ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಉತ್ಪಾದನೆ ಮತ್ತು ಎಂ ಎಸ್ ಎಂ ಇಗಳನ್ನು ಬೆಂಬಲಿಸಲು ಬ್ರಿಕ್ಸ್ ಕೈಗಾರಿಕಾ ಸಾಮರ್ಥ್ಯ ಕೇಂದ್ರಕ್ಕೆ ಸೇರ್ಪಡೆಯಾದ ಭಾರತ

ಪ್ರಕಟಣಾ ದಿನಾಂಕ: 04 FEB 2026 11:55AM by PIB Bengaluru

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ನವದೆಹಲಿಯ ವಾಣಿಜ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತವು ಬ್ರಿಕ್ಸ್‌ ಕೈಗಾರಿಕಾ ಸಾಮರ್ಥ್ಯಗಳ ಕೇಂದ್ರ (ಬಿಸಿಐಟಿ)ಯನ್ನು ಸೇರ್ಪಡೆಗೊಂಡಿತು. ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (ಯು ಎನ್ ಐ ಡಿ ಒ) ಜೊತೆಗೆ ಸಹಭಾಗಿತ್ವದಲ್ಲಿ ಆರಂಭಿಸಲಾಗಿರುವ ಬಿಸಿಐಸಿ, ಬ್ರಿಕ್ಸ್‌ ರಾಷ್ಟ್ರಗಳಲ್ಲಿನ ಉತ್ಪಾದನಾ ಕಂಪನಿಗಳು ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ ಎಂಇಗಳಿಗೆ) ಸಮಗ್ರ ಬೆಂಬಲ ಸೇವೆಗಳನ್ನು ಒದಗಿಸುವ ಒನ್ ಸ್ಟಾಪ್ (ಒಂದೇ ಸ್ಥಳದಲ್ಲಿ ಎಲ್ಲಾ ಸೌಕರ್ಯವಿರುವ) ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಆ ಮೂಲಕ ಇದು ಉದ್ಯಮ 4.0 ಸಾಮರ್ಥ್ಯಗಳ ಬಲವರ್ಧನೆಗೊಳಿಸುವತ್ತ ಹೆಚ್ಚಿನ ಗಮನಹರಿಸುತ್ತದೆ.

ಈ ಸಂದರ್ಭದಲ್ಲಿ, ಡಿಪಿಐಐಟಿ ಮತ್ತು ಯುಎನ್ ಐಡಿಒ ನಡುವೆ ಟ್ರಸ್ಟ್ ನಿಧಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಡಿಪಿಐಐಟಿಯ ಆರ್ಥಿಕ ಸಲಹೆಗಾರ ಶ್ರೀ ಅಗ್ರಿಮ್ ಕೌಶಲ್ ಮತ್ತು ಯುಎನ್ ಐಡಿಒ ಯ ನಿರ್ದೇಶಕ ಡಾ. ಕ್ರಿಸ್ಟಿಯಾನೊ ಪಾಸಿನಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು, ಇದು ಬಿಸಿಐಟಿ ಚೌಕಟ್ಟಿನಲ್ಲಿ ಭಾರತದ ಭಾಗಿದಾರಿಕೆಯನ್ನು ಅಧಿಕೃತಗೊಳಿಸಲಿದೆ.

ರಾಷ್ಟ್ರೀಯ ಉತ್ಪಾದನಾ ಮಂಡಳಿ (ಎನ್ ಪಿ ಸಿ) ಅನ್ನು ಬ್ರಿಕ್ಸ್‌ ಕೈಗಾರಿಕಾ ಸಾಮರ್ಥ್ಯಗಳ ಭಾರತ ಕೇಂದ್ರ ಎಂದು ನಿಯೋಜಿಸಲಾಗಿದೆ, ಡಿಪಿಐಐಟಿಯ ನೀತಿ ಮಾರ್ಗದರ್ಶನ ಮತ್ತು ಯುಎನ್ ಐಡಿಒ ದ ತಾಂತ್ರಿಕ ಬೆಂಬಲದೊಂದಿಹಗೆ, ಎನ್ ಪಿ ಸಿ, ಬಿಸಿಐಟಿ ಜತೆಗಿನ ಭಾರತದ ಒಳಗೊಳ್ಳುವಿಕೆಯನ್ನು ಮುನ್ನಡೆಸುತ್ತದೆ ಮತ್ತು ಸಾಮರ್ಥ್ಯ ವೃದ್ಧಿ, ಉತ್ಪಾದಕತೆ ವರ್ಧನೆ ಮತ್ತು ಸುಧಾರಿತ ಉತ್ಪಾದನಾ ಪದ್ಧತಿಗಳ ಅಳವಡಿಕೆಗೆ ಕೊಡುಗೆ ನೀಡುತ್ತದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಪಿಐಐಟಿ ಕಾರ್ಯದರ್ಶಿ ಶ್ರೀ ಅಮರದೀಪ್ ಸಿಂಗ್ ಭಾಟಿಯಾ ವಹಿಸಿದ್ದರು ಮತ್ತು ಎನ್ ಪಿ ಸಿಯ ಮಹಾನಿರ್ದೇಶಕರಾದ ಶ್ರೀಮತಿ ನೀರ್ಜಾ ಶೇಖರ್, ಡಿಪಿಐಐಟಿಯ ಹಿರಿಯ ಅಧಿಕಾರಿಗಳು, ಎಂ ಎಸ್ ಎಂ ಇ ಸಚಿವಾಲಯ, ವಿದೇಶಾಂಗ ಸಚಿವಾಲಯ, ಯುಎನ್ ಐಡಿಒ ಪ್ರತಿನಿಧಿಗಳು ಮತ್ತು ಕೈಗಾರಿಕಾ ಪಾಲುದಾರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಐ ಸಿ ಸಿ ಐ) ಯ ಪ್ರತಿನಿಧಿಗಳು ಭಾಗವಹಿಸಿದ್ದರು.

 

*****


(ಪ್ರಕಟಣೆ ಐ.ಡಿ.: 2223022) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Tamil , Malayalam