ಸಂಪುಟ
ನೋಯ್ಡಾ ಸೆಕ್ಟರ್ 142 ರಿಂದ ಬೊಟಾನಿಕಲ್ ಗಾರ್ಡನ್ (ನೋಯ್ಡಾ)ದ ವರೆಗೆ 11.5 ಕಿ.ಮೀ. ವ್ಯಾಪ್ತಿಯಲ್ಲಿ 8 ನಿಲ್ದಾಣಗಳನ್ನೊಳಗೊಂಡ ವಿಸ್ತರಿತ ಕಾರಿಡಾರ್ ಗೆ ಕೇಂದ್ರ ಸಂಪುಟ ಅನುಮೋದನೆ
ಪ್ರಕಟಣಾ ದಿನಾಂಕ:
14 FEB 2026 1:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ನೋಯ್ಡಾ ಸೆಕ್ಟರ್ 142 ರಿಂದ ನೋಯ್ಡಾದ ಬೊಟಾನಿಕಲ್ ಗಾರ್ಡನ್ ವರೆಗೆ 11.56 ಕಿ.ಮೀ. ಉದ್ದದ 8 ಎತ್ತರಿಸಿದ ನಿಲ್ದಾಣಗಳನ್ನೊಳಗೊಂಡ ನೋಯ್ಡಾ ಮೆಟ್ರೋ ಯೋಜನೆಯ ವಿಸ್ತರಿತ ಕಾರಿಡಾರ್ ಗೆ ಅನುಮೋದನೆ ನೀಡಿದೆ. ಈ ಕಾರಿಡಾರ್ ನ ಕಾರ್ಯಾಚರಣೆಯಿಂದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನಗರ 61.62 ಕಿ.ಮೀ. ಸಕ್ರಿಯ ಮೆಟ್ರೋ ಜಾಲವನ್ನು ಹೊಂದಿದಂತಾಗುತ್ತದೆ.
ಪ್ರಯೋಜನಗಳು ಮತ್ತು ಪ್ರಗತಿಯ ಉತ್ತೇಜನ
ನೋಯ್ಡಾ ಸೆಕ್ಟರ್ 142ರಿಂದ ಬೊಟಾನಿಕಲ್ ಗಾರ್ಡನ್ (ನೋಯ್ಡಾ) ನೋಯ್ಡಾ ಮೆಟ್ರೋ ರೈಲು ಯೋಜನೆಯ ವಿಸ್ತರಿತ ಕಾರಿಡಾರ್ ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮುನ್ನಡೆಯನ್ನು ಪ್ರತಿನಿಧಿಸುತ್ತದೆ. ಈ ಯೋಜನೆ ನಗರದ ಮೆಟ್ರೋ ರೈಲು ಜಾಲದ ಅತ್ಯಂತ ಪ್ರಮುಖ ವಿಸ್ತರಣೆಯಾಗಿದೆ.
ವರ್ಧಿತ ಸಂಪರ್ಕ;
ನೋಯ್ಡಾ ಸೆಕ್ಟರ್ 142 ರಿಂದ ಬೊಟಾನಿಕಲ್ ಗಾರ್ಡನ್(ನೋಯ್ಡಾ) ವರೆಗೆ ವಿಸ್ತರಿತ ಕಾರಿಡಾರ್ ನ ನೋಯ್ಡಾ ಮೆಟ್ರೋ ಯೋಜನೆ ಅಂದಾಜು 11.56 ಕಿ.ಮೀ. ಹೊಸ ಮೆಟ್ರೋ ಮಾರ್ಗವನ್ನು ಒಳಗೊಂಡಿದ್ದು, ಇದು ನೋಯ್ಡಾ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಗಣನೀಯವಾಗಿ ಸುಧಾರಿಸಲಿದೆ. ಸದ್ಯ ನೋಯ್ಡಾ ನಗರಕ್ಕೆ ದಕ್ಷ ಸಾರಿಗೆ ಸಂಪರ್ಕ ಕೊರತೆಯಿದೆ. ಜೊತೆಗೆ ಈ ಯೋಜನೆ ಬೊಟಾನಿಕಲ್ ಗಾರ್ಡನ್(ನೀಲಿ ಮಾರ್ಗ) ಮತ್ತು ಮೆಜೆಂತಾ ಮಾರ್ಗ ಇಂಟರ್ ಚೇಂಜ್ ಸೇರಿದಂತೆ ಬೇಡಿಕೆ ಇರುವ ಕಾರಿಡಾರ್ ಗಳಲ್ಲಿ ನೇರ ಸಂಪರ್ಕವನ್ನು ಒದಗಿಸಲಿದೆ.
