ಪ್ರಧಾನ ಮಂತ್ರಿಯವರ ಕಛೇರಿ
ನಮ್ಮ ದೇಶದ ಆರ್ಥಿಕ ರೂಪಾಂತರಕ್ಕೆ ಬಜೆಟ್ ಹೇಗೆ ಕೊಡುಗೆ ನೀಡಬಲ್ಲದು ಎಂಬ ಬಗ್ಗೆ ಹಣಕಾಸು ಸಚಿವರಿಂದ ಸಮಗ್ರ ಚಿತ್ರಣ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
12 FEB 2026 2:13PM by PIB Bengaluru
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿಂದು ಮಾಡಿದ ಭಾಷಣದಲ್ಲಿ ನಮ್ಮ ದೇಶದ ಆರ್ಥಿಕ ರೂಪಾಂತರಕ್ಕೆ ಈ ವರ್ಷದ ಆಯವ್ಯಯ ಹೇಗೆ ಕೊಡುಗೆ ನೀಡಬಲ್ಲದು ಎಂಬ ಬಗ್ಗೆ ಸಮಗ್ರ ಚಿತ್ರಣ ಕಟ್ಟಿಕೊಟ್ಟಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. "ಸುಧಾರಣಾ ಎಕ್ಸ್‌ಪ್ರೆಸ್, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂ ಎಸ್‌ಎಂ ಇ) ಗಳಿಗೆ ಬೆಂಬಲ, ಕೌಶಲ್ಯ, ಮುಂದಿನ ಪೀಳಿಗೆಯ ಮೂಲಸೌಕರ್ಯಕ್ಕೆ ಒತ್ತು, ಆರೋಗ್ಯ ರಕ್ಷಣೆ, ಶಿಕ್ಷಣ ವಲಯಗಳ ಉತ್ತೇಜನಕ್ಕೆ ಆದ್ಯತೆ ಮೊದಲಾದ ಪ್ರಯತ್ನಗಳಿಗೆ ಅವರು ಒತ್ತು ನೀಡಿದ್ದಾರೆ" ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.
ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಈ ವರ್ಷದ ಬಜೆಟ್ ನಮ್ಮ ದೇಶದ ಆರ್ಥಿಕ ಪರಿವರ್ತನೆಗೆ ಹೇಗೆ ಕೊಡುಗೆ ನೀಡಲಿದೆ ಎಂಬ ಬಗ್ಗೆ ಸಮಗ್ರ ಚಿತ್ರಣವನ್ನು ನೀಡಿದ್ದಾರೆ. ಅವರು ಸುಧಾರಣಾ ಎಕ್ಸ್‌ಪ್ರೆಸ್, ಎಂ ಎಸ್ ಎಂ ಇ ಗಳಿಗೆ ಬೆಂಬಲ, ಕೌಶಲ್ಯ, ಭವಿಷ್ಯದ ಪೀಳಿಗೆಯ ಮೂಲಸೌಕರ್ಯಕ್ಕೆ ಒತ್ತು, ಆರೋಗ್ಯ ರಕ್ಷಣೆ, ಶಿಕ್ಷಣ ಇತ್ಯಾದಿಗಳನ್ನು ಉತ್ತೇಜಿಸುವ ಪ್ರಯತ್ನಗಳ ಬಗ್ಗೆ ಒತ್ತಿ ಹೇಳಿದ್ದಾರೆ."
@nsitharaman
*****
(ಪ್ರಕಟಣೆ ಐ.ಡಿ.: 2227014)
ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ:
हिन्दी
,
English
,
Urdu
,
Marathi
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam