ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಹೈದರಾಬಾದ್-ಪಣಜಿ ಆರ್ಥಿಕ ಕಾರಿಡಾರ್‌ನ ಭಾಗವಾಗಿರುವ ತೆಲಂಗಾಣದ ಗುಡೆಬೆಲ್ಲೂರು-ಮಹಬೂಬ್‌ನಗರ ನಡುವಿನ ರಾಷ್ಟ್ರೀಯ ಹೆದ್ದಾರಿ-167 ಅನ್ನು ಚತುಷ್ಪಥಕ್ಕೆ ವಿಸ್ತರಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆ; ಒಟ್ಟು ಯೋಜನಾ ಉದ್ದ 80.01 ಕಿ.ಮೀ ಮತ್ತು ಒಟ್ಟು 3175.08 ಕೋಟಿ ರೂ. ಬಂಡವಾಳ ವೆಚ್ಚವನ್ನು ಇದು ಒಳಗೊಂಡಿದೆ
ಪ್ರಕಟಣಾ ದಿನಾಂಕ:
14 FEB 2026 1:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಹೈದರಾಬಾದ್-ಪಣಜಿ ಆರ್ಥಿಕ ಕಾರಿಡಾರ್‌ನಲ್ಲಿ ಗುಡೆಬೆಳ್ಳೂರಿನಿಂದ ಮಹಬೂಬ್‌ನಗರದವರೆಗಿನ (ತೆಲಂಗಾಣ) ರಾಷ್ಟ್ರೀಯ ಹೆದ್ದಾರಿ-167ನ್ನು ಚತುಷ್ಪಥವಾಗಿ ಅಗಲಗೊಳಿಸಲು ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಇದರ ಒಟ್ಟು ಯೋಜನಾ ಉದ್ದ 80.01 ಕಿ.ಮೀ ಆಗಿದ್ದು, ಒಟ್ಟು 3175.08 ಕೋಟಿ ರೂ. ಬಂಡವಾಳ ವೆಚ್ಚವನ್ನು ಇದು ಒಳಗೊಂಡಿದೆ. ʻಎನ್‌ಎಚ್(ಒ)ʼ ಯೋಜನೆಯಡಿ ʻಹೈಬ್ರಿಡ್ ಆನ್ಯುಯಿಟಿ ಮಾದರಿʼಯಲ್ಲಿ(ಎಚ್‌ಎಎಂ) ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಪ್ರಸ್ತುತ, ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಹೆದ್ದಾರಿ-167ರಲ್ಲಿ ಗುಡೆಬೆಳ್ಳೂರಿನಿಂದ ಮೆಹಬೂಬನ್‌ನಗರ ನಡುವಿನ ಮಾರ್ಗವು ಅತ್ಯಂತ ಕಳಪೆಯಾಗಿದ್ದು, ಪಟ್ಟಣ ಪ್ರದೇಶದಲ್ಲಿ ಸಂಚಾರ ದಟ್ಟಣೆಯಿಂದಾಗಿ ಗಮನಾರ್ಹ ಪ್ರಯಾಣದ ಸಮಯ ವಿಳಂಬಕ್ಕೆ ಕಾರಣವಾಗುತ್ತಿದೆ. ಇದು ಗುಡೆಬೆಲ್ಲೂರು, ಮಗ್ನೂರು, ಮಕ್ತಾಲ್, ಮಾರಿಕಲ್, ದೇವರಕದ್ರಾ, ಜಕ್ಲೈರ್, ಯಲಿಗಂಡ್ಲಾ ಮತ್ತು ಬಂದೇರ್‌ಪಲ್ಲಿ ಸೇರಿದಂತೆ ಹೆಚ್ಚು ನಗರೀಕರಣಗೊಂಡ ಪಟ್ಟಣಗಳು / ಹಳ್ಳಿಗಳ ಮೂಲಕ ಹಾದುಹೋಗುತ್ತದೆ, ಈ ಸವಾಲುಗಳನ್ನು ಎದುರಿಸಲು, ಯೋಜನೆಯನ್ನು 4 ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯು ತೆಲಂಗಾಣ ರಾಜ್ಯದ ನಾರಾಯಣಪೇಟೆ ಮತ್ತು ಮಹಬೂಬ್‌ನಗರ ಜಿಲ್ಲೆಗಳಿಗೆ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ. ಇದು ಸರಕು ಸಾಗಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ, ಸರಕು-ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಈ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಈ ಯೋಜನೆಯು ತೆಲಂಗಾಣದಾದ್ಯಂತ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಸರಕು-ಸಾಗಣೆ ಮಾರ್ಗಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುವ 2 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೊಂದಿಗೆ (ಎಚ್‌ಎಚ್-150 ಮತ್ತು ಎನ್‌ಎಚ್-167ಎನ್) ಜೋಡಣೆಯಾಗುತ್ತದೆ. ಹೆಚ್ಚುವರಿಯಾಗಿ, ನವೀಕರಿಸಿದ ಈ ಕಾರಿಡಾರ್ ಮೂರು ʻಪಿಎಂ ಗತಿಶಕ್ತಿ ಆರ್ಥಿಕ ಸಂಪರ್ಕ ಕೇಂದ್ರಗಳುʼ, ಒಂಬತ್ತು ಸಾಮಾಜಿಕ ಸಂಪರ್ಕ ಕೇಂದ್ರಗಳು ಮತ್ತು ಏಳು ಸರಕು-ಸಾಗಣೆ ಸಂಪರ್ಕ ಕೇಂದ್ರಗಳಿಗೆ ಜೋಡಣೆ ಒದಗಿಸುವ ಮೂಲಕ ಬಹು-ಮಾದರಿಯ ಸಂಯೋಜನೆಗೆ ಅವಕಾಶ ನೀಡುತ್ತದೆ. aಜೊತೆಗೆ ತಡೆರಹಿತ ಸಂಪರ್ಕವನ್ನು ಹೆಚ್ಚಿಸುತ್ತದೆ. ಆ ಮೂಲಕ ಈ ಪ್ರದೇಶದಾದ್ಯಂತ ಸರಕು ಮತ್ತು ಪ್ರಯಾಣಿಕರ ಚಲನೆಯ ವೇಗವರ್ಧನೆಗೆ ಅನುವು ಮಾಡಿಕೊಡುತ್ತದೆ.