ಈ ಹಂತ ನೋಯ್ಡಾದ ಪ್ರಮುಖ ವಲಯಗಳು, ಸೇರಿದಂತೆ ಅಡೆತಡೆ ರಹಿತ ಸಂಪರ್ಕವನ್ನು ಒದಗಿಸುವ ಗುರಿ ಹೊಂದಿದೆ.
- ವಾಣಿಜ್ಯ ತಾಣಗಳು ಅದ್ವಂತ್ ಬಿಸಿನೆಸ್ ಪಾರ್ಕ್ ಸೆಕ್ಟರ್-142, ಸ್ಕೈಮಾರ್ಕ್ ಒನ್ ಮಾಲ್ ಅಟ್ ಸೆಕ್ಟರ್-98 ಮತ್ತು ಮಾಲ್ ಆಫ್ ನೋಯ್ಡಾ ಸೆಕ್ಟರ್-93ಗೆ ಸಂಪರ್ಕ ಒದಗಿಸುತ್ತದೆ.
- ಪ್ರಮುಖ ಎಂಎನ್ಸಿ ಮತ್ತು ಐಟಿ ಹಬ್ ಗಳು : ಅಂದರೆ ಮೈಕ್ರೋ ಸಾಫ್ಟ್ ಸೆಕ್ಟರ್-145, ಟಿಸಿಎಸ್ ಸೆಕ್ಟರ್-157, ಹ್ಯಾವೆಲ್ಸ್ ಸೆಕ್ಟರ್-126, ಇನ್ಫೋಸಿಸ್ ಸೆಕ್ಟರ್-132, ಕಾಗ್ನಿಜೆಂಟ್ ಸೆಕ್ಟರ್-135, ಅಡೋಬ್ ಸೆಕ್ಟರ್-132, ಒರಾಕಲ್ ಸೆಕ್ಟರ್-127
- ಶಿಕ್ಷಣ ಸಂಸ್ಥೆಗಳು ಅಂದರೆ ಸೆಕ್ಟರ್-125 ರಲ್ಲಿ ಅಮಿಟಿ ವಿಶ್ವವಿದ್ಯಾಲಯ, ಸೆಕ್ಟರ್-91 ರಲ್ಲಿ ಪಂಚಶೀಲ್ ಬಾಲಕ್ ಇಂಟರ್ ಕಾಲೇಜು, ಸೆಕ್ಟರ್-44 ರಲ್ಲಿ ಮಹಾಮಾಯ ಬಾಲಿಕಾ ಇಂಟರ್ ಕಾಲೇಜು
- ನಿರ್ಣಾಯಕ ಆರೋಗ್ಯ ರಕ್ಷಣಾ ಸೌಕರ್ಯಗಳು, ಅತ್ಯಂತ ಪ್ರಮುಖವಾಗಿ ಸೆಕ್ಟರ್-128ನಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
- ಪ್ರಮುಖ ಪ್ರವಾಸಿ ಆಕರ್ಷಣೆಗಳು, ಸೆಕ್ಟರ್-93 ಪಾರ್ಕ್ ನಲ್ಲಿರುವ ಬೊಟಾನಿಕಲ್ ಗಾರ್ಡನ್ ಸೇರಿದಂತೆ
ಈ ಪ್ರಮುಖ ಪ್ರದೇಶಗಳಲ್ಲಿ ಪ್ರಮುಖ ಸೌಕರ್ಯಗಳಿಂದ ನೋಯ್ಡಾ ಸೆಕ್ಟರ್ 142 ಯಿಂದ ಬೊಟಾನಿಕಲ್ ಗಾರ್ಡನ್(ನೋಯ್ಡಾದ ವರೆಗೆ)ಸಂಪರ್ಕ ವೃದ್ಧಿಯಾಗುವುದಲ್ಲದೆ, ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಲಿದೆ ಮತ್ತು ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಸುಲಭ ನಗರ ಸಂಚಾರ ಸಾಧ್ಯವಾಗಲಿದೆ.
