ಹಣಕಾಸು ಸಚಿವಾಲಯ
ದಿವ್ಯಾಂಗ ಜನರಿಗೆ ಐಟಿ, ಎವಿಜಿಸಿ ಮತ್ತು ಆತಿಥ್ಯ ವಲಯಗಳಲ್ಲಿ ಸಮಗ್ರ ತರಬೇತಿ ನೀಡಲು ದಿವ್ಯಾಂಗ ಕೌಶಲ್ಯ ಯೋಜನೆ
ದಿವ್ಯಾಂಗ ಸಹಾರಾ ಯೋಜನೆ ಮೂಲಕ ದಿವ್ಯಾಂಗ ಜನರಿಗೆ ಆಧುನಿಕ ರಿಟೇಲ್ ಶೈಲಿಯ ಕೇಂದ್ರಗಳಾಗಿ ಸಹಾಯಕ ತಂತ್ರಜ್ಞಾನ ಮಾರ್ಟ್ ಅನ್ನು ಸ್ಥಾಪನೆ
प्रविष्टि तिथि:
01 FEB 2026 12:41PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು 2026-2027ರ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಾ ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ನ ನಮ್ಮ ದೂರದೃಷ್ಟಿಯು ಪ್ರತಿ ಕುಟುಂಬ, ಸಮುದಾಯ, ಪ್ರದೇಶ ಮತ್ತು ವಲಯವು ಅರ್ಥಪೂರ್ಣ ಭಾಗವಹಿಸುವಿಕೆಗಾಗಿ ಸಂಪನ್ಮೂಲಗಳು, ಸೌಕರ್ಯಗಳು ಮತ್ತು ಅವಕಾಶಗಳನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳುವುದಾಗಿದೆ ಎಂದು ಹೇಳಿದರು. ಈ ಗುರಿಯನ್ನು ಸಾಧಿಸಲು ಹಣಕಾಸು ಸಚಿವರು ದಿವ್ಯಾಂಗ ಜನರಿಗೆ ಈ ಕೆಳಗಿನ ಅಂಶಗಳನ್ನು ಘೋಷಿಸಿದರು:
ದಿವ್ಯಾಂಗಜನ ಕೌಶಲ ಯೋಜನೆ: ಐಟಿ, ಎವಿಜಿಸಿ ವಲಯಗಳು, ಆತಿಥ್ಯ ಮತ್ತು ಆಹಾರ ಮತ್ತು ಪಾನೀಯ ವಲಯಗಳು ದಿವ್ಯಾಂಗರಿಗೆ ಸೂಕ್ತವಾದ ಕಾರ್ಯ-ಆಧಾರಿತ ಮತ್ತು ಪ್ರಕ್ರಿಯೆ ಅಧರಿತ ಪಾತ್ರಗಳನ್ನು ನೀಡುತ್ತವೆ. ಇದು ಪ್ರತಿಯೊಂದು ದಿವ್ಯಾಂಗ ಗುಂಪಿಗೆ ನಿರ್ದಿಷ್ಟವಾದ ಉದ್ಯಮ-ಸಂಬಂಧಿತ ಮತ್ತು ಸಮಗ್ರ ತರಬೇತಿಯ ಮೂಲಕ ಗೌರವಯುತ ಜೀವನೋಪಾಯದ ಅವಕಾಶಗಳನ್ನು ಖಚಿತಪಡಿಸುತ್ತದೆ.
ದಿವ್ಯಾಂಗ ಸಹಾರಾ ಯೋಜನೆ: ಎಲ್ಲಾ ಅರ್ಹ ದಿವ್ಯಾಂಗರಿಗೆ ಉತ್ತಮ ಗುಣಮಟ್ಟದ ಸಹಾಯಕ ಸಾಧನಗಳಿಗೆ ಸಕಾಲಿಕ ಲಭ್ಯತೆಯು ಮೂಲಭೂತ ಅಗತ್ಯವಾಗಿದೆ. ಬಜೆಟ್ (i) ಸಹಾಯಕ ಸಾಧನಗಳ ಉತ್ಪಾದನೆಯನ್ನು ಹೆಚ್ಚಿಸಲು ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ (ALIMCO) ಅನ್ನು ಬೆಂಬಲಿಸಲು, ಸಂಶೋಧನೆ& ಅಬಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆ ಏಕೀಕರಣದಲ್ಲಿ ಹೂಡಿಕೆ ಮಾಡಬಹುದಾಗಿದೆ (ii) ಪಿಎಂ ದಿವ್ಯಾಶ ಕೇಂದ್ರಗಳನ್ನು ಬಲಪಡಿಸಲು ಮತ್ತು ದಿವ್ಯಾಂಗರು ಮತ್ತು ಹಿರಿಯ ನಾಗರಿಕರು ಸಹಾಯಕ ಉತ್ಪನ್ನಗಳನ್ನು ನೋಡಲು, ಪ್ರಯತ್ನಿಸಲು ಮತ್ತು ಖರೀದಿಸಲು ಆಧುನಿಕ ರಿಟೇಲ್ ಶೈಲಿಯ ಕೇಂದ್ರಗಳಾಗಿ ಸಹಾಯಕ ತಂತ್ರಜ್ಞಾನ ಮಾರ್ಟ್‌ಗಳನ್ನು ಸ್ಥಾಪನೆಗೆ ಬೆಂಬಲಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
*****
(रिलीज़ आईडी: 2221436)
आगंतुक पटल : 20
इस विज्ञप्ति को इन भाषाओं में पढ़ें:
Tamil
,
English
,
Urdu
,
हिन्दी
,
Marathi
,
Assamese
,
Bengali
,
Punjabi
,
Gujarati
,
Odia
,
Telugu
,
Malayalam