ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಗುಜರಾತ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 56ರ ʻಧಮಸಿಯಾ-ಬಿಟಾಡಾ/ಮೊವಿʼ ಮತ್ತು ʻನಸರ್‌ಪೋರ್ – ಮಾಲೋಥಾʼ ವಿಭಾಗಗಳನ್ನು 4583.64 ಕೋಟಿ ರೂ.ಒಟ್ಟು ಬಂಡವಾಳ ವೆಚ್ಚದಲ್ಲಿ ಚತುಷ್ಪಥದ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಸಂಪುಟದ ಅನುಮೋದನೆ
ಪ್ರಕಟಣಾ ದಿನಾಂಕ:
14 FEB 2026 1:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಗುಜರಾತ್‌ನಲ್ಲಿ ʻಧಮಸಿಯಾ-ಬಿಟಾಡಾ/ಮೊವಿʼ (47.46 ಕಿ.ಮೀ) ಮತ್ತು ʻನಸರ್‌ಪೋರ್-ಮಾಲೋಥಾʼ(60.21 ಕಿ.ಮೀ) ವಿಭಾಗಗಳಲ್ಲಿ ಚತುಶ್ಪಥ ರಸ್ತೆ ನಿಮಾಣಕ್ಕೆ ಅನುಮೋದನೆ ನೀಡಿದೆ. ಒಟ್ಟು 107.67 ಕಿ.ಮೀ ಯೋಜನಾ ಉದ್ದದ ಈ ಯೋಜನೆಯನ್ನುʻಎಚ್ಎಎಂʼ ಮಾದರಿಯಲ್ಲಿ ಒಟ್ಟು 4583.64 ಕೋಟಿ ರೂ. ಬಂಡವಾಳ ವೆಚ್ಚದ ನಿರ್ಮಿಸಲು ಅನುಮೋದನೆ ನೀಡಲಾಗಿದೆ.
ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿ-56ರ ಒಂದು ಭಾಗವಾಗಿದ್ದು, ಇದು ರಾಜಸ್ಥಾನದ ನಿಂಬಹೇರಾದಲ್ಲಿ ಪ್ರಾರಂಭವಾಗುತ್ತದೆ ಮತ್ತು ಗುಜರಾತ್‌ನ ದಾಹೋದ್ ಜಿಲ್ಲೆ, ಮಧ್ಯಪ್ರದೇಶ ರಾಜ್ಯದ ಅಲಿರಾಜ್ಪುರ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ನಂತರ ಛೋಟಾ ಉದೇಪುರ್ ಜಿಲ್ಲೆಯ ಬಳಿ ಗುಜರಾತ್ ಅನ್ನು ಮತ್ತೆ ಪ್ರವೇಶಿಸುತ್ತದೆ, ವಾಪಿ ಬಳಿ ರಾಷ್ಟ್ರೀಯ ಹೆದ್ದಾರಿ -48 ರ ಜಂಕ್ಷನ್‌ನಲ್ಲಿ ಕೊನೆಗೊಳ್ಳುತ್ತದೆ.
ಅನುಮೋದಿತ ರಸ್ತೆ ಯೋಜನೆಯು ಮಹತ್ವಾಕಾಂಕ್ಷೆಯ ನರ್ಮದಾ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ದಾಹೋದ್, ಛೋಟಾ ಉದೇಪುರ್, ತಾಪಿ ಮತ್ತು ಭರೂಚ್‌ನ ಬುಡಕಟ್ಟು ಪ್ರದೇಶಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ. ಆ ಮೂಲಕ ಈ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿ 56ರಿಂದ ಸುಮಾರು 11 ಕಿ.ಮೀ ದೂರದಲ್ಲಿರುವ ಕೆವಾಡಿಯಾ ಗ್ರಾಮದಲ್ಲಿರುವ ಪ್ರಮುಖ ರಾಷ್ಟ್ರೀಯ ಪ್ರವಾಸಿ ತಾಣವಾದ ʻಏಕತಾ ಪ್ರತಿಮೆʼಗೆ ಸಂಪರ್ಕವನ್ನು ಹೆಚ್ಚಿಸುತ್ತದೆ.
ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ, ಇದು ಗಂಟೆಗೆ 70 ಕಿ.ಮೀ. ಸರಾಸರಿ ವೇಗದಲ್ಲಿ ಚಲನೆಗೆ ಅನುವು ಮಾಡಿಕೊಡುತ್ತದೆ. ಇದು ಪ್ರಯಾಣದ ಸಮಯವನ್ನು 40% ರಷ್ಟು ಕಡಿಮೆ ಮಾಡಿ, ಹಾಲಿ 2.5 ಗಂಟೆಗಳಿಂದ 1.5 ಗಂಟೆಗಳಿಗೆ ಇಳಿಸಲಿದೆ.
107.67 ಕಿ.ಮೀ. ಉದ್ದದ ಅನುಮೋದಿತ ಯೋಜನೆಯು ಸುಮಾರು 19.38 ಲಕ್ಷ ಮಾನವ ದಿನಗಳ ನೇರ ಉದ್ಯೋಗ ಮತ್ತು 22.82 ಲಕ್ಷ ಮಾನವ ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ. ಉದ್ದೇಶಿತ ಕಾರಿಡಾರ್ ಸುತ್ತಮುತ್ತಲಿನ ಆರ್ಥಿಕ ಚಟುವಟಿಕೆಗಳ ಹೆಚ್ಚಳದಿಂದಾಗಿ ಈ ಯೋಜನೆಯು ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ʻಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರʼದ (ಎನ್‌ಎಚ್‌ಎಐ) ಮೂಲಕ ರಾಷ್ಟ್ರೀಯ ಹೆದ್ದಾರಿ-56ರಲ್ಲಿನ ಅತೀವ ವಾಹನ ದಟ್ಟಣೆಯ ʻಜಂಬುಗಂ(ಬೋಡೆಲಿ) – ಮಾಲೋಥಾʼ ವಿಭಾಗವನ್ನು (175 ಕಿ.ಮೀ) ನಾಲ್ಕು ಪ್ಯಾಕೇಜ್‌ಗಳ ಅಡಿಯಲ್ಲಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ಜಂಬುಗಂ(ಬೋಡೆಲಿ) ನಿಂದ ಧಮಾಸಿಯಾ ಮತ್ತು ಮೋವಿಯಿಂದ ನಸರ್‌ಪೋರ್‌ದವರೆಗಿನ ಮಾರ್ಗಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಮತ್ತು ನಿರ್ಮಾಣ ಕಾರ್ಯವು ಈಗಾಗಲೇ ನವೆಂಬರ್ 2025ರಲ್ಲಿ ಪ್ರಾರಂಭವಾಗಿದೆ. ಯೋಜನಾ ಪ್ಯಾಕೇಜ್‌ಗಳು ತ್ವರಿತಗತಿಯಲ್ಲಿ ಪೂರ್ಣಗೊಂಡ ನಂತರ ಬೋಡೇಲಿಯಿಂದ ಮಾಲೋಥಾದವರೆಗೆ ನಿರಂತರ 4-ಪಥದ ಸಂಪರ್ಕ ಸ್ಥಾಪನೆಯಾಗಲಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ-56 ರಲ್ಲಿ ದಟ್ಟಣೆಯನ್ನು ಕಡಿಮೆ ಕಡಿಮೆಐಾಗುತ್ತದೆ. ರಾಷ್ಟ್ರೀಯ ಹೆದ್ದಾರಿ-53, ರಾಷ್ಟ್ರೀಯ ಹೆದ್ದಾರಿ-48 ಮತ್ತು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗೆ(ಎನ್‌ಇ-4) ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ರಾಷ್ಟ್ರೀಯ ಹೆದ್ದಾರಿ 56ರಲ್ಲಿ ʻಧಮಾಸಿಯಾ-ಬಿಟಾಡಾ/ಮೊವಿʼ (47.46 ಕಿ.ಮೀ) ಮತ್ತು ʻನಸರ್ಪೋರ್-ಮಲೋಥಾʼ (60.21 ಕಿ.ಮೀ) ಯೋಜನೆಯ ಜೋಡಣೆ ನಕ್ಷೆ

*****
(ಪ್ರಕಟಣೆ ಐ.ಡಿ.: 2228036)
ವಿಸಿಟರ್ ಕೌಂಟರ್ : 7