ಈ ಯೋಜನೆ ಪೂರ್ಣಗೊಂಡ ನಂತರ, ರಾಷ್ಟ್ರೀಯ ಹೆದ್ದಾರಿ-167 ನವೀಕರಣವು ಪ್ರಾದೇಶಿಕ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪ್ರಮುಖ ಧಾರ್ಮಿಕ ಮತ್ತು ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಜೊತೆಗೆ ವ್ಯಾಪಾರ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. 80.01 ಕಿ.ಮೀ ಉದ್ದದ ಉದ್ದೇಶಿತ ಪ್ರವೇಶ-ನಿಯಂತ್ರಿತ 4-ಪಥ ಯೋಜನೆಯು ಸುಮಾರು 14.4 ಲಕ್ಷ ಮಾನವ-ದಿನಗಳ ನೇರ ಉದ್ಯೋಗ ಮತ್ತು 17.9 ಲಕ್ಷ ಮಾನವ-ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ. ಉದ್ದೇಶಿತ ಕಾರಿಡಾರ್‌ಗಳ ಸುತ್ತಮುತ್ತ ಆರ್ಥಿಕ ಚಟುವಟಿಕೆ ಹೆಚ್ಚಾಗುವುದರಿಂದ ಈ ಯೋಜನೆಯು ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಅನುಬಂಧ - I: ಯೋಜನೆಯ ವಿವರಗಳು
|
ವೈಶಿಷ್ಟ್ಯ
|
ವಿವರಗಳು
|
|
ಯೋಜನೆಯ ಹೆಸರು
|
ಹೈದರಾಬಾದ್-ಪಣಜಿ ಆರ್ಥಿಕ ಕಾರಿಡಾರ್‌ನಲ್ಲಿ ತೆಲಂಗಾಣದ ಗುಡೆಬೆಳ್ಳೂರಿನಿಂದ ಮಹಬೂಬ್ ನಗರದವರೆಗಿನ ರಾಷ್ಟ್ರೀಯ ಹೆದ್ದಾರಿ-167 ಅನ್ನು ಚತುಶ್ಪಥಕ್ಕೆ ಅಗಲೀಕರಣ. ಒಟ್ಟು 80.01 ಕಿ.ಮೀ ಯೋಜನಾ ಉದ್ದದ ಈ ಯೋಜನೆಯು ಒಟ್ಟು 3175.08 ಕೋಟಿ ರೂ.ಗಳ ಬಂಡವಾಳ ವೆಚ್ಚವನ್ನು ಒಳಗೊಂಡಿದ್ದು, ʻಎನ್‌ಎಚ್(ಒ)ʼ ಯೋಜನೆಯಡಿ ʻಹೈಬ್ರಿಡ್ ಆನ್ಯುಯಿಟಿ ಮಾದರಿʼಯಲ್ಲಿ(ಎಚ್ಎಎಂ) ನಿರ್ಮಾಣಗೊಳ್ಳಲಿದೆ.
|
|
ಕಾರಿಡಾರ್
|
ಹೈದರಾಬಾದ್ - ಪಣಜಿ ಆರ್ಥಿಕ ಕಾರಿಡಾರ್‌ನ ಗುಡೆಬೆಲ್ಲೂರು – ಮೆಹಬೂಬ್‌ನಗರ ವಿಭಾಗ
|
|
ಉದ್ದ (ಕಿ.ಮೀ.)
|
80.01 (36.8 ಕಿ.ಮೀ.ಗಿಂತ ಹೆಚ್ಚಿನ ಬೈಪಾಸ್ ಮತ್ತು ಮರುಜೋಡಣೆ ಸೇರಿದಂತೆ)
|
|
ಯುಟಿಲಿಟಿ ಶಿಫ್ಟಿಂಗ್ ಸೇರಿದಂತೆ ಒಟ್ಟು ಲೋಕೋಪಯೋಗಿ ವೆಚ್ಚ (ರೂ. ಕೋಟಿ)
|
1868.90
|
|
ನಿರ್ಮಾಣ ಪೂರ್ವ ಚಟುವಟಿಕೆಗಳ
ವೆಚ್ಚ (ಎಲ್‌ಎ ವೆಚ್ಚ + ಇತರ ವೆಚ್ಚ)
|
459.11
|
|
ಒಟ್ಟು ಬಂಡವಾಳ ವೆಚ್ಚ (ಕೋಟಿ ರೂ.)
|
3175.08
|
|
ಮಾದರಿ
|
ಹೈಬ್ರಿಡ್ ಆನ್ಯುಯಿಟಿ ಮೋಡ್ (ಎಚ್‌ಎಎಂ)
|
|
ಸಂಪರ್ಕ ಹೊಂದುವ ಪ್ರಮುಖ ರಸ್ತೆಗಳು
|
ರಾಷ್ಟ್ರೀಯ ಹೆದ್ದಾರಿಗಳು: ರಾಷ್ಟ್ರೀಯ ಹೆದ್ದಾರಿ -150 ಮತ್ತು ರಾಷ್ಟ್ರೀಯ ಹೆದ್ದಾರಿ -167ಎನ್
|
|
ಆರ್ಥಿಕ / ಸಾಮಾಜಿಕ / ಸಾರಿಗೆ ಸಂಪರ್ಕಜಾಲಗಳೊಂದಿಗೆ ಜೋಡಣೆ
|
ಆರ್ಥಿಕ ಸಂಪರ್ಕ ಕೇಂದ್ರಗಳು:
ಎನ್ಐಸಿಡಿಸಿ: ಹೈದರಾಬಾದ್ - ಬೆಂಗಳೂರು ಎನ್ಐಸಿಡಿಸಿ
ಫಾರ್ಮಾ ಮತ್ತು ಮೆಡಿಕಲ್ ಕ್ಲಸ್ಟರ್- ಹೈದರಾಬಾದ್
ಹೈದರಾಬಾದ್‌ನಲ್ಲಿ ವಿಶೇಷ ಆರ್ಥಿಕ ವಲಯಗಳು
ಸಾಮಾಜಿಕ ಸಂಪರ್ಕ ಕೇಂದ್ರಗಳು:
ಮಹತ್ವಾಕಾಂಕ್ಷೆಯ ಜಿಲ್ಲೆ: ರಾಯಚೂರು, ಅನೇಕ ಪ್ರವಾಸಿ ಮತ್ತು ಧಾರ್ಮಿಕ ತಾಣಗಳು
ಸರಕು-ಸಾಗಣೆ ಸಂಪರ್ಕ ಕೇಂದ್ರಗಳು:
ವಿಮಾನ ನಿಲ್ದಾಣಗಳ ಸಂಖ್ಯೆ-1 (ಹೈದರಾಬಾದ್)
ರೈಲ್ವೆ ನಿಲ್ದಾಣಗಳ ಸಂಖ್ಯೆ: 4
ಎಂಎಂಎಲ್‌ಪಿಗಳ ಸಂಖ್ಯೆ: 2
|
|
ಸಂಪರ್ಕ ಹೊಂದಿದ ಪ್ರಮುಖ ನಗರಗಳು / ಪಟ್ಟಣಗಳು
|
ಮೆಹಬೂಬ್‌ನಗರ, ನಾರಾಯಣಪೇಟ್, ರಾಯಚೂರು, ದೇವರಕದ್ರಾ, ಮಕ್ತಾಲ್ ಮತ್ತು ಹೈದರಾಬಾದ್ ಮುಂತಾದವು.
|
|
ಉದ್ಯೋಗ ಸೃಷ್ಟಿ ಸಾಮರ್ಥ್ಯ
|
14.4 ಲಕ್ಷ ಮಾನವ ದಿನಗಳ ನೇರ ಉದ್ಯೋಗ ಮತ್ತು 17.9 ಲಕ್ಷ ಮಾನವ ದಿನಗಳ ಪರೋಕ್ಷ ಉದ್ಯೋಗ
|
|
ಹಣಕಾಸು ವರ್ಷ -24-25 ರಲ್ಲಿ ವಾರ್ಷಿಕ ಸರಾಸರಿ ದೈನಂದಿನ ದಟ್ಟಣೆ (ಎಎಡಿಟಿ)
|
ಅಂದಾಜು 17,991 ಪ್ರಯಾಣಿಕರ ಕಾರುಗಳು (ಪಿಸಿಯು)
|
*****
(ಪ್ರಕಟಣೆ ಐ.ಡಿ.: 2228032)
ವಿಸಿಟರ್ ಕೌಂಟರ್ : 11