- ವಾಹನ ದಟ್ಟಣೆ ಇಳಿಮುಖ : ಮೆಟ್ರೋ ರೈಲು ಮಾರ್ಗ ಅತ್ಯಂತ ಪರಿಣಾಮಕಾರಿ ರಸ್ತೆ ಸಾರಿಗೆಯಾಗಿದೆ ಮತ್ತು ನೋಯ್ಡಾ ಸೆಕ್ಟರ್ 142 ನಿಂದ ಬೊಟಾನಿಕಲ್ ಗಾರ್ಡನ್ (ನೋಯ್ಡಾ) ವರೆಗೆ ಕಾರಿಡಾರ್ ವಿಸ್ತರಣೆಯಿಂದ ಮೆಟ್ರೋ ರೈಲು ಮಾರ್ಗ ನೋಯ್ಡಾದವರೆಗೆ ವಿಸ್ತರಣೆಯಾಗಲಿದೆ ಮತ್ತು ಗ್ರೇಟರ್ ನೋಯ್ಡಾ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ. ರಸ್ತೆ ಸಂಚಾರ ದಟ್ಟಣೆ ಇಳಿಮುಖವಾಗುವುದರಿಂದ ವಾಹನಗಳು ಸುಗಮವಾಗಿ ಸಂಚರಿಸುವುದಲ್ಲದೆ, ಅವುಗಳ ಪ್ರಯಾಣಾವಧಿ ಇಳಿಕೆಯಾಗಲಿದೆ ಮತ್ತು ಒಟ್ಟಾರೆ ರಸ್ತೆ ಸುರಕ್ಷತೆ ಹೆಚ್ಚಳವಾಗಲಿದೆ.
- ಪರಿಸರ ಪ್ರಯೋಜನಗಳು : ನೋಯ್ಡಾ ಸೆಕ್ಟರ್ 142 ನಿಂದ ಬೊಟಾನಿಕಲ್ ಗಾರ್ಡನ್ (ನೋಯ್ಡಾ) ವರೆಗೆ ನೋಯ್ಡಾ ಮೆಟ್ರೋ ಕಾರಿಡಾರ್ ವಿಸ್ತರಣೆಯಿಂದ ಒಟ್ಟಾರೆ ನೋಯ್ಡಾದಲ್ಲಿ ಮತ್ತು ಗ್ರೇಟರ್ ನೊಯ್ಡಾದಲ್ಲಿ ಮೆಟ್ರೋ ರೈಲು ಜಾಲ ಹೆಚ್ಚಳವಾಗಲಿದೆ ಮತ್ತು ಇದರಿಂದ ಸಾಂಪ್ರದಾಯಿಕ ಇಂಧನಗಳನ್ನು ಬಳಸುವ ಸಾರಿಗೆ ತಗ್ಗುವುದರಿಂದ ಇಂಗಾಲದ ಹೊರಸೂಸುವಿಕೆ ಗಣನೀಯವಾಗಿ ಇಳಿಕೆಯಾಗಲಿದೆ.
