಿಸುವ ಪ್ರತಿಜ್ಞೆ ತೆಗೆದುಕೊಂಡರು ಮತ್ತು ತಮ್ಮ ಜೀವನದುದ್ದಕ್ಕೂ ಧರ್ಮದ ಧ್ವಜವನ್ನು ರಕ್ಷಿಸಲು ಬದ್ಧರಾಗಿದ್ದರು. ದೇಶದ ಪ್ರತಿಯೊಂದು ಭಾಗದಲ್ಲೂ ಸ್ವಧರ್ಮ, ಸ್ವರಾಜ್ ಮತ್ತು ಸ್ವಭಾಷೆಗಾಗಿ ಬದುಕುವ ಮತ್ತು ಸಾಯುವ ಶಾಶ್ವತ ಇಚ್ಛೆಯನ್ನು ಶಿವಾಜಿ ಮಹಾರಾಜರು ಜಾಗೃತಗೊಳಿಸಿದರು” ಎಂದು ಹೇಳಿದರು. “ಶಿವಾಜಿ ಮಹಾರಾಜರು ಸಮಾಜದ ಪ್ರತಿಯೊಂದು ವರ್ಗವನ್ನು ಸಂಘಟಿಸಿದರು ಮತ್ತು ರಾಷ್ಟ್ರ ಮತ್ತು ಅದರ ಸಂಸ್ಕೃತಿಯನ್ನು ರಕ್ಷಿಸುವ ಏಕೈಕ ಉದ್ದೇಶವನ್ನು ಹೊಂದಿದ್ದ ವಿಶಾಲ ಸೈನ್ಯವನ್ನು ನಿರ್ಮಿಸಿದರು” ಎಂದು ಶ್ರೀ ಶಾ ಅವರು ಹೇಳಿದರು. “ಅವರ ಬಲವಾದ ಇಚ್ಛಾಶಕ್ತಿ, ಅದಮ್ಯ ಧೈರ್ಯ ಮತ್ತು ಊಹಿಸಲಾಗದ ತಂತ್ರವು ಇತಿಹಾಸದಲ್ಲಿ ವಿರಳವಾಗಿ ಕಂಡುಬರುತ್ತದೆ” ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದರು.
******
(ಪ್ರಕಟಣೆ ಐ.ಡಿ.: 2230193)
ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam