ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಬಜೆಟ್ 2026-27ರಲ್ಲಿ ಬಯೋಫಾರ್ಮ ಶಕ್ತಿ(ಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಅತ್ಯಾಧುನಿಕ ಆರೋಗ್ಯ ರಕ್ಷಣೆಗಾಗಿ ಕಾರ್ಯತಂತ್ರ) ಯೋಜನೆ ಪ್ರಸ್ತಾಪ


ಮುಂದಿನ ಐದು ವರ್ಷಗಳಲ್ಲಿ 100,000 ಹೊಸ ಎಎಚ್ ಪಿಗಳ ಸೇರ್ಪಡೆ ಮತ್ತು ಹಾಲಿ ಇರುವ ಆರೋಗ್ಯ ಸಂಬಂಧಿ ವೃತ್ತಿಪರರು (ಎ ಎಚ್ ಪಿ) ಗಳ ಸಂಸ್ಥೆಗಳ ಉನ್ನತೀಕರಣ

ವೃದ್ಧಾಪ್ಯದ ಮತ್ತು ಸಂಬಂಧಿತ ಆರೈಕೆ ಸೇವೆಗಳಿಗಾಗಿ ಆರೈಕೆ ಪರಿಸರ ವ್ಯವಸ್ಥೆ ನಿರ್ಮಾಣ; ಮುಂಬರುವ ವರ್ಷಗಳಲ್ಲಿ 1.5 ಲಕ್ಷ ಆರೈಕೆದಾರರಿಗೆ ತರಬೇತಿ

ಖಾಸಗಿ ವಲಯದ ಸಹಭಾಗಿತ್ವದಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ತಾಣಗಳ ಸ್ಥಾಪನೆಗೆ ರಾಜ್ಯಗಳಿಗೆ ನೆರವು ನೀಡಲು ಯೋಜನೆಯ ಪ್ರಸ್ತಾಪ

ಹೊಸದಾಗಿ ಮೂರು ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ

ಆಯುಷ್ ಫಾರ್ಮಸಿಗಳು ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳ ಉನ್ನತೀಕರಣ

ಜಾಮ್ ನಗರದಲ್ಲಿರುವ ಡಬ್ಲ್ಯೂಎಚ್ಒ ಜಾಗತಿಕ ಸಾಂಪ್ರದಾಯಿಕ ಔಷಧಗಳ ಕೇಂದ್ರ ಉನ್ನತೀಕರಣ

ರಾಂಚಿ ಮತ್ತು ತೇಜ್ ಪುರಗಳಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಪ್ರಾದೇಶಿಕ ಉನ್ನತ ಕೇಂದ್ರಗಳಾಗಿ ಮೇಲ್ದರ್ಜೆಗೆ

ಜಿಲ್ಲಾ ಆಸ್ಪತ್ರೆಗಳಲ್ಲಿ ಶೇಕಡ 50ರಷ್ಟು ತುರ್ತು ಚಿಕಿತ್ಸಾ ಸಾಮರ್ಥ್ಯ ಹೆಚ್ಚಳಕ್ಕೆ ತುರ್ತು ಚಿಕಿತ್ಸೆ ಮತ್ತು ಟ್ರಾಮಾಕೇರ್ ಕೇಂದ್ರಗಳ ಸ್ಥಾಪನೆ

ಪ್ರಕಟಣಾ ದಿನಾಂಕ: 01 FEB 2026 1:03PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್, ಸಂಸತ್ ನಲ್ಲಿಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಅವರು ತಮ್ಮ ಭಾಷಣದಲ್ಲಿ ಹಣಕಾಸು ಸಚಿವರು, ಸರ್ಕಾರ ಮೂರು ಕರ್ತವ್ಯಗಳಿಂದ ಸ್ಫೂರ್ತಿಯನ್ನು ಪಡೆದಿದೆ ಎಂದರು: (1) ಸುಸ್ಥಿರ ಆರ್ಥಿಕ ಪ್ರಗತಿ ಮತ್ತು ಅದಕ್ಕೆ ವೇಗ ನೀಡುವುದು. (2) ಜನರ ಸಾಮರ್ಥ್ಯವೃದ್ಧಿ ಮತ್ತು ಆಶೋತ್ತರಗಳನ್ನು ಈಡೇರಿಸುವುದು (3) ಪ್ರತಿ ಕುಟುಂಬ, ಸಮುದಾಯ, ಪ್ರದೇಶ ಮತ್ತು ವಲಯಕ್ಕೆ ಸಂಪನ್ಮೂಲಗಳ ಲಭ್ಯತೆ ಖಾತ್ರಿಪಡಿಸುವುದು. ಆರೋಗ್ಯ ಕೇಂದ್ರ ಬಜೆಟ್ ಈ ಮೂರು ಕರ್ತವ್ಯಗಳ ಅತ್ಯಂತ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ.

