ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಸರ್ಬಿಯಾದ ರಾಷ್ಟ್ರಪತಿ
ಪ್ರಕಟಣಾ ದಿನಾಂಕ:
18 FEB 2026 3:40PM by PIB Bengaluru
ಸರ್ಬಿಯಾದ ರಾಷ್ಟ್ರಪತಿಗಳಾದ ಶ್ರೀ ಅಲೆಕ್ಸಾಂಡರ್ ವುಸಿಕ್ ಅವರು ಇಂದು ದೆಹಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಇಬ್ಬರು ನಾಯಕರು ರಕ್ಷಣಾ, ಉತ್ಪಾದನೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(DPI), ರಸಗೊಬ್ಬರಗಳು ಮತ್ತು ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವ ಕುರಿತು ಮಾರ್ಗಗಳನ್ನು ಚರ್ಚಿಸಿದರು.
ಇದನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶ್ರೀ ಮೋದಿ ಅವರು ಹೀಗೆ ಬರೆದುಕೊಂಡಿದ್ದಾರೆ:
“ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ಸಂದರ್ಭದಲ್ಲಿ ಸರ್ಬಿಯಾ ರಾಷ್ಟ್ರಪತಿ ಅಲೆಕ್ಸಾಂಡರ್ ವುಸಿಕ್ ಅವರನ್ನು ಭೇಟಿ ಮಾಡಿದೆನು. ರಕ್ಷಣಾ, ಉತ್ಪಾದನೆ, ಡಿಪಿಐ, ರಸಗೊಬ್ಬರಗಳು ಮತ್ತು ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದೆವು. ಹಲವು ವರ್ಷಗಳಿಂದ ಭಾರತ ಮತ್ತು ಸರ್ಬಿಯಾ ನಿಕಟವಾಗಿ ಸಹಕರಿಸುತ್ತಿವೆ. ಮುಂದಿನ ದಿನಗಳಲ್ಲಿ ನಮ್ಮ ಸಂಬಂಧಗಳು ಇನ್ನಷ್ಟು ವೇಗ ಪಡೆಯಲಿವೆ ಎಂಬ ವಿಶ್ವಾಸ ನನಗಿದೆ.
@avucic”
“Sastao sam se sa predsednikom Aleksandrom Vučićem na marginama Samita o uticaju veštačke inteligencije u Delhiju. Razgovarali smo o načinima za produbljivanje saradnje u oblastima kao što su odbrana, proizvodnja, Demokratska revolucionarna institucija (DPI), đubriva i infrastruktura. Indija i Srbija godinama tesno sarađuju i uveren sam da će naše veze dobiti još veći zamah u budućnosti.
@avucic”
*****
(ಪ್ರಕಟಣೆ ಐ.ಡಿ.: 2230016)
ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ:
Tamil
,
English
,
Urdu
,
हिन्दी
,
Marathi
,
Assamese
,
Bengali
,
Manipuri
,
Gujarati
,
Telugu
,
Malayalam