- ಆರ್ಥಿಕ ಪ್ರಗತಿ : ಪ್ರಯಾಣದ ಅವಧಿ ಕಡಿತವಾಗಲಿದೆ ಮತ್ತು ನಗರದ ವಿವಿಧ ಭಾಗಗಳಲ್ಲಿ ಸಾರಿಗೆ ಲಭ್ಯತೆ ಸುಧಾರಿಸಲಿದೆ. ದೆಹಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತಿತರ ಸಾರಿಗೆ ಹಬ್ ಗಳಿಗೆ ಸಂಪರ್ಕ ವೃದ್ಧಿಯಾಗಲಿದೆ. ಹಲವು ಬಸ್ ಡಿಪೋಗಳ ಸಂಪರ್ಕದಿಂದಾಗಿ ಸಾರ್ವಜನಿಕರು ತಮ್ಮ ದುಡಿಯುವ ಸ್ಥಳಗಳನ್ನು ಅತ್ಯಂತ ವೇಗವಾಗಿ ತಲುಪಲು ಸಾಧ್ಯವಾಗಲಿದೆ. ಈ ವರ್ಧಿತ ಸಂಪರ್ಕದಿಂದ ವಿಶೇವಾಗಿ ಹೊಸ ಮೆಟ್ರೋ ರೈಲು ನಿಲ್ದಾಣ ಪ್ರದೇಶಗಳು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲಿವೆ ಮತ್ತು ಆ ಪ್ರದೇಶಗಳು ಅಭಿವೃದ್ಧಿಯಾಗಲಿವೆ.
- ಸಾಮಾಜಿಕ ಪರಿಣಾಮ : ನೋಯ್ಡಾ ಸೆಕ್ಟರ್ 142 ನಿಂದ ಬೊಟಾನಿಕಲ್ ಗಾರ್ಡನ್ (ನೋಯ್ಡಾ) ವರೆಗೆ ಮೆಟ್ರೋ ರೈಲು ಜಾಲ ಕಾರಿಡಾರ್ ವಿಸ್ತರಣೆಯಿಂದ ಸಾರ್ವಜನಿಕ ಸಾರಿಗೆ ಅತ್ಯಂತ ಸುಲಭವಾಗಿ ಲಭ್ಯವಾಗಲಿದೆ. ಇದರಿಂದ ಭಿನ್ನ ಸಾಮಾಜಿಕ ಆರ್ಥಿಕ ಗುಂಪುಗಳಿಗೆ ಪ್ರಯೋಜನವಾಗಲಿದೆ ಮತ್ತು ಸಾರಿಗೆ ಅಸಮಾನತೆಗಳು ನಿವಾರಣೆಯಾಗಲಿವೆ. ಇದರಿಂದ ಜನರ ಸಂಚಾರ ಸಮಯ ಕಡಿತವಾಗಿ ಅವರ ಗುಣಮಟ್ಟ ವೃದ್ಧಿಯಾಗಲಿದೆ ಮತ್ತು ಅಗತ್ಯ ಸೇವೆಗಳ ಲಭ್ಯತೆ ಸುಧಾರಿಸಲಿದೆ.
ನೋಯ್ಡಾ ಸೆಕ್ಟರ್ 142 ನಿಂದ ಬೊಟಾನಿಕಲ್ ಗಾರ್ಡನ್ (ನೋಯ್ಡಾ) ವರೆಗಿನ ಕಾರಿಡಾರ್ ವಿಸ್ತರಣೆಯಿಂದ ನೋಯ್ಡಾ ಮೆಟ್ರೋ ರೈಲು ಯೋಜನೆ ನಗರದ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ್ದಾಗಲಿದೆ. ಇದು ವೇಗದ ಸಂಪರ್ಕ ಒದಗಿಸುವ ಜೊತೆಗೆ ಸಂಚಾರದಟ್ಟಣೆಯನ್ನು ನಿವಾರಿಸುತ್ತದೆ ಹಾಗೂ ಪರಿಸರ ಪ್ರಯೋಜನೆಗಳು, ಆರ್ಥಿಕ ಪ್ರಗತಿ ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸಲಿದೆ. ನಗರದ ಪ್ರಮುಖ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದ ವಿಸ್ತರಣೆಗೆ ಭದ್ರ ಬುನಾದಿ ಹಾಕಲು ಈ ಯೋಜನೆ ನಗರದ ಅಭಿವೃದ್ಧಿಯ ಯಶೋಗಾಥೆ ಮತ್ತು ಸುಸ್ಥಿರತೆಯನ್ನು ರೂಪಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸಲಿದೆ.
*****
(ಪ್ರಕಟಣೆ ಐ.ಡಿ.: 2228061)
ವಿಸಿಟರ್ ಕೌಂಟರ್ : 12