ಭಾರತ ಜಾಗತಿಕ ಬಯೋಫಾರ್ಮ ಉತ್ಪಾದನಾ ತಾಣವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಕೇಂದ್ರ ಬಜೆಟ್ ನಲ್ಲಿ ಬಯೋಫಾರ್ಮ ಶಕ್ತಿ (ಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಅತ್ಯಾಧುನಿಕ ಆರೋಗ್ಯ ರಕ್ಷಣಾ ಕಾರ್ಯತಂತ್ರ) ಯೋಜನೆ ರೂಪಿಸಲು ಉದ್ದೇಶಿಸಿದ್ದು, ಅದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ಸುಮಾರು 10,000 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಇದು ಬಯೋಲಾಜಿಕ್ಸ್ ಮತ್ತು ಬಯೋ ಸಿಮಿಲರ್ಸ್ ದೇಶೀಯ ಉತ್ಪಾದನೆಗೆ ಪೂರಕ ವ್ಯವಸ್ಥೆಯನ್ನು ನಿರ್ಮಿಸಲಿದೆ.

ಯುವಜನತೆಗೆ ಕೌಶಲ್ಯಹೊಂದಿದ ಹೊಸ ವೃತ್ತಿಪರ ಮಾರ್ಗಗಳನ್ನು ಸೃಷ್ಟಿಸಲು ಕೇಂದ್ರ ಹಣಕಾಸು ಸಚಿವರು, ಆರೋಗ್ಯ ವಲಯ ಸೇರಿದಂತೆ ಹಲವು ವಲಯಗಳಲ್ಲಿ ಮಧ್ಯಪ್ರವೇಶಗಳ ಮೂಲಕ ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳು ಈ ಕೆಳಗಿನಂತಿವೆ:

(1) ಹಾಲಿ ಇರುವ ಆರೋಗ್ಯ ಸಂಬಂಧಿ ವೃತ್ತಿಪರರು(ಎಎಚ್ ಪಿ) ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಹೊಸ ಎಎಚ್ ಪಿ ಸಂಸ್ಥೆಗಳನ್ನು ಸ್ಥಾಪಿಸುವುದು. ಇದು ಹತ್ತು ಆಯ್ದ ವಿಭಾಗಗಳನ್ನು ಒಳಗೊಂಡಿದ್ದು, ಅದರಲ್ಲಿ ಆಪ್ಟೋಮೆಟ್ರಿ, ರೇಡಿಯಾಲಜಿ, ಅನಸ್ತೇಶಿಯಾ, ಒಟಿ ತಂತ್ರಜ್ಞಾನ, ಅಪ್ಲೈಡ್ ಸೈಕಾಲಜಿ ಮತ್ತು ಬಿಹೇವಿಯರಲ್ ಹೆಲ್ತ್ ಒಳಗೊಂಡಿದೆ ಹಾಗೂ ಹೆಚ್ಚುವರಿಯಾಗಿ ಮುಂದಿನ 5 ವರ್ಷಗಳಲ್ಲಿ 100,000 ಎಎಚ್ ಪಿಗಳನ್ನು ಸೇರ್ಪಡೆ ಮಾಡಲಾಗುವುದು.

(2) ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ ಬಲಿಷ್ಠ ಆರೈಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವುದಾಗಿ ಹೇಳಿದ್ದು, ಅದರಲ್ಲಿ ಹಿರಿಯ ನಾಗರಿಕರಿಗಾಗಿ ಆರೈಕೆ ಸಂಬಂಧಿ ಸೇವೆಗಳನ್ನು ನಿರ್ಮಿಸಲಾಗುವುದು. ಬಹುಕೌಶಲ್ಯದ ಆರೈಕೆದಾರರನ್ನು ಅಭಿವೃದ್ಧಿಪಡಿಸಲು ಎನ್ ಎಸ್ ಎಪ್ ಕ್ಯೂ ಸಂಬಂಧಿತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಆ ಮೂಲಕ ಪ್ರಮುಖ ಆರೈಕೆ ಮತ್ತು ಸಂಬಂಧಿ ಕೌಶಲ್ಯಗಳನ್ನು ಅಂದರೆ ಯೋಗಕ್ಷೇಮ, ಯೋಗ ಮತ್ತು ವೈದ್ಯಕೀಯ ಹಾಗೂ ಸಹಾಯಕ ಸಾಧನಗಳ ಕಾರ್ಯಾಚರಣೆ ಕೌಶಲ್ಯಗಳನ್ನು ತಿಳಿಸಿಕೊಡಲಾಗುವುದು. ಅಲ್ಲದೆ ಮುಂಬರುವ ವರ್ಷಗಳಲ್ಲಿ 1.5 ಲಕ್ಷ ಆರೈಕೆದಾರರಿಗೆ ತರಬೇತಿ ನೀಡಲಾಗುವುದು.

(3) ಭಾರತವನ್ನು ವೈದ್ಯಕೀಯ ಪ್ರವಾಸೋದ್ಯಮ ಸೇವೆಗಳ ತಾಣವನ್ನಾಗಿ ಉತ್ತೇಜಿಸಲು ಕೇಂದ್ರ ಬಜೆಟ್ ನಲ್ಲಿ ಖಾಸಗಿ ವಲಯದ ಸಹಭಾಗಿತ್ವದೊಂದಿಗೆ 5 ಪ್ರಾದೇಶಿಕ ವೈದ್ಯಕೀಯ ತಾಣಗಳ ಸ್ಥಾಪನೆಗೆ ರಾಜ್ಯಗಳಿಗೆ ನೆರವು ನೀಡಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಈ ತಾಣಗಳು ವೈದ್ಯಕೀಯ, ಶೈಕ್ಷಣಿ ಮತ್ತು ಸಂಶೋಧನಾ ಸೌಕರ್ಯಗಳನ್ನೊಳಗೊಂಡ ಸಮಗ್ರ ಆರೋಗ್ಯ ರಕ್ಷಣಾ ಸಂಕೀರ್ಣಗಳಾಗಿ ಸೇವೆ ಸಲ್ಲಿಸಲಿದೆ. ಅದರಲ್ಲಿ ಆಯುಷ್ ಕೇಂದ್ರಗಳು, ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮ ಉತ್ತೇಜನ ಕೇಂದ್ರಗಳು ಮತ್ತು ರೋಗಗಳ ಪತ್ತೆ, ಆರೈಕೆ ಹಾಗೂ ಪುನರ್ ವಸತಿ ಮೂಲಸೌಕರ್ಯಗಳನ್ನು ಒಳಗೊಂಡ ಆಯುಷ್ ಕೇಂದ್ರಗಳು ಇರಲಿವೆ. ಈ ತಾಣಗಳು ವೈದ್ಯರು ಮತ್ತು ಆರೋಗ್ಯ ಸಂಬಂಧಿ ಆರೈಕೆ ವೃತ್ತಿಪರರು ಸೇರಿದಂತೆ ಆರೋಗ್ಯ ವೃತ್ತಿಪರರಿಗೆ ವಿವಿಧ ಬಗೆಯ ಉದ್ಯೋಗಾವಕಾಶಗಳನ್ನು ಒದಗಿಸಲಿದೆ.

ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಭಾರತದ ಪ್ರಾಚೀನ ಯೋಗ ಪದ್ಧತಿಯನ್ನು ಉಲ್ಲೇಖಿಸಿ, ಈಗಾಗಲೇ ವಿಶ್ವದ ನಾನಾ ಭಾಗಗಳಲ್ಲಿ ಯೋಗವನ್ನು ಗೌರವಿಸಲಾಗುತ್ತಿದೆ ಮತ್ತು ಗೌರವಾನ್ವಿತ ಪ್ರಧಾನಮಂತ್ರಿ ಅವರು, ವಿಶ್ವಸಂಸ್ಥೆಯಲ್ಲಿ ಅದನ್ನು ಗುರುತಿಸಿ ಜಾಗತಿಕ ಮನ್ನನೆಯನ್ನು ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಅಲ್ಲದೆ ಕೋವಿಡ್ ನಂತರ ಆಯುರ್ವೇದ, ಯೋಗದ ರೀತಿಯಲ್ಲೇ ಜಾಗತಿಕ ಸ್ವೀಕೃತಿ ಹಾಗೂ ಮನ್ನಣೆಯನ್ನು ಪಡೆದುಕೊಂಡಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಈ ಬೇಡಿಕೆಯನ್ನು ಪೂರೈಸಲು ಇನ್ನೂ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದ್ದಾರೆ.

ಹಣಕಾಸು ಸಚಿವರು ಈ ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ: (1) ಮೂರು ಹೊಸ ಅಖಿಲ ಭಾರತ ಆಯುರ್ವೇದ ಕೇಂದ್ರಗಳನ್ನು ಸ್ಥಾಪನೆ ಮಾಡುವುದು; (2) ಆಯುಷ್ ಫಾರ್ಮರ್ಸಿಗಳು ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳನ್ನು ಉನ್ನತೀರಿಸಿ, ಗರಿಷ್ಠ ಮಾನದಂಡಗಳ ಪ್ರಮಾಣೀಕರಣ ಪಡೆದುಕೊಳ್ಳುವಂತೆ ಮಾಡುವುದು ಹಾಗೂ ಹೆಚ್ಚಿನ ಕೌಶಲ್ಯಹೊಂದಿದ ಸಂಪನ್ಮೂಲವನ್ನು ಲಭ್ಯವಾಗುವಂತೆ ಮಾಡುವುದು; (3) ಜಾಮ್ ನಗರದಲ್ಲಿನ ಡಬ್ಲ್ಯೂಎಚ್ಒ ಜಾಗತಿಕ ಸಾಂಪ್ರದಾಯಿಕ ಔಷಧಗಳ ಕೇಂದ್ರವನ್ನು ಉನ್ನತೀಕರಿಸಿ ಸಾಕ್ಷ್ಯಾಧಾರಿತ ಸಂಶೋಧನೆ, ತರಬೇತಿ ಮತ್ತು ಸಾಂಪ್ರದಾಯಿಕ ಔಷಧಗಳ ಬಗ್ಗೆ ಜಾಗೃತಿಗೆ ಹೆಚ್ಚಿನ ಒತ್ತು ನೀಡುವುದು.

ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಉತ್ತರ ಭಾರತದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ರಕ್ಷಣಾ ಸಂಸ್ಥೆಗಳ ಕೊರತೆ ಇರುವುದನ್ನು ಪ್ರಸ್ತಾಪಿಸಿದ್ದಾರೆ. ಆದ್ದರಿಂದ ಬಜೆಟ್ ನಲ್ಲಿ ನಿಮ್ಹಾನ್ಸ್-2 ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ ಮತ್ತು ರಾಂಚಿ ಹಾಗೂ ತೇಜ್ ಪುರದ ರಾಷ್ಟ್ರೀಯ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಪ್ರಾದೇಶಿಕ ಉನ್ನತ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ ಜಿಲ್ಲಾ ಆಸ್ಪತ್ರೆಗಳ ತುರ್ತು ಆರೈಕೆಗಳ ಸಾಮರ್ಥ್ಯವನ್ನು ಶೇ 50ರಷ್ಟು ಹೆಚ್ಚಿಸಲು ತುರ್ತು ಮತ್ತು ಟ್ರಾಮಾ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2221509) ವಿಸಿಟರ್ ಕೌಂಟರ್